Bad Food Combinations: ಹಾಲಿನ ಜೊತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ಕಾರಣವಾಗಬಹುದು!

                                                       

Bad Food Combinations: ಹಾಲು ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಆದರೆ,  ಹಾಲಿನೊಟ್ಟಿಗೆ ಕೆಲವು ಆಹಾರಗಳ ಸೇವನೆಯನ್ನು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಹಾಲಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಅದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬಿರುತ್ತದೆ. ಹಾಗಾಗಿ ಕೆಲವು ಆಹಾರಗಳನ್ನು ಹಾಲಿನೊಂದಿಗೆ ಸೇವಿಸದಂತೆ ಸಲಹೆ ನೀಡಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮೀನು ಮತ್ತು ಹಾಲು ಎರಡೂ ಕೂಡ ಆರೋಗ್ಯ ವೃದ್ಧಿ ಉತ್ತಮ ಆಹಾರಗಳು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಮೀನು ಮತ್ತು ಹಾಲು ಎರಡನ್ನೂ ಒಟ್ಟಿಗೆ ತಿನ್ನುವುದು ನಿಮ್ಮ ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. 

2 /5

ಹಾಲು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ ಆದರೆ ಬಾಳೆಹಣ್ಣಿನಲ್ಲಿ ಪಿಷ್ಟವಿದೆ. ಆದ್ದರಿಂದ, ನೀವು ಈ ಎರಡನ್ನು ಒಟ್ಟಿಗೆ ಸೇವಿಸಿದರೆ, ಅದು ಜೀರ್ಣಕಾರಿ ಸಮಸ್ಯೆಗಳು, ಹೊಟ್ಟೆ ಉಬ್ಬರ, ಆಯಸದಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ, ಬಾಳೆಹಣ್ಣು ಮತ್ತು ಹಾಲನ್ನು ಅಪ್ಪಿತಪ್ಪಿಯೂ ಸಹ ಒಟ್ಟಿಗೆ ಸೇವಿಸಲೇ ಬಾರದು.  

3 /5

ಹಾಲು ಮತ್ತು ಕರಬೂಜ ಹಣ್ಣನ್ನು ಒಟ್ಟಿಗೆ ಸೇವಿಸುವುದರಿಂದಲೂ ಅನಾರೋಗ್ಯ ಕಾಡಬಹುದು. ಇದು ವಾಕರಿಕೆ, ವಾಂತಿಯ ಜೊತೆಗೆ ಜೀರ್ಣಾಂಗ ವ್ಯವಸ್ಥೆಯೂ ಹದಗೆಡಬಹುದು. 

4 /5

ಮೂಲಂಗಿ ಮತ್ತು ಹಾಲನ್ನು ಒಟ್ಟಿಗೆ ತಿನ್ನುವುದರಿಂದ ಉದರ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 

5 /5

ಹಾಲಿನೊಂದಿಗೆ ಕಿತ್ತಳೆ, ನಿಂಬೆ ಅಥವಾ ದ್ರಾಕ್ಷಿಯಂತಹ  ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಇದು ಗ್ಯಾಸ್, ಎದೆಯುರಿ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು.  ಹಾಗಾಗಿ ಸಿಟ್ರಸ್ ಹಣ್ಣುಗಳೊಂದಿಗೆ ಎಂದಿಗೂ ಕೂಡ ಹಾಲನ್ನು ಸೇವಿಸದಂತೆ ಸಲಹೆ ನೀಡಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.