ʼನನಗೆ ಇದು ಎರಡನೇ ಮದುವೆ..ʼ ಮದುವೆ ವದಂತಿ ಮಧ್ಯವೇ ಸೆನ್ಸೇಷನಲ್‌ ಹೇಳಿಕೆ ಕೊಟ್ಟ ಆಂಕರ್ ಅನುಶ್ರೀ! ‌

Anchor Anushree On Marriage: ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್‌ವುಡ್‌ ನಟಿ, ಆಂಕರ್‌ ಅನುಶ್ರೀ ಮದುವೆಯೇ ಸದ್ಯದ ಚರ್ಚೆ.. ಈ ಮಂಗಳೂರು ಚೆಲುವೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದು ಸಾಕಷ್ಟು ಅಭಿಮಾನಿಗಳ ಪ್ರಶ್ನೆ.. ಇದೀಗ ಅನು ಮದುವೆ ಬಗ್ಗೆ ಸೆನ್ಸೇಷನಲ್‌ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ.. 
 

1 /6

ಬಣ್ಣದ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ನಾಮರ ಪಟ್ಟಿಯಲ್ಲಿ ಅನುಶ್ರೀಯೂ ಇದ್ದಾರೆ.. ಚಿಕ್ಕ ವಯಸ್ಸಿನಲ್ಲೇ ಹಲವಾರು ನೋವುಗಳನ್ನು ಎದುರಿಸಿ ಈ ಮಟ್ಟಕ್ಕೆ ಬಂದು ನಿಂತ ಹೆಣ್ಣು ಮಗಳು ಅನುಶ್ರೀ ಎಂದರೇ ಕನ್ನಡಿಗರ ಹೆಮ್ಮೆ..   

2 /6

ಆದರೆ ಆಂಕರ್‌ ಅನುಶ್ರೀ ವಯಸ್ಸಾದರೂ ಯಾಕೆ ಮದುವೆಯಾಗುತ್ತಿಲ್ಲ.. ಎನ್ನುವುದೇ ಹಲವಾರು ಜನರ ಪ್ರಶ್ನೆ.. ಅದರಲ್ಲೂ ಸೋಷಿಯಲ್‌ ಮಿಡಿಯಾದಲ್ಲಿ ಅವರಿಗೆ ಈಗಾಗಲೇ ವದಂತಿ ಮದುವೆ ಮಾಡಿಸಿದ್ದಾರೆ.. ಆದರೆ ಅವೆಲ್ಲವೂ ಸತ್ಯಕ್ಕೆ ಸಮೀಪಿಸಿರಲಿಲ್ಲ.. ಬರೀ ಊಹಾಪೋಹಗಳಾಗಿದ್ದವು..   

3 /6

ಇನ್ನು ಇದೀಗ ಅನುಶ್ರೀ ಮದುವೆಯಾಗಲಿದ್ದಾರೆ.. ಹೌದು ವೈವಾಹಿಕ ಜೀವನ ಬೇಕೋ ಬೇಡವೋ ಎನ್ನುವ ಕನ್‌ಫ್ಯೂಜನ್‌ನಲ್ಲಿದ್ದ ಅನು ಸದ್ಯ ಮದುವೆಗೆ ರೆಡಿಯಾಗಿದ್ದಾರೆ.. ಇವರ ಮದುವೆ ಯಾವಾಗ ಎಂದು ಕಾಯುತ್ತಿದ್ದವರಿಗೆ ಗುಡ್‌ ನ್ಯೂಸ್‌ ಸಿಕ್ಕಂತಾಗಿದೆ...   

4 /6

ಇತ್ತೀಚೆಗೆ ಅನುಶ್ರೀ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು.. ಅದರಲ್ಲಿ "ಹೌದು ನಾನು ಮದುವೆಗೆ ರೆಡಿಯಾಗಿದ್ದೇನೆ.. ಆದರೆ ಕೆಲವೊಮ್ಮೆ ನನ್ನಮ್ಮನ ಪರಿಸ್ಥಿತಿ ನೋಡಿದಾಗ ಭಯವೂ ಆಗುತ್ತೆ.. ಹಾಗಂತ ಎಲ್ಲರ ಜೀವನದಲ್ಲೂ ಮದುವೆ ಕಹಿ ಘಟನೆಯೇ ಆಗುವುದಿಲ್ಲ.. ಸುಮಧುರ ನೆನಪು ಕೂಡ ಆಗಬಹುದು... ಹಾಗಾಗಿ ನಾನು ಮದುವೆಯಾಗಲು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ..  

5 /6

ಇದರೊಂದಿಗೆ ಎಲ್ಲರಲ್ಲೂ ನನ್ನದೊಂದು ವಿನಂತಿ ಏನೆಂದರೇ ಇದು ನನಗೆ ಎರಡನೇಅಥವಾ ಮೂರನೇ ಮದುವೆಯಂತೂ ಖಂಡಿತ ಅಲ್ಲ.. ನನಗೆ ಇನ್ನೂ ಮದುವೆಯೇ ಆಗಿಲ್ಲ.. ಇದನ್ನು ಎಲ್ಲರಿಗೂ ಸ್ಪಷ್ಟವಾಗಿ ಹೇಳುತ್ತಿದ್ದೇನೆ,, ತುಂಬಾ ಜನ ಈಗಾಗಲೇ ನನಗೆ ಮದುವೆ ಮಾಡಿಸಿಬಿಟ್ಟೀದ್ದಿರಿ.. ಆದರೆ ಸತ್ಯ ಏನೆಂದರೇ ನನಗೆ ನಿಜವಾಗಿಯೂ ಇನ್ನೂ ಮದುವೆಯಾಗಿಲ್ಲ ಎಂದು ಅನುಶ್ರೀ ಹೇಳಿದ್ದಾರೆ..   

6 /6

ಅಲ್ಲದೇ "ನಾನು ಮದುವೆಗೆ ಒಪ್ಪಿಗೆ ನೀಡಿದ್ದೇನೆ.. ನನಗಿನ್ನೂ ಸೂಕ್ತವಾದ ಹುಡುಗ ಸಿಕ್ಕಿಲಲ್...‌ ದಯವಿಟ್ಟು ನೀವೇ ಯಾರಾದರೂ ನನ್ನ ಡ್ರೀಮ್‌ ಬಾಯ್‌ನ್ನು ಹುಡುಕಿಕೊಡಿ ನಾನು ಆದಷ್ಟು ಬೇಗ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ..