ಮನುಷ್ಯರ ತಪ್ಪಿನಿಂದ ಏಲಿಯನ್ಸ್ ಗಳಿಗೆ ಕೋಪ: 2022ರಲ್ಲಿ ಜಗತನ್ನು ನಾಶಮಾಡಲು ಪ್ಲಾನ್..!?

ಬಯೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಅನ್ಯಗ್ರಹ ಜೀವಿಗಳು ಶೀಘ್ರದಲ್ಲೇ ಭೂಮಿಗೆ ಬರಲಿವೆ ಎಂದು ಹೇಳಲಾಗಿದೆ.

ನೀವು ಸಿನಿಮಾಗಳಲ್ಲಿ ಏಲಿಯನ್ಸ್ ಗಳನ್ನು ನೋಡಿರಬೇಕು. ಆದರೆ ನಿಜವಾಗಿಯೂ ಏಲಿಯನ್ಸ್ ಇದ್ದಾರೆಯೇ ಎಂಬ ಬಗ್ಗೆ ವಿಜ್ಞಾನಿಗಳು ಅನೇಕ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅನ್ಯಗ್ರಹ ಜೀವಿಗಳ ಬಗ್ಗೆ ವಿವಿಧ ರೀತಿಯಲ್ಲಿ ಪ್ರತಿಪಾದಿಸಲಾಗಿದೆ. ಬಯೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದಲ್ಲಿ ಅನ್ಯಗ್ರಹ ಜೀವಿಗಳು ಶೀಘ್ರದಲ್ಲೇ ಭೂಮಿಗೆ ಬರಲಿವೆ ಎಂದು ಹೇಳಲಾಗಿದೆ. ಹೀಗಾಗಿ ಮನುಷ್ಯರು ಎಲಿಯನ್ಸ್ ಗಳ ವಿರುದ್ಧದ ಯುದ್ಧಕ್ಕೆ ಸಿದ್ಧರಾಗಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸಂಶೋಧನೆಯೊಂದರ ಪ್ರಕಾರ, ಬಾಹ್ಯಾಕಾಶ ಉದ್ಯಮವು ಭವಿಷ್ಯದಲ್ಲಿ ಭಾರಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಇವು ಭೂಮಿಯ ಮೇಲೆ ವಾಸಿಸುವ ಜೀವಿಗಳಿಗೆ ಹಾನಿಕಾರಕವಾಗಿದೆ. ಈ ಅಧ್ಯಯನವನ್ನು ಅಂತಾರಾಷ್ಟ್ರೀಯ ಜರ್ನಲ್ ಬಯೋಸೈನ್ಸ್‌ನಲ್ಲಿ ಪ್ರಕಟಿಸಲಾಗಿದೆ.

2 /5

ಪ್ರಪಂಚದಾದ್ಯಂತದ ಬಾಹ್ಯಾಕಾಶ ಸಂಸ್ಥೆಗಳು ಅನ್ಯಗ್ರಹ ಜೀವಿಗಳು ಇವೆಯೇ ಎಂಬುದರ ಬಗ್ಗೆ ಹುಡುಕುತ್ತಿವೆ. ಹೊಸ ಅಧ್ಯಯನದ ಪ್ರಕಾರ, ಬಾಹ್ಯಾಕಾಶ ಪರಿಶೋಧನೆಯಲ್ಲಿನ ಹೆಚ್ಚಳದಿಂದ ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ನುಸುಳುವ ಅಪಾಯವಿದೆಯಂತೆ. ಮಾನವ ಬಾಹ್ಯಾಕಾಶ ನೌಕೆಯು ಅಜಾಗರೂಕತೆಯಿಂದ ಅನ್ಯಗ್ರಹ ಜೀವಿಗಳನ್ನು ಮತ್ತೊಂದು ಗ್ರಹದಿಂದ ಭೂಮಿಗೆ ತರಬಹುದು ಎಂದು ವಿಜ್ಞಾನಿಗಳು ಪ್ರತಿಪಾದಿಸುತ್ತಿದ್ದಾರೆ.

3 /5

ಈ ಸಿದ್ಧಾಂತವು ಮಾನವೀಯತೆಯ ಇತಿಹಾಸವನ್ನು ಆಧರಿಸಿದೆ. ಏಕೆಂದರೆ ಈ ಹಿಂದೆಯೂ ಇಂತಹ ಘಟನೆಗಳು ಮುಂಚೂಣಿಗೆ ಬಂದಿವೆ. ಮಾನವರ ಕಾರಣದಿಂದ ಇಂತಹ ಪ್ರಾಣಿಗಳು ಭೂಮಿಯ ಅನೇಕ ಭಾಗಗಳಿಗೆ ಆಗಮಿಸಿದ್ದವು. ಅವುಗಳು ಅಲ್ಲಿನ ಸ್ಥಳೀಯ ಜಾತಿಗಳನ್ನು ನಾಶಮಾಡಿದ್ದವು. ಇದಕ್ಕೆ ಉದಾಹರಣೆಯೆಂದರೆ ಸ್ಟಿಂಕ್ ಬಗ್. ಇದು ಪೂರ್ವ ಏಷ್ಯಾದಿಂದ ಶಿಪ್ಪಿಂಗ್ ಕ್ರೇಟ್‌ಗಳಲ್ಲಿ ಅಮೆರಿಕವನ್ನು ತಲುಪಿತು.

4 /5

ಹೊಸ ಅಧ್ಯಯನವು ಅನ್ಯಲೋಕದ ಜಾತಿಗಳೊಂದಿಗೆ ಅದೇ ರೀತಿ ಸಂಭವಿಸಬಹುದು ಅಥವಾ ಮಾನವರು ಭೂಮಿಯ ಜೀವಿಗಳ ಮೂಲಕ ಇತರ ಗ್ರಹಗಳನ್ನು ಕಲುಷಿತಗೊಳಿಸಬಹುದು ಎಂದು ತೋರಿಸುತ್ತದೆ. ಸಂಶೋಧಕರು ತಮ್ಮ ಲೇಖನದಲ್ಲಿ ಈ ಬಗ್ಗೆ ಅನೇಕ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ.  ಬಾಹ್ಯಾಕಾಶ ಪರಿಶೋಧನೆ ಮತ್ತು ವಾಣಿಜ್ಯ ಬಳಕೆಯ ಯೋಜನೆಯು ವೇಗವಾಗಿ ವಿಸ್ತರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಜೈವಿಕ ಸುರಕ್ಷತಾ ಕ್ರಮಗಳನ್ನು ಮತ್ತು ಅಪಾಯದ ಮೌಲ್ಯಮಾಪನವನ್ನು ಸುಧಾರಿಸಬೇಕಾಗಿದೆ’ ಅಂತಾ ಹೇಳಿದ್ದಾರೆ.

5 /5

ಈ ಹಿಂದೆ ಏಲಿಯನ್ ಗಳ ಬಗ್ಗೆ ವರದಿಯೊಂದು ಮುನ್ಸೂಚನೆ ನೀಡಿತ್ತು. ಇದರಲ್ಲಿ ಅನ್ಯಗ್ರಹ ಜೀವಿಗಳು ಮೇ 2022ರಲ್ಲಿ ಭೂಮಿಯನ್ನು ಸಮೀಪಿಸಲಿದ್ದಾರೆ ಮತ್ತು ಈ ಸಮಯದಲ್ಲಿ ಅವು ಅಮೆರಿಕದೊಂದಿಗೆ ‘ಅಂತರ್ ಆಯಾಮದ ಯುದ್ಧ’ವನ್ನು ಹೊಂದುತ್ತವೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಮೊದಲ ಬಾರಿಗೆ ಅನ್ಯಗ್ರಹ ಜೀವಿಗಳು ಮೇ 24, 2022ರಂದು ಭೂಮಿಯ ಮೇಲೆ ಕಾಲಿಡಲಿದ್ದಾರೆ ಮತ್ತು ಭಯಾನಕ ಘಟನೆ ಏನಾದರೂ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.