ಒಂದು ವರ್ಷದ ಬಳಿಕ ತನ್ನ ಉಚ್ಛ ರಾಶಿಯನ್ನು ಪ್ರವೇಶಿಸಲಿರುವ ಸೂರ್ಯ, ಈ ಜನರಿಗೆ ಭಾರಿ ಧನಲಾಭ!

Surya Gochar In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗ್ರಹಗಳ ರಾಜ ಸೂರ್ಯ ತನ್ನ ಉಚ್ಛ ರಾಶಿಯಾಗಿರುವ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನ ಈ ಗೋಚರದಿಂದ 3 ರಾಶಿಗಳ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ. ಈ ರಾಶಿಗಳ ಅಪಾರ ಧನಲಾಭದ ಜೊತೆಗೆ ಭಾಗ್ಯೋದಯವನ್ನು ಆತ ಕರುಣಿಸಲಿದ್ದಾನೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ. 
 

Surya Gochar In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ಗೋಚರಿಸುವ ಮೂಲಕ ಶುಭ ಅಶುಭ ಫಲಗಳನ್ನು ನೀಡುತ್ತವೆ, ಇವುಗಳ ಪ್ರಭಾವ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳ ಮೇಲೆ ಉಂಟಾಗುತ್ತದೆ. ಬರುವ ಏಪ್ರಿಲ್ 14 ರಂದು ಗ್ರಹಗಳ ರಾಜ ಸೂರ್ಯದೇವ ತನ್ನ ಉಚ್ಚ ರಾಶಿಯಾಗಿರುವ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಇದರರ್ಥ ಆತ ತನ್ನ ಸಂಪೂರ್ಣ ಹಾಗೂ ಶುಭ ಫಲಗಳನ್ನು ನೀಡಲಿದ್ದಾನೆ ಎಂದರ್ಥ. ಹೀಗಾಗಿ ಸೂರ್ಯದೇವನ ಈ ಗೋಚರದ ಪ್ರಭಾವ ಎಲ್ಲಾ ರಾಶಿಯ ಜನರ ಮೇಲೆ ಉಂಟಾಗಲಿದೆ. ಆದರೆ 3 ರಾಶಿಗಳ ಜನರು ಇದರಿಂದ ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಈ ಮೂರು ರಾಶಿಗಳ ಜನರಿಗೆ ಈ ಅವಧಿಯಲ್ಲಿ ಅಪಾರ ಧನಲಾಭ ಹಾಗೂ ಭಾಗ್ಯೋದಯದ ಯೋಗ ನಿರ್ಮಾಣಗೊಳ್ಳಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-Chaturgrahi Yog: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ಜನರ ಮೇಲೆ ಭಾರಿ ಧನವೃಷ್ಟಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

1 /3

ಮೇಷ ರಾಶಿ: ಸೂರ್ಯದೇವನ ಗೋಚರ ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಸೂರ್ಯದೇವ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಗೋಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪನ್ನು ಕಾಣುವಿರಿ. ನಿಮ್ಮ ಕೆಲಸ ಕಾರ್ಯದಲ್ಲಿ ಹೊಸ ಚೈತನ್ಯವನ್ನು ನೀವು ನೋಡಬಹುದು. ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ವರ್ಚಸ್ಸು ಹೆಚ್ಚಾಗಲಿದೆ. ಸೂರ್ಯನ ಈ ಗೋಚರ ಬಿಸ್ನೆಸ್ ಮಾಡುವವರಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಬಾಳಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.  

2 /3

ಮಿಥುನ ರಾಶಿ: ಸೂರ್ಯದೇವನ ಈ ಗೋಚರ ಮಿಥುನ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಸೂರ್ಯ ದೇವ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಗೋಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವನ್ನು ನೀವು ನೋಡಬಹುದು. ಇದಲ್ಲದೆ ಆದಾಯದ ಹೊಸ ಮಾರ್ಗಗಳೂ ಕೂಡ ತೆರೆದುಕೊಳ್ಳಲಿವೆ. ನಿಂತು ಹೋದ ಕೆಲಸಗಳಿಗೆ ಹೊಸ ವೇಗ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ನೀವು ಸಾಕಷ್ಟು ಸುಧಾರಣೆಯನ್ನು ಕಾಣುವಿರಿ. ಇನ್ನೊಂದೆಡೆ ಒಂದು ವೇಳೆ ನೀವು ಹೊಸ ವ್ಯವಸಾಯವನ್ನು ಆರಂಭಿಸಲು ಬಯಸುತ್ತಿದ್ದರೆ, ಈ ಅವಧಿ ನಿಮಗೆ ತುಂಬಾ ಅನುಕೂಲಕರವಾಗಿದೆ.  

3 /3

ಮೀನ ರಾಶಿ: ಸೂರ್ಯದೇವನ ಈ ಗೋಚರ ಮೀನ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಲಾಭಪ್ರದ ಸಾಬೀತಾಗಲಿದೆ. ಏಕೆಂದರೆ ಸೂರ್ಯ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಸಾಗುತ್ತಿದ್ದಾನೆ. ಇದನ್ನು ಧನ ಹಾಗೂ ವಾಣಿಯ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಇದಲ್ಲದೆ ಹೂಡಿಕೆಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನೀವು ನಿಮ್ಮ ಮಾತಿನ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುವಿರಿ ಮತ್ತು ಜನರು ನಿಮ್ಮ ಮಾತಿನಿಂದ ಇಂಪ್ರೆಸ್ ಆಗಲಿದ್ದಾರೆ. ನೌಕರಿಯಲ್ಲಿ ನಿರತರಾಗಿರುವವರಿಗೆ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ. ಆದರೆ, ನಿಮ್ಮ ಮೇಲೆ ಶನಿಯ ಸಾಡೇಸಾತಿ ಆರಂಭಗೊಂಡಿರುವುದರಿಂದ ನಿರ್ಧಾರಗಳನ್ನು ಸಾಕಷ್ಟು ವಿಚಾರಪೂರ್ವಕವಾಗಿ ತೆಗೆದುಕೊಳ್ಳಿ. ತಲೆ ಹಾಗೂ ಮುಖಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಎದುರಾಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)