Beekeeping At Home: ನೌಕರಿಯ ವಿಷಯದಲ್ಲಿ ಸಾಕಷ್ಟು ಅಸ್ಥಿರತೆ ಹೊಂದಿರುವ ಇಂದಿನ ಕಾಲದಲ್ಲಿ ನೀವೂ ಕೂಡ ನಿಮ್ಮ ಸ್ವತಂತ್ರ ಉದ್ಯಮವನ್ನು ಆರಂಭಿಸಲು ಬಯಸುತ್ತಿದ್ದರೆ, ಈ ಒಳ್ಳೆಯ ಉದ್ಯಮ ಪರಿಕಲ್ಪನೆ ಕೇವಲ ನಿಮಗಾಗಿ. ನೀವು ಸುಲಭವಾಗಿ ಈ ಉದ್ಯಮವನ್ನು ಆರಂಭಿಸಿ ಲಕ್ಷಾಂತರ ಗಳಿಕೆ ಮಾಡಬಹುದು.
Beekeeping At Home: ನೌಕರಿಯ ವಿಷಯದಲ್ಲಿ ಸಾಕಷ್ಟು ಅಸ್ಥಿರತೆ ಹೊಂದಿರುವ ಇಂದಿನ ಕಾಲದಲ್ಲಿ ನೀವೂ ಕೂಡ ನಿಮ್ಮ ಸ್ವತಂತ್ರ ಉದ್ಯಮವನ್ನು ಆರಂಭಿಸಲು ಬಯಸುತ್ತಿದ್ದರೆ, ಈ ಒಳ್ಳೆಯ ಉದ್ಯಮ ಪರಿಕಲ್ಪನೆ ಕೇವಲ ನಿಮಗಾಗಿ. ನೀವು ಸುಲಭವಾಗಿ ಈ ಉದ್ಯಮವನ್ನು ಆರಂಭಿಸಿ ಲಕ್ಷಾಂತರ ಗಳಿಕೆ ಮಾಡಬಹುದು. ಜೇನು ಸಾಕಣೆ ಮತ್ತು ವ್ಯಾಪಾರವೇ ಆ ಉದ್ಯಮ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರವು ನಿಮಗೆ ಸಹಾಯಧನವನ್ನು ಸಹ ನೀಡುತ್ತದೆ. ಈ ವ್ಯವಹಾರದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-New Packaging Law: ಎಫ್ಎಂಸಿಜಿ ಕಂಪನಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಹೂಡಿಕೆಗೆ ಸಲಹೆ ನೀಡುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1.ರಾಷ್ಟ್ರೀಯ ಜೇನು ಮಂಡಳಿಯು ನಬಾರ್ಡ್‌ನ ಸಹಯೋಗದೊಂದಿಗೆ ಭಾರತದಲ್ಲಿ ಜೇನುಸಾಕಣೆ ಉದ್ಯಮಕ್ಕಾಗಿ ಲಾಭದಾಯಕ ಯೋಜನೆಗಳನ್ನು ರೂಪಿಸಿದೆ. ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಸರ್ಕಾರವೂ ಸಿದ್ಧವಿದೆ. ಇದಕ್ಕಾಗಿ ನೀವು ಹತ್ತಿರದ ರಾಷ್ಟ್ರೀಯ ಜೇನುನೊಣ ಮಂಡಳಿಯನ್ನು ಸಂಪರ್ಕಿಸಬಹುದು. ಜೇನುಸಾಕಣೆಗೆ ಸರಕಾರ ಶೇ.80-85ರಷ್ಟು ಸಹಾಯಧನ ನೀಡುತ್ತದೆ.
2. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 'ಬೆಳೆ ಉತ್ಪಾದಕತೆಯನ್ನು ಸುಧಾರಿಸಲು ಜೇನುಸಾಕಣೆಯ ಅಭಿವೃದ್ಧಿ' ಎಂಬ ಕೇಂದ್ರ ಯೋಜನೆಯನ್ನು ಪ್ರಾರಂಭಿಸಿದೆ ಎಂಬುದು ಇಲ್ಲಿ ಗಮನಾರ್ಹ. ಕ್ಷೇತ್ರದ ಅಭಿವೃದ್ಧಿ, ಉತ್ಪಾದಕತೆಯನ್ನು ಹೆಚ್ಚಿಸುವುದು, ತರಬೇತಿ ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ
3. ಜೇನುನೊಣಗಳಿಂದ ಜೇನುತುಪ್ಪವನ್ನು ಹೊರತುಪಡಿಸಿ, ಈ ವ್ಯವಹಾರದ ಅಡಿಯಲ್ಲಿ ನೀವು ಅನೇಕ ಇತರ ಉತ್ಪನ್ನಗಳನ್ನು ಸಹ ಉತ್ಪಾದಿಸಬಹುದು.ಇದು ಜೇನುಮೇಣ, ರಾಯಲ್ ಜೆಲ್ಲಿ, ಪ್ರೋಪೋಲಿಸ್ ಅಥವಾ ಬೀಸ್ ಗಮ್ ಮತ್ತು ಬೀ ಪರಾಗವನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಉತ್ಪನ್ನಗಳು ಮನುಷ್ಯರಿಗೆ ತುಂಬಾ ಪ್ರಯೋಜನಕಾರಿ ಮತ್ತು ಮಾರುಕಟ್ಟೆಯಲ್ಲಿ ತುಂಬಾ ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಅಂದರೆ, ಇದರಲ್ಲಿ ನೀವು ಹಲವು ರೀತಿಯಲ್ಲಿ ಆದಾಯ ಪಡೆದುಕೊಳ್ಳಬಹುದು.
4. ಇದಕ್ಕಾಗಿ ನೀವು ಮಾಡಬೇಕಾದ ಕೆಲಸಗಳಲ್ಲಿ ಮೊದಲನೆಯದಾಗಿ ವೃತ್ತಿಪರ ಸಂಘಗಳಿಂದ ಈ ಕುರಿತು ಮಾಹಿತಿಯನ್ನು ಪಡೆದುಕೊಳ್ಳಿ. ಇದಲ್ಲದೆ, ಜೇನುನೊಣಗಳ ಸ್ಥಳ ಮತ್ತು ನಿಮ್ಮ ಪ್ರದೇಶದಲ್ಲಿ ಉತ್ಪತ್ತಿಯಾಗುವ ಜೇನುತುಪ್ಪದ ಪ್ರಕಾರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ. ಬಳಿಕ ಮೊದಲ ಸುಗ್ಗಿಯ ನಂತರ ಜೇನುಸಾಕಣೆಯ ಕೆಲಸದ ಮೌಲ್ಯಮಾಪನ ಮಾಡಬೇಕು. ಇದಲ್ಲದೆ, ನಿಮ್ಮ ಜೇನುನೊಣಗಳು ಮತ್ತು ಜೇನುಗೂಡುಗಳ ಆರೋಗ್ಯವನ್ನು ಪರೀಕ್ಷಿಸಬೇಕು. ಜೇನುನೊಣ ಸಂಬಂಧಿತ ಉತ್ಪನ್ನಗಳ ಮಾರಾಟಕ್ಕಾಗಿ ನಿಮ್ಮ ರಾಜ್ಯದ ರೆವಿನ್ಯೂ ಇಲಾಖೆಯನ್ನು ಸಂಪರ್ಕಿಸಿ. ಇದರಿಂದ ನೀವು ಉತ್ತಮ ಹಣವನ್ನು ಪಡೆಯಬಹುದು.
5. ಜೇನು ಸಾಕಾಣಿಕೆಯಿಂದ ಲಕ್ಷಗಟ್ಟಲೆ ಆದಾಯ ಗಳಿಸಬಹುದು. ಜೇನುನೊಣಗಳನ್ನು ಸಂಗ್ರಹಿಸಿ ಅವುಗಳಿಂದ ತಯಾರಿಸಿದ ಜೇನುತುಪ್ಪ ಮತ್ತು ಮೇಣವನ್ನು ಮಾರಾಟ ಮಾಡುವ ಮೂಲಕ ನೀವು ಉತ್ತಮ ಲಾಭ ಗಳಿಸಬಹುದು. ಜೇನುಸಾಕಣೆಯು ಕೃಷಿ ಮತ್ತು ತೋಟಗಾರಿಕೆ ಉತ್ಪಾದನೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಈ ಕಾರಣಕ್ಕಾಗಿಯೇ ಸರ್ಕಾರವೂ ಈ ವ್ಯವಹಾರಕ್ಕೆ ಸಾಕಷ್ಟು ಧನಸಹಾಯ ನೀಡಿ ನಿಮ್ಮನ್ನು ಉತ್ತೇಜಿಸುತ್ತಿದೆ.