Mahayoga 2023: 12 ವರ್ಷಗಳ ಬಳಿಕ ನಿರ್ಮಾಣಗೊಂಡಿದೆ ಈ 'ಮಹಾಯೋಗ' 5 ರಾಶಿಗಳ ಜನರಿಗೆ ಇದು ವರದಾನಕ್ಕೆ ಸಮಾನ!

Mahayog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22 ರಂದು ದೇವಗುರು ಬೃಹಸ್ಪತಿ ಮೀನ ರಾಶಿಯನ್ನು ತೊರೆದು 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೇಷ ರಾಶಿಯನ್ನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು ಅವನ ಈ ಮೇಷ ಗೋಚರದಿಂದ ವಿಪರೀತ ರಾಜಯೋಗ ಎಂಬ ಮಹಾ ಯೋಗವನ್ನು ರೂಪಿಸಿದೆ. 

Mahayog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22 ರಂದು ದೇವಗುರು ಬೃಹಸ್ಪತಿ ಮೀನ ರಾಶಿಯನ್ನು ತೊರೆದು 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೇಷ ರಾಶಿಯನ್ನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು ಅವನ ಈ ಮೇಷ ಗೋಚರದಿಂದ ವಿಪರೀತ ರಾಜಯೋಗ ಎಂಬ ಮಹಾ ಯೋಗವನ್ನು ರೂಪಿಸಿದೆ. ಹೀಗಿರುವಾಗ ಈ ರಾಜಯೋಗಕ್ಕೆ ವಿಪರೀತ ರಾಜಯೋಗ ಎಂದು ಏಕೆ ಕರೆಯಲಾಗುತ್ತದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ಒಂದು ವೇಳೆ ಇದು ಮಹಾ ಯೋಗವಾದರೆ ಇದರಿಂದ ಯಾರಿಗೆ ಏನು ಲಾಭವಾಗಲಿದೆ? ಎಂಬ ಪ್ರಶ್ನೆಯೂ ಕೂಡ ಉದ್ಭವಿಸುತ್ತದೆ. ಬನ್ನಿ ಈ ವಿಪರೀತ ರಾಜಯೋಗದ ಮಹತ್ವದ ಕುರಿತು ತಿಳಿದುಕೊಳ್ಳೋಣ.

 

ಇದನ್ನೂ ಓದಿ-Shani-Shukra In Navpancham Yog: ಶೀಘ್ರದಲ್ಲಿಯೇ ನವಪಂಚಮ ರಾಜಯೋಗ ನಿರ್ಮಾಣ, ಧನದಾತ ಶುಕ್ರ- ಕರ್ಮಫಲದಾತ ಶನಿ ಕೃಪೆಯಿಂದ ಅಪಾರ ಧನಲಾಭ!

 

ವಿಪರೀತ ರಾಜಯೋಗ ಎಂದರೇನು ಹೇಗೆ ರೂಪುಗೊಳ್ಳುತ್ತದೆ?
ವಿಪರೀತ ರಾಜಯೋಗದ ಬಗ್ಗೆ ಹೇಳುವುದಾದರೆ, ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಹಲವಾರು ರೀತಿಯ ಮಂಗಳಕರ ಯೋಗಗಳ ಕುರಿತು ವರ್ಣನೆ ನೀಡಲಾಗಿದೆ.  ಅವುಗಳಲ್ಲಿ ಒಂದು ವಿಪರೀತ ರಾಜಯೋಗ ಕೂಡ ಒಂದು, ಹೆಸರಿನಲ್ಲಿ ವಿಪರೀತವಾದರೂ ಕೂಡ ಇದನ್ನು ಬಹಳ ಮಂಗಳಕರ ಯೋಗವೆಂದೇ ಪರಿಗಣಿಸಲಾಗುತ್ತದೆ. ಕಳೆದ ಏಪ್ರಿಲ್ 22 ರಂದು ದೇವಗುರು ಬೃಹಸ್ಪತಿಯ ಮೇಷ ಗೋಚರ ನೆರವೇರಿದೆ, ಅಂದಿನಿಂದ ಈ ವಿಪರೀತ ರಾಜಯೋಗವು ರೂಪುಗೊಂಡಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಯಾರೊಬ್ಬರ  ಜಾತಕದಲ್ಲಿ ಜಾತಕದಲ್ಲಿ ಈ ವಿಶೇಷ ರಾಜಯೋಗವು ರೂಪುಗೊಂಡಾಗ, ಆ ಜಾತಕದ ಸ್ಥಳೀಯರಿಗೆ ಈ ಯೋಗದ ವಿಶೇಷ ಲಾಭಗಳು ಲಭಿಸುತ್ತವೆ ಮತ್ತು ಅವರಿಗೆ ಇದು ಒಂದು ವರದಾನದಂತೆ ಸಾಬೀತಾಗುತ್ತದೆ. 

 

ಇದನ್ನೂ ಓದಿ-Maha Dhan Rajyog: 50 ವರ್ಷಗಳ ಬಳಿಕ ತಾಯಿ ಲಕ್ಷ್ಮಿ-ಶನಿದೇವನ ಕೃಪೆಯಿಂದ ಕೋಟ್ಯಾಧಿಪತಿಯಾಗುವ ಯೋಗ, ಯಾವ ರಾಶಿಗಳಿಗೆ ಲಾಭ?

 

ಜಾತಕದಲ್ಲಿ ಈ ವಿಪರೀತ ರಾಜಯೋಗ ಯಾವಾಗ ರೂಪುಗೊಳ್ಳುತ್ತದೆ ಅದರ ಫಲಿತಾಂಶ ಏನು?
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದ ಷಷ್ಟಮ, ಅಷ್ಟಮ, ಹಾಗೂ ದ್ವಾದಶ ಭಾವದ ಅಧಿಪತಿಗಳು ಮೈತ್ರಿ ರೂಪಿಸಿದಾಗ ಈ ವಿಪರೀತ ರಾಜಯೋಗ ನಿರ್ಮಾಣಗೊಳ್ಳುತ್ತದೆ.  ಅರ್ಥಾತ್ ಷಷ್ಟಮ ಭಾವದ ಅಧಿಪತಿ ಅಷ್ಟಮ ಅಥವಾ ದ್ವಾದಶ ಭಾವದಲ್ಲಿ ಸ್ಥಿತನಾದರೆ ಅಥವಾ ದ್ವಾದಶ ಭಾವದ ಅಧಿಪತಿ ಅಷ್ಟಮ ಅಥವಾ ಷಷ್ಟಮ ಭಾವದಲ್ಲಿ ಬಂದರೆ ಈ ಯೋಗವು ರೂಪುಗೊಳ್ಳುತ್ತದೆ. ಯಾರ ಜಾತಕದಲ್ಲಿ ಈ ಅತ್ಯಂತ ಮಂಗಳಕರವಾದ ಯೋಗವು ರೂಪುಗೊಳ್ಳುತ್ತದೆ, ಅವರು ಭೂಮಿ, ಕಟ್ಟಡ ಮತ್ತು ವಾಹನ ಸುಖವನ್ನು ಪಡೆಯುತ್ತಾರೆ. ಹಾಗಾದರೆ ಬನ್ನಿ ಯಾವ ರಾಶಿಗಳ ಜಾತಕದವರಿಗೆ ಈ ವಿಪರೀತ ರಾಜಯೋಗ ವರದಾನಕ್ಕೆ ಸಾಬೀತಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ,  ನಾವು ಈ ಮೊದಲೇ ಉಲ್ಲೇಖಿಸಿದಂತೆ  ಈ ರಾಜಯೋಗವು ತುಂಬಾ ಮಂಗಳಕರವಾಗಿದೆ. ಹೀಗಿರುವಾಗ ಏಪ್ರಿಲ್ 22 ರಿಂದ ರೂಪುಗೊಂಡ ಈ ವಿಪರೀತ ರಾಜಯೋಗ ವಿಶೇಷವಾಗಿ 5 ರಾಶಿಗಳ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

 

ಇದನ್ನೂ ಓದಿ - Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮಿಥುನ ರಾಶಿ : ಮಿಥುನ ರಾಶಿಯ ಜನರಿಗೆ ಈ ವಿಶೇಷವಾದ ರಾಜಯೋಗದಿಂದ ಅಪಾರ ಲಾಭ ಪ್ರಾಪ್ತಿಯಾಗಲಿದೆ, ಅದೃಷ್ಟ ನಿಮ್ಮ ಪರವಾಗಿರಲಿದೆ, ಆದಾಯ ವೃದ್ಧಿಯಾಗಲಿದೆ, ವ್ಯಾಪಾರದಲ್ಲಿ ಪ್ರಗತಿಯ ಅವಕಾಶಗಳಿರಲಿವೆ ಹಾಗೂ ನೌಕರ ವರ್ಗದ ಜನರಿಗೆ ಕೆಲಸದಲ್ಲಿ  ಬಡ್ತಿಯ ಅವಕಾಶಗಳಿರಲಿವೆ.  

2 /5

ತುಲಾ ರಾಶಿ: ತುಲಾ ರಾಶಿಯ ಜಾತಕದವರ ಪಾಲಿಗೆ ಈ ಮಂಗಳಕರ ಯೋಗ ಅತ್ಯಂತ ಅದ್ಭುತ ಸಾಬೀತಾಗಲಿದೆ . ನೀವು ಉದ್ಯೋಗದಲ್ಲಿ ಬಡ್ತಿಯನ್ನು ಪಡೆಯುವ ಸಾಧ್ಯತೆ ಇದೆ, ನೀವು ವ್ಯಾಪಾರ ಮಾಡುತ್ತಿದ್ದರೆ ನಿಮಗೆ ಲಾಭದ ಎಲ್ಲಾ ಸಾಧ್ಯತೆಗಳಿವೆ.  ಯಾವುದೇ ಕೆಲಸವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದರೆ, ಅದು ಪೂರ್ಣಗೊಳ್ಳಲಿದೆ, ನೀವು ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ ಮತ್ತು ಒಟ್ಟಾರೆಯಾಗಿ ನಿಮ್ಮ ಆರ್ಥಿಕ ಸ್ಥಿತಿಯು ಅತ್ಯುತ್ತಮವಾಗಿರಲಿದೆ.  

3 /5

ಕರ್ಕ ರಾಶಿ: ವಿಪರೀತ ರಾಜಯೋಗದ ಕಾರಣ ಕರ್ಕ ರಾಶಿಯ ಜಾತಕದವರಿಗೆ ಸಾಕಷ್ಟು ಒಳ್ಳೆಯ ಸುದ್ದಿಗಳು ಸಿಗಳಿವೆ. ಅದೃಷ್ಟದ ಬೆಂಬಲ ನಿಮ್ಮೊಂದಿಗೆ ಇರಲಿದೆ, ವೃತ್ತಿಯಲ್ಲಿ ಪ್ರಗತಿಯ ಅವಕಾಶಗಳಿರಲಿವೆ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದೆ.  

4 /5

ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ವಿಪರೀತ ಮಹಾ ರಾಜಯೋಗ ಅತ್ಯಂತ ವರಪ್ರದಾಯಿ ಸಾಬೀತಾಗಲಿದೆ, ಈ ಅವಧಿಯಲ್ಲಿ ನೀವು ಮಾಡುವ ಯಾವುದೇ ಹೊಸ ಕೆಲಸದಲ್ಲಿ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುವಿರಿ, ವೈವಾಹಿಕ ಜೀವನದಲ್ಲಿ ಪತಿ-ಪತ್ನಿಯರ ನಡುವಿನ ಸಂಬಂಧ ಸುಧಾರಿಸಲಿದೆ ಮತ್ತು ಸಾಮಾಜಿಕ ಘನತೆ- ಗೌರವವು ಹೆಚ್ಚಾಗುತ್ತದೆ.  

5 /5

ಮೀನ ರಾಶಿ: ಮೀನ ರಾಶಿಯವರಿಗೆ ಈ ರಾಜಯೋಗದ ವಿಪರೀತ ಲಾಭ ಸಿಗಲಿದೆ. ಅದರಲ್ಲಿಯೂ ಮುಖ್ಯವಾಗಿ ಆರ್ಥಿಕ ಲಾಭಗಳಿರುತ್ತವೆ, ನೀವು ವ್ಯಾಪಾರಸ್ಥರಾಗಿದ್ದರೆ ನೀವು ದೊಡ್ಡ ಡೀಲ್ ಫೈನಲ್ ಮಾಡುವಿರಿ ಮತ್ತು ನೀವು ನೌಕರರಾಗಿದ್ದಲ್ಲಿ ಮುಂಬಡ್ತಿಯನ್ನು ನೀವು ನಿರೀಕ್ಷಿಸಬಹುದು. ಒಟ್ಟಾರೆಯಾಗಿ, ಈ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)