Benefits of Basil Seeds: ನೆಗಡಿ ಕೆಮ್ಮಿಗೆ ಕಾಮಕಸ್ತೂರಿ ಎಲೆಗಳೊಂದಿಗೆ ಹಸಿ ಶುಂಠಿ, ಲವಂಗ ಸೇರಿಸಿ ಕಷಾಯ ಮಾಡಿ ಕುದಿಯಬೇಕು. ಬಾಯಿಯ ದುರ್ಗಂಧ , ವಸಡುಗಳ ನೋವಿಗೆ ಇದರ ಎಲೆ ಸೇವಿಸಬೇಕು.
Amazing Benefits of Basil Seeds: ಕಾಮ ಕಸ್ತೂರಿ ಸಸ್ಯವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ನೋಡಲು ತುಳಸಿಯಂತೆ ಕಾಣುವ ಕಾಮಕಸ್ತೂರಿಯನ್ನು ಪ್ರಾಚೀನ ಕಾಲದಿಂದ ಮನೆಮದ್ದಾಗಿ ಉಪಯೋಗಿಸಿಕೊಂಡು ಬರಲಾಗುತ್ತಿದೆ. ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜಗಳ ಜ್ಯೂಸ್ ಸೇವನೆಯಿಂದ ನೀವು ಉತ್ತಮ ಆರೋಗ್ಯ ಹೊಂದುತ್ತೀರಿ. ಇದನ್ನು ನೀರಿಗೆ ಹಾಕಿ ಕುಡಿಯುವುದರಿಂದ ದೇಹ ತಂಪಾಗುತ್ತದೆ. ಕಾಮಕಸ್ತೂರಿ ಬೀಜಗಳಲ್ಲಿ ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಐರನ್, ವಿಟಮಿನ್ A ಹಾಗೂ B6 ಸಮೃದ್ಧವಾಗಿದೆ. ಇದರ ಬೀಜಗಳ ಸೇವನೆಯಿಂದ ಹಲವಾರು ರೋಗಗಳಿಂದ ಮುಕ್ತಿ ದೊರೆಯುತ್ತದೆ. ಕಾಮಕಸ್ತೂರಿ ಬೀಜಗಳ ಸೇವನೆಯಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕಾಮ ಕಸ್ತೂರಿಯ ಎಲೆ ಹಾಗೂ ಹಸಿ ಶುಂಠಿ ಸೇರಿಸಿ ಚಟ್ನಿ ತಯಾರಿಸಿ ತಿನ್ನುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ. ಮಕ್ಕಳಲ್ಲಿ ಕಾಡುವ ಜಂತು ಹುಳ ಸಮಸ್ಯೆಗೆ 6-8 ಹನಿ ಕಾಮಕಸ್ತೂರಿ ಎಲೆಯ ರಸವನ್ನು ಕುಡಿಸಿದರೆ ಪರಿಹಾರ ದೊರೆಯತ್ತದೆ.
ಉರಿ ಮೂತ್ರ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ.ಈ ಬೀಜಗಳನ್ನು ರಾತ್ರಿ ನೀರಿನಲ್ಲಿ ಎರಡು ಟೀ ಚಮಚ ಕಾಮಕಸ್ತೂರಿ ಬೀಜ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಪ್ರಯೋಜನ ದೊರೆಯುತ್ತದೆ.
ಇಂದು ಬಹುತೇಕರನ್ನು ಮಲಬದ್ಧತೆ, ಮೂಲವ್ಯಾಧಿ ರೋಗಗಳಿಗೆ ಕಾಮಕಸ್ತೂರಿ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಕಲ್ಲು ಸಕ್ಕರೆ ಸೇರಿಸಿ ಶರಬತ್ತು ತಯಾರಿಸಿ ಕುಡಿದರೆ ಪರಿಹಾರ ದೊರೆಯುತ್ತದೆ.
ಕಾಮ ಕಸ್ತೂರಿ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಇಳಿಕೆಯಾಗುತ್ತದೆ. ತೂಕ ನಷ್ಟದ ಪ್ಲ್ಯಾನ್ ಮಾಡುವವರು ತಮ್ಮ ಡಯೆಟ್ನಲ್ಲಿ ಇದರ ಜ್ಯೂಸ್ಅನ್ನು ಸೇರಿಸಿಕೊಳ್ಳಬೇಕು.
ನೆಗಡಿ, ಕೆಮ್ಮಿಗೆ ಕಾಮಕಸ್ತೂರಿ ಎಲೆಗಳೊಂದಿಗೆ ಹಸಿ ಶುಂಠಿ, ಲವಂಗ ಸೇರಿಸಿ ಕಷಾಯ ಮಾಡಿ ಕುದಿಯಬೇಕು. ಬಾಯಿಯ ದುರ್ಗಂಧ , ವಸಡುಗಳ ನೋವಿಗೆ ಇದರ ಎಲೆ ಸೇವಿಸಬೇಕು.