Benefits of Laughter: ನಗುವಿನ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು

Health Benefits of Laughter: ನಗುವುದರಿಂದ ಶರೀರದಲ್ಲಿ ಇಂಡೋರ್ಫಿನ್ ಹಾರ್ಮೋನ್ ಸ್ರವಿಕೆಯಾಗುತ್ತದೆ. ಇದರಿಂದ ಸಂಪೂರ್ಣ ಶರೀರಕ್ಕೆ ಖುಷಿ, ಸಕಾರಾತ್ಮಕ ಹಾಗೂ ಉತ್ತಮ ಅನುಭೂತಿಯಾಗುತ್ತದೆ. ಈ ಹಾರ್ಮೋನು ನಿಮ್ಮ ಮೂಡ್ ಅನ್ನು ಫ್ರೆಶ್ ಆಗಿ ಇಡುತ್ತದೆ. 

Health Benefits of Laughter: ನಗು ಒಂದು ಭಾವನೆ. ಪ್ರತಿಯೊಬ್ಬರು ನಗು ನಗುತಾ ಜೀವನ ನಡೆಸಬೇಕೆಂದು ಬಯಸುತ್ತಾರೆ. ನಗುವಿನಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ನಗು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ, ನೋವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುತ್ತದೆ. ನಗುವಾಗ ಹೃದಯ ಬಡಿತ, ರಕ್ತದೊತ್ತಡ ಮತ್ತು ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಆಮ್ಲಜನಕ ಮತ್ತು ಪೋಷಣೆ ವರ್ಗಾವಣೆಗಳು ಸಕ್ರಿಯವಾಗುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ನಗುವಿನ ಸಮಯದಲ್ಲಿ ನಮ್ಮ ಶರೀರವು ದೀರ್ಘ ಶ್ವಾಸವನ್ನು ತೆಗೆದುಕೊಂಡು ಹೊರಹಾಕುವ ಕ್ರಿಯೆ ಮಾಡುತ್ತದೆ. ಇದರಿಂದ ದೇಹದಲ್ಲಿ ಸರಿಯಾದ ಮಟ್ಟದಲ್ಲಿ ಆಕ್ಸಿಜನ್ ಸಂಚರಿಸುತ್ತದೆ. ನಗುವುದರಿಂದ ನಮ್ಮ ಶರೀರದಲ್ಲಿ ಆಕ್ಸಿಜನ್ ಮಟ್ಟ ಸರಿಯಾಗಿರುತ್ತದೆ.

2 /7

ದೇಹದಲ್ಲಿನ ರಕ್ತ ಸಂಚಾರ ನಗುವಿನ ಜೊತೆಗೆ ನೇರ ಸಂಬಂಧ ಹೊಂದಿದೆ. ಬಹಿರಂಗವಾಗಿ ನಗುವ ಜನರಲ್ಲಿ ಇತರರ ಹೋಲಿಕೆಯಲ್ಲಿ ರಕ್ತದೊತ್ತಡ ತುಂಬಾ ಚೆನ್ನಾಗಿರುತ್ತದೆ.

3 /7

ಬಹಿರಂಗವಾಗಿ ನಗುವುದರಿಂದ ಕೂಡ ದೇಹದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಶರೀರಕ್ಕೆ ರೋಗದ ವಿರುದ್ಧ ಹೋರಾಡುವ ಬಲ ಸಿಗುತ್ತದೆ. ನಗುವುದರಿಂದ ಶರೀರದಲ್ಲಿ ಆಂಟಿ ವೈರಲ್ ಹಾಗೂ ಸೋಂಕನ್ನು ತಡೆಯುವ ಕೋಶಗಳು ಹೆಚ್ಚಾಗುತ್ತವೆ.

4 /7

ನಗು ಹಲವು ರೀತಿಯ ನೋವುಗಳಿಂದ ಪರಿಹಾರ ಸಿಗುತ್ತದೆ. ಉದಾಹರಣೆಗೆ ಬೆನ್ನು ನೋವು ನಿವಾರಣೆಗೂ ಕೂಡ ಇದು ಸಹಾಯ ಮಾಡುತ್ತದೆ. 

5 /7

ಲಾಫಿಂಗ್ ಥೆರಪಿ ನೋವಿನಿಂದಲೂ ಕೂಡ ಪರಿಹಾರ ನೀಡುತ್ತದೆ. ನೀವು 10 ನಿಮಿಷಗಳ ಕಾಲ ನಗುತ್ತಿದ್ದರೆ, ನೋವಿನಿಂದ ಪರಿಹಾರ ಪಡೆಯಬಹುದು ಅಥವಾ ಸುಲಭವಾಗಿ ನಿದ್ರೆಗೆ ಜಾರಬಹುದು.

6 /7

ನಗುವುದರಿಂದ ಶರೀರದಲ್ಲಿ ಇಂಡೋರ್ಫಿನ್ ಹಾರ್ಮೋನ್ ಸ್ರವಿಕೆಯಾಗುತ್ತದೆ. ಇದರಿಂದ ಸಂಪೂರ್ಣ ಶರೀರಕ್ಕೆ ಖುಷಿ, ಸಕಾರಾತ್ಮಕ ಹಾಗೂ ಉತ್ತಮ ಅನುಭೂತಿಯಾಗುತ್ತದೆ. ಈ ಹಾರ್ಮೋನು ನಿಮ್ಮ ಮೂಡ್ ಅನ್ನು ಫ್ರೆಶ್ ಆಗಿ ಇಡುತ್ತದೆ. 

7 /7

ಲಾಫಿಂಗ್ ಥೆರಪಿಯಿಂದ ಮಾನಸಿಕ ಹಾಗೂ ಶಾರೀರಿಕ ಸಮಸ್ಯೆಗಳಿಂದಲೂ ಪರಿಹಾರ ಸಿಗುತ್ತದೆ. ಹೀಗಾಗಿ ನಗುವುದು ತುಂಬಾ ಅವಶ್ಯಕವಾಗಿದೆ. ಇದರಿಂದ ಡಿಪ್ರೆಶನ್ ದೂರಾಗುತ್ತದೆ. ಬಹಿರಂಗವಾಗಿ ನಗುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಇದರಿಂದ ನೀವು ಒತ್ತಡ ಮುಕ್ತರಾಗುವಿರಿ.