Astrology: ಬಹಳ ಸುಲಭವಾಗಿ ಜನರನ್ನು ತಮ್ಮತ್ತ ಸೆಳೆಯುತ್ತಾರೆ ಈ 5 ರಾಶಿಯ ಜನ

                                           

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ 12 ರಾಶಿಯವರ ಗುಣ, ಸ್ವಭಾವದ ಬಗ್ಗೆಯೂ ವರ್ಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳಲ್ಲಿ ಐದು ರಾಶಿಯ ಜನರು ತಮ್ಮ ಮಾತಿನಿಂದಲೇ ಇತರರನ್ನು ತಮ್ಮತ್ತ ಆಕರ್ಷಿಸುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ರಾಶಿಗಳು ಯಾವುವು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮಿಥುನ ರಾಶಿಯ ಅಧಿಪತಿ ಬುಧ. ಈ ರಾಶಿಯವರನ್ನು ವಾಕ್ ಸಮರದಲ್ಲಿ ಸೋಲಿಸುವುದು ಕಷ್ಟ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಇವರ ಮಾತಿನಲ್ಲಿ ಮ್ಯಾಜಿಕ್ ಇದ್ದು ಇವರು ಇತರರನ್ನು ಬಹಳ ಬೇಗ ಮೋಡಿ ಮಾಡುತ್ತಾರೆ ಎನ್ನಲಾಗುತ್ತದೆ. 

2 /5

ಸಿಂಹ ರಾಶಿಗೆ ಗ್ರಹಗಳ ರಾಜ ಸೂರ್ಯನೇ ಅಧಿಪತಿ. ಈ ರಾಶಿಯವರ ಧ್ವನಿಗೆ ಇತರರನ್ನು ನಡುಗಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಇವರ ಮಾತಿಗೆ ಎಂತಹವರೇ ಆದರೂ ಬಹಳ ಸುಲಭವಾಗಿ ತಲೆದೂಗುತ್ತಾರೆ ಎಂದು ಹೇಳಲಾಗುತ್ತದೆ. 

3 /5

ಗ್ರಹಗಳ ರಾಜಕುಮಾರನಾದ ಬುಧ ಕನ್ಯಾ ರಾಶಿಯ ಅಧಿಪತಿ ಆಗಿದ್ದಾರೆ. ಕನ್ಯಾ ರಾಶಿಯವರ ಸ್ವಭಾವಕ್ಕೆ ಎಂತಹವರೇ ಆದರೂ ಬೆಣ್ಣೆಯಂತೆ ಕರಾಗುತ್ತಾರೆ. ಇವರು ಎಂತಹ ಕಠಿಣ ಸವಾಲನ್ನೂ ಕೂಡ ಬಹಳ ಸುಲಭವಾಗಿ ಇತರರಿಗೆ ಅರ್ಥ ಮಾಡಿಸಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ. 

4 /5

ಐಷಾರಾಮಿ ಜೀವನಕಾರಕನಾದ ಶುಕ್ರ ಈ ರಾಶಿಯ ಅಧಿಪತಿ. ತುಲಾ ರಾಶಿಯವರು ಎಂತಹುದ್ದೇ ಸಂದರ್ಭದಲ್ಲಿ ಯಾವುದೇ ವಿಚಾರದಲ್ಲಿ ತಮ್ಮ ಮಾತನ್ನು ಇತರರ ಮುಂದೆ ತುಂಬಾ ಸುಲಭವಾಗಿ ಪ್ರಸ್ತುತಪಡಿಸಿ, ಅವರ ಮನಸ್ಸನ್ನು ಗೆಲ್ಲುತ್ತಾರೆ. ಇವರಿಗೆ ಇವರ ಮಾತೇ ಬಂಡವಾಳ.

5 /5

ದೇವಗುರು ಬೃಹಸ್ಪತಿಯನ್ನು ಧನು ರಾಶಿಯ ಅಧಿಪತಿ ಎಂದು ಹೇಳಲಾಗುತ್ತದೆ. ಈ ರಾಶಿಯವರ ಮಾತೇ ಮಧುರ. ಯಾರಿಗೇ ಆದರೂ ಅವರೊಂದಿಗೆ ಒಂದೆರಡು ಕ್ಷಣವಾದರೂ ಮಾತನಾಡಬೇಕು ಎಂಬ ಆಸೆ ಮೂಡುತ್ತದೆ. ಇವರ ಮಾತೇ ಕೆಲವರ ಸಮಸ್ಯೆಗಳಿಗೆ ಪರಿಹಾರ ಎಂತಲೂ ಬಣ್ಣಿಸಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.