ಮೂರು ಶತಮಾನಗಳ ಬಳಿಕ 'ಪವರ್ಪುಲ್ ನವಪಂಚಮ ರಾಜ ಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ 4 ರಾಶಿಗಳ ಜನರ ಭಾಗ್ಯ!

Nav Pancham Raj Yog: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಸೂರ್ಯ, ಮಂಗಳ ಹಾಗೂ ಗುರು ಗ್ರಹಗಳು ನವಪಂಚಮ ಯೋಗವನ್ನು ರೂಪಿಸಿದ್ದು, ಇದರಿಂದ 4 ರಾಶಿಗಳ ಜನರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ. ಈ ಜನರಿಗೆ ಜೀವನದಲ್ಲಿ ಭಾರಿ ಧನಲಾಭ ಹಾಗೂ ಬಡ್ತಿಯ ಯೋಗಗಳು ಒದಗಿ ಬರಲಿವೆ.
 

Navpancham Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ನವಗ್ರಹಗಳು ಒಂದು ನಿಶ್ಚಿತ ಕಾಲಾವಧಿಯ ನಂತರ ಗೋಚರಿಸಿ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ. ಈ ಯೋಗಗಳು ಕೆಲವರ ಪಾಲಿಗೆ ಸಕಾರಾತ್ಮಕ ಸಾಬೀತಾದರೆ, ಉಳಿದವರ ಪಾಲಿಗೆ ನಕಾರಾತ್ಮಕ ಸಿದ್ಧವಾಗುತ್ತವೆ. ಪ್ರಸ್ತುತ ದೇವಗುರು ಬೃಹಸ್ಪತಿ, ಸೂರ್ಯ ಹಾಗೂ ಮಂಗಳನ ಮೈತ್ರಿಯಿಂದ ನವಪಂಚಮ ರಾಜಯೋ ರೂಪುಗೊಂಡಿದೆ. ಈ ಯೋಗ ಸುಮಾರು 300 ವರ್ಷಗಳ ಬಳಿಕ ನಿರ್ಮಾಣಗೊಂಡಿದ್ದು, ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಇದರ ಪ್ರಭಾವ ಗೋಚರಿಸಲಿದೆ. ಅದರಲ್ಲಿಯೂ ವಿಶೇಷವಾಗಿ 4 ರಾಶಿಗಳ ಜಾತಕದವರೆ ಮೇಲೆ ಇದರ ಅತ್ಯಂತ ಶುಭ ಪ್ರಭಾವ ಕಂಡುಬರಲಿದೆ. ಬನ್ನಿ ಆ ಅದೃಷ್ಟವಂತ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-Hanuman Jayanti 2023 Horoscope: ಹನುಮ ಜಯಂತಿ ದಿನ ಈ ರಾಶಿಗಳ ಜನರ ಮೇಲೆ ಆಂಜನೆಯನ ವಿಶೇಷ ಕೃಪಾವೃಷ್ಟಿ, ಅಪಾರ ಸುಖ-ಸಂಪತ್ತು ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮಿಥುನ ರಾಶಿ: ಮಿಥುನ ರಾಶಿಯ ಜಾತಕದವರ ಪಾಲಿಗೆ ನವಪಂಚಮ ರಾಜಯೋಗ ಅಪಾರ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದಲ್ಲಿ ಕುಟುಂಬ, ಆರ್ಥಿಕ ಸಮೃದ್ಧಿ ಹಾಗೂ ಪರಿವಾರದ ಭಾವದಲ್ಲಿ ಚಂದ್ರ ವಿರಾಜಮಾನನಾಗಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಇರಲಿದೆ ಮತ್ತು ಇದರಿಂದ ಜನರು ನಿಮ್ಮಿಂದ ಸಾಕಷ್ಟು ಇಂಪ್ರೆಸ್ ಆಗಲಿದ್ದಾರೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಧನಪ್ರಾಪ್ತಿ ಕೂಡ ಆಗಲಿದೆ. ಏಪ್ರಿಲ್ ಬಳಿಕ ನೌಕರವರ್ಗದ ಜನರ ಪ್ರಮೋಷನ್ ಹಾಗೂ ಇಂಕ್ರಿಮೆಂಟ್ ಆಗುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.   

2 /4

ಕರ್ಕ ರಾಶಿ: ನವಪಂಚಮ ರಾಜಯೋಗ ಕರ್ಕ ರಾಶಿಯ ಜಾತಕದವರಿಗೆ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಚಂದ್ರ ವಿರಾಜಮಾನನಾಗಿದ್ದಾನೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಿಸಲಿದೆ. ನಿಮಗೆ ಮನಶಾಂತಿ ಪ್ರಾಪ್ತಿಯಾಗಿ ಜನರು ನಿಮ್ಮತ್ತ ಆಕರ್ಷಿತಗಾಗಲಿದ್ದಾರೆ. ನಿಮ್ಮ ಸಕಲ ಇಚ್ಛೆಗಳು ಪೂರ್ಣಗೊಳ್ಳಲಿವೆ. ದೇವಗುರು ಬೃಹಸ್ಪತಿ ನಿಮ್ಮ ಜಾತಕದ ಭಾಗ್ಯ ಸ್ಥಾನದಲ್ಲಿ ವಿರಾಜಮಾನನಾಗಿರುವ ಕಾರಣ, ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಜೊತೆಗೆ ಚಂದ್ರ ಹಾಗೂ ಗುರು ನವಪಂಚಮ ಯೋಗವನ್ನು ಸೃಷ್ಟಿಸುತ್ತಿವೆ ಇದರಿಂದ ನಿಮಗೆ ಆಕಸ್ಮಿಕ ಧನಪ್ರಾಪ್ತಿಯಾಗುವ ಸಾಧ್ಯತೆ ಇದೆ.   

3 /4

ಮೇಷ ರಾಶಿ: ಮಂಗಳನ ಅಧಿಪತ್ಯದ ರಾಶಿಯಾಗಿರುವ ಮೇಷ ರಾಶಿಯ ಜಾತಕದವರ ಪಾಲಿಗೆ ನವಪಂಚಮ ರಾಜಯೋಗ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಮನಸ್ಸಿನ ಭಾವದ ಮೇಲೆ ಶನಿಯ ಗೋಚರವಿದ್ದರೆ, ಲಗ್ನ ಭಾವ ಅಂದರೆ ಶರೀರ ಭಾವದ ಮೇಲೆ ಶುಕ್ರ ಹಾಗೂ ರಾಹುಗಳಿದ್ದಾರೆ. ಇದಲ್ಲದೆ ರಾಹುವಿನ ದೃಷ್ಟಿ ನಿಮ್ಮ ವೃತ್ತಿಜೀವನ ಮೇಲೆ ನೆಟ್ಟಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅಪಾರ ಸುಖ-ಶಾಂತಿ ಪ್ರಾಪ್ತಿಯಾಗಲಿದೆ. ಜೊತೆಗೆ ಈ ಅವಧಿಯಲ್ಲಿ ನೀವು ಹೊಸ ಕಾರ್ಯಗಳನ್ನು ಆರಂಭಿಸಬಹುದು. ನಿಮ್ಮ ವ್ಯಾಪಾರ ಹಾಲು, ಮೊಸರು ಹಾಗೂ ನೀರಿಗೆ ಸಂಬಂಧಿಸಿದ್ದರೆ ನಿಮಗೆ ಅಪಾರ ಧನ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಏಕೆಂದರೆ ನಿಮ್ಮ ವ್ಯಾಪಾರ ಭಾವದ ಮೇಲೆ ಚಂದ್ರನ ಆಧಿಪತ್ಯವಿದೆ. ಇದರಿಂದ ವ್ಯಾಪಾರದಲ್ಲಿ ಹಲವು ಯೋಜನೆಗಳು ಸಫಲಗೊಂಡು, ಭವಿಷ್ಯದಲ್ಲಿ ನಿಮಗೆ ಉತ್ತಮ ಧನಲಾಭವನ್ನು ನೀಡಲಿವೆ.   

4 /4

ಕನ್ಯಾ ರಾಶಿ: ನವಪಂಚಮ ರಾಜಯೋಗ ಕನ್ಯಾ ರಾಶಿಯ ಸ್ಥಳೀಯರಿಗೆ ಅತ್ಯಂತ ಶುಭ ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಚಂದ್ರ ನಿಮ್ಮ ಜಾತಕದ ಲಾಭದ ಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ, ವಿದೇಶದಿಂದ ನಿಮಗೆ ಸಾಕಷ್ಟು ಲಾಭವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಧಾರ್ಮಿಕ ಹಾಗೂ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಹಾಗೂ ಬಂಧು ಮಿತ್ರರ ಸಹಯೋಗ ನಿಮಗೆ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳ ಪಾಲಿಗೆ ಯಾವುದಾದರೊಂದು ಮಹತ್ವದ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)