Actress Sudha Rani: ಮರ್ಡ್‌ರ್‌ ಪ್ಲಾನ್..‌ ನಟಿ ಸುಧಾರಾಣಿಗೆ ನರಕ ತೋರಿಸಿದ್ದ ಮೊದಲ ಗಂಡ.. ಬದುಕಿ ಬಂದಿದ್ದು ಈ ಇಬ್ಬರಿಂದ!!

Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್‌ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್‌, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ.. 

1 /5

ಸದ್ಯ 50 ವಯಸ್ಸಿನವರಾಗಿರುವ ಇವರ ಮುಖದಲ್ಲಿ ಇಂದಿಗೂ ಕೂಡ ಯವ್ವನದ ಕಳೆ.. ಇಂತಹ ಸೌಂದರ್ಯವತಿ, ಗುಣವಂತೆ ನಮ್ಮ ಸುಧಾರಾಣಿ.. ಇಂತಹ ವ್ಯಕ್ತಿತ್ವವುಳ್ಳಂತಹ ನಟಿಗೂ ಸಹ ಜೀವನದ ಕಷ್ಟಗಳು ಸಾಕಷ್ಟು ಕಾಡಿದ್ದವು.. ಅವರು ಇಂದು ಬದುಕಿದ್ದಾರೆ ಎನ್ನುವುದು ದೇವರ ಪವಾಡವೇ ಎಂದು ಹೇಳಲಾಗುತ್ತೆ..   

2 /5

ತಂದೆ ತಾಯಿ ಮಾಡಿದ ತಪ್ಪಿಗೆ ನರಕಯಾತನೇ ಅನುಭವಿಸುತ್ತಿದ್ದ ನಟಿ ಸುಧಾರಾಣಿಯವರನ್ನು ಸಂಕಷ್ಟದಿಂದ ಪಾರು ಮಾಡಿದ್ದು ಪಾರ್ವತಮ್ಮ ರಾಜ್‌ಕುಮಾರ್ ಅವರು ಮತ್ತು ನಟ ಅಂಬರೀಷ್..‌‌ ಹಾಗಾದ್ರೆ ನಟಿಯ ಬದುಕಿನಲ್ಲಿ ನಡೆದ ಆ ದುರಂತ ಏನು?   

3 /5

 ಆನಂದ್‌ ಸಿನಿಮಾದ ನಂತರ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ನಂತರ ಸುಧಾರಾಣಿಗೆ ಸಾಲು ಸಾಲು ಸಿನಿಮಾ ಆಫರ್‌ಗಳು ಒಲಿದು ಬರುತ್ತವೆ. ನಟಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅವರ ತಂದೆ ತಾಯಿಯ ಕಟ್ಟುಪಾಡಿಗೆ ಬಿದ್ದು ಅಮೇರಿಕಾದ ಅರವಳಿಕೆ ತಜ್ಞನನ್ನು ಮದುವೆಯಾಗ್ತಾರೆ.. ನಂತರ ಪತಿಯೊಂದಿಗೆ ಅವರೂ ಅಮೇರಿಕಾಗೆ ತೆರಳುತ್ತಾರೆ.. ಆದರೆ ನಟಿಯ ಬದುಕುನಲ್ಲಿ ಬಿರುಗಾಳಿ ಬೀಸಿದ್ದೆ ಇಲ್ಲಿ..   

4 /5

ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದಿದ್ದ ಸುಧಾರಾಣಿ ಸಂಸಾರ ದಿನಕಳೆದಂತೆ ಗಂಡನ ಇನ್ನೊಂದು ಮುಖ ಅನಾವರಣವಾಗತೊಡಗಿತು.. ಆತನ ವಿಕೃತ ಭಾವನೆ ಅರ್ಥವಾಗಲಾರಂಭಿಸಿತು.. ಯಾವ ಹಂತದವರೆಗೂ ಟಾರ್ಚರ್‌ ನೀಡುತ್ತಿದ್ದನೆಂದರೇ ರಾಸಾಯನಿಕದ ಇಂಜೆಕ್ಷನ್‌ ಚುಚ್ಚಿ ಈಕೆಯ ಬದುಕನ್ನೇ ಅಂತ್ಯಗೊಳಿಸುವ ತಿರ್ಮಾಣವನ್ನು ಮಾಡಿರುತ್ತಾನೆ.. ಈ ವಿಚಾರ ತಿಳಿದ ಸುಧಾರಾಣಿ ಅಲ್ಲಿಂದ ಹೊರಟು ಸ್ನೇಹಿತೆಯ ಮನೆ ಸೇರಿಕೊಳ್ಳುತ್ತಾಳೆ..  

5 /5

ನಂತರ ಈ ವಿಚಾರ ಸುಧಾರಾಣಿ ಮನೆಯವರಿಗೆ ತಿಳಿದಾಗ ಅವರು ಪಾರ್ವತಮ್ಮ ರಾಜ್‌ಕುಮಾರ್‌ ಅವರ ಸಹಾಯ ಕೇಳುತ್ತಾರೆ.. ಆಗ ದೇವರಂತೆ ಬಂದ ನಟ ಅಂಬರೀಷ್‌ ಅವರು ಅಮೇರಿಕಾದಲ್ಲಿರುವ ತಮ್ಮ ಸ್ನೇಹಿತನಿಗೆ ವಿಚಾರ ತಿಳಿಸಿ ನಟಿ ಸುಧಾರಾಣಿಯವರನ್ನು ಭಾರತಕ್ಕೆ ಕರೆತರುತ್ತಾರೆ..