ಅನುಷ್ಕಾ ಶರ್ಮಾ ತಮ್ಮ ಚಿತ್ರರಂಗ ಜೀವನವನ್ನು ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಅವರೊಂದಿಗೆ 'ರಬ್ ನೆ ಬಾನಾ ಡಿ ಜೋಡಿ' ಚಿತ್ರದೊಂದಿಗೆ ಪ್ರಾರಂಭಿಸಿದರು.
ನವದೆಹಲಿ: ಬಾಲಿವುಡ್ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಅನುಷ್ಕಾ ಶರ್ಮಾ ತಮ್ಮ 32ನೇ ಹುಟ್ಟುಹಬ್ಬವನ್ನು ಮೇ 1ರಂದು ಆಚರಿಸಿಕೊಂಡರು. ಮಾಡೆಲಿಂಗ್ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ ಅನುಷ್ಕಾ ಶರ್ಮಾ ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಅವರೊಂದಿಗೆ 'ರಬ್ ನೆ ಬಾನಾ ಡಿ ಜೋಡಿ' ಚಿತ್ರದೊಂದಿಗೆ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು. ಅನುಷ್ಕಾ ಶರ್ಮಾ ಅವರ ಭವಿಷ್ಯ ಈ ಚಿತ್ರದಿಂದಲೇ ಹೊರಬಂದಿದ್ದು ಹಾಗೂ ಬಾಲಿವುಡ್ನ ಬಾಗಿಲುಗಳು ಆಕೆಗಾಗಿ ಸಂಪೂರ್ಣವಾಗಿ ತೆರೆದವು. ಇಂದು ಅನುಷ್ಕಾ ಶರ್ಮಾ ಯಶಸ್ವಿ ಬಾಲಿವುಡ್ ನಟಿ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಕೂಡ.
'ಬದ್ಮಾಶ್ ಕಂಪನಿ' ಫ್ಲಾಪ್ ಆದ ನಂತರ ಅನುಷ್ಕಾ ಶರ್ಮಾ ಅವರ 'ಬ್ಯಾಂಡ್ ಬಾಜಾ ಬರಾತ್' ಗಲ್ಲಾಪೆಟ್ಟಿಗೆಯಲ್ಲಿ ಬಂಪರ್ ಗಳಿಸಿತು. ನಂತರ ಅನುಷ್ಕಾ ಶರ್ಮಾ 'ಪಟಿಯಾಲ ಹೌಸ್', 'ಪಿಕೆ', 'ಸುಲ್ತಾನ್', 'ಸಂಜು' ಮುಂತಾದ ಅದ್ಭುತ ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ ಅನುಷ್ಕಾ ಶರ್ಮಾ ಅವರ ಕೊನೆಯ ಕೆಲವು ಚಿತ್ರಗಳಾದ 'ಸುಯಿ ಧಾಗಾ' ಮತ್ತು 'ಝೀರೋ' ಬಹಳ ನಿರಾಶಾದಾಯಕ ಪ್ರದರ್ಶನ ನೀಡಿತು. ಅನುಷ್ಕಾ ಶರ್ಮಾ ಈ ವರ್ಷ 'ಪಟಾಲ್ ಲೋಕ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಗಳಲ್ಲದೆ ಅನುಷ್ಕಾ ಶರ್ಮಾ ಒಬ್ಬ ಉದ್ಯಮಿ ಕೂಡ ಆಗಿದ್ದು ಅವರು ನುಶ್ ಎಂಬ ಮಲ್ಟಿ-ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ.
ಅನುಷ್ಕಾ ಶರ್ಮಾ ಎರಡು ವರ್ಷಗಳ ಅಫೇರ್ ನಂತರ 2017ರಲ್ಲಿ ವಿರಾಟ್ ಕೊಹ್ಲಿಯನ್ನು ವಿವಾಹವಾದರು. ಇಬ್ಬರೂ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅನುಷ್ಕಾ ಶರ್ಮಾ ಪ್ರಸ್ತುತ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ಲಾಕ್ ಡೌನ್ ಆನಂದಿಸುತ್ತಿದ್ದಾರೆ.
ಬನ್ನಿ ಅನುಷ್ಕಾ ಶರ್ಮಾರ 10 ಸ್ಟನ್ನಿಂಗ್ ಔಟ್ ಫಿಟ್ಸ್ ನೋಡೋಣ...
(ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಅನುಷ್ಕಾ ಶರ್ಮಾ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)