ಮದುವೆಯ ಬಳಿಕ ಮೊದಲ ಬಾರಿಗೆ HOT PHOTOSHOOT ನಡೆಸಿದ ದೀಪಿಕಾ

ಮದುವೆಯ ಬಳಿಕ ಇದೆ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಹಾಟ್ ಫೋಟೋಶೂಟ್ ನಡೆಸಿ ಸುದ್ದಿ ಮಾಡಿದ್ದಾಳೆ. ಈ ಫೋಟೋ ಶೂಟ್ ನಲ್ಲಿ ದೀಪಿಕಾ ಎಷ್ಟೊಂದು ಹಾಟ್ ಕಾಣಿಸುತ್ತಿದ್ದಾರೆ ಎಂದರೆ, ಅವರ ಪತಿ ರಣವೀರ್ ಸಿಂಗ್ ಕೂಡ ಕಾಮೆಂಟ್ ಮಾಡಿದ್ದಾರೆ.

  • Mar 10, 2020, 14:18 PM IST

ಖ್ಯಾತ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇತೀಚೆಗಷ್ಟೇ ELLE ಮ್ಯಾಗಜೀನ್ ಗಾಗಿ HOT PHOTOSHOOT ನಡೆಸಿದ್ದಾರೆ. ಈ ಫೋಟೋ ಶೂಟ್ ನ ಹಲವು ಫೋಟೋಗಳನ್ನು ಅವಳು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ದೀಪಿಕಾ ಹಂಚಿಕೊಂಡಿರುವ ಈ ಭಾವಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ದೀಪಿಕಾ ಪತಿ ರಣವೀರ್ ಸಿಂಗ್ ಕೂಡ ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲ ರಣವೀರ್ ಮಾಡಿರುವ ಕಾಮೆಂಟ್ ಗಳಿಗೆ ಅಭಿಮಾನಿಗಳೂ ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ಬೇಬಿ ರೆಹೆಮ್ ಕರೋ ಯಾರ್' ಎಂದು ಪ್ರತಿಕ್ರಿಯೆ ನೀಡಿರುವ ರಣವೀರ್ ಗೆ ಉತ್ತರ ನೀಡಿರುವ ಅಭಿಮಾನಿಯೊಬ್ಬರು, "ಸ್ವಂತ ಪತ್ನಿಯ ಜೊತೆ ಫ್ಲರ್ಟ್ ಮಾಡುವವ" ಎಂದು ಪ್ರತಿಕ್ರಿಯೆ ನೀಡಿದ್ದರೆ, ಮತ್ತೋರ್ವ ಅಭಿಮಾನಿ "ನೀವೂ ಕೂಡ.." ಎಂದು ಪ್ರತಿಕ್ರಿಯಿಸಿದ್ದಾರೆ.

ದೀಪಿಕಾ ವೃತ್ತಿ ಜೀವನದ ಕುರಿತು ಹೇಳುವುದಾದರೆ, ದೀಪಿಕಾ ಕೊನೆಯ ಬಾರಿಗೆ ಜನವರಿ 2020ರಲ್ಲಿ ಬಿಡುಗಡೆಯಾಗಿದ್ದ 'ಛಪಾಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಳು. ಈ ಚಿತ್ರದಲ್ಲಿ ದೀಪಿಕಾ ಆಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಯುವತಿಯ ಪಾತ್ರ ನಿರ್ವಹಿಸಿದ್ದರು. ಸದ್ಯ, ದೀಪಿಕಾ ತಮ್ಮ ಪತಿ ರಣವೀರ್ ಅಭಿನಯಿಸಿರುವ '83' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿಯೂ ಕೂಡ ದೀಪಿಕಾ ರಣವೀರ್ ಅವರ ಪತ್ನಿಯ ಭೂಮಿಕೆ ನಿರ್ವಹಿಸಲಿದ್ದಾರೆ.

1 /10

2 /10

3 /10

4 /10

5 /10

6 /10

7 /10

8 /10

9 /10

10 /10