2 ವಿವಾಹವಾದ ನಟನೊಂದಿಗೆ ಅಫೇರ್, ಮದುವೆಯಾಗದೆ 2 ಮಕ್ಕಳ ತಾಯಿ.. ಈ ಖ್ಯಾತ ನಟಿಯ ಮಗಳು 100 ಕೋಟಿ ಸಂಭಾವನೆ ಪಡೆದ ಮೊದಲ ಹೀರೋಯಿನ್

Pushpavalli and Gemini Ganesan Uniue Love Story: ಹೇಮಾ ಮಾಲಿನಿ, ರೇಖಾ, ವೈಜಯಂತಿ ಮಾಲಾ, ಜಯಪ್ರದಾ ಮತ್ತು ಶ್ರೀದೇವಿ ಬಾಲಿವುಡ್‌’ಗೆ ಪ್ರವೇಶಿಸುವ ಮೊದಲೇ ದಕ್ಷಿಣ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನೇಕ ನಟಿಯರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಸೌತ್ ಸಿನಿಮಾದಿಂದ ಬಾಲಿವುಡ್’ಗೆ ಬಂದು ದೇಶಾದ್ಯಂತ ಜನರ ಹೃದಯದಲ್ಲಿ ನೆಲೆಯೂರಿದ ಅನೇಕ ನಟಿಯರಿದ್ದಾರೆ. ಅಂತಹ ಕೆಲವೇ ಕೆಲವು ನಟಿಯರಲ್ಲಿ ರೇಖಾ ಕೂಡ ಒಬ್ಬರು. ಅವರ ತಾಯಿ ಕೂಡ ನಟಿಯಾಗಿದ್ದರು. ಅಂದಹಾಗೆ ಅವರು ಎರಡು ಬಾರಿ ಮದುವೆಯಾದ ಸೌತ್ ಸಿನಿಮಾದ ಸೂಪರ್‌ ಸ್ಟಾರ್ ಒಬ್ಬರನ್ನು ಪ್ರೀತಿಸುತ್ತಿದ್ದರು. ಜೊತೆಗೆ ಅವರ ಜೊತೆ ಮದುವೆಯಾಗದೆ ಸಂಬಂಧವನ್ನು ಬೆಳೆಸಿದ ಆಕೆ, ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು.

2 /8

ನಟಿ ರೇಖಾ ಅವರ ತಾಯಿ ಪುಷ್ಪವಲ್ಲಿ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಪರದೆಯ ಮೇಲೆ ಸೀತೆಯ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾಗಿದ್ದರು. 1936ರಲ್ಲಿ ಬಿಡುಗಡೆಯಾದ ಚಲನಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದರು. ಅದಕ್ಕಾಗಿ ಅವರು ಅಂದು ಪಡೆದಿದ್ದ ಶುಲ್ಕ ರೂ. 300. ಈ ಪಾತ್ರದ ನಂತರ, ಅವರಿಗೆ ಅನೇಕ ಚಿತ್ರಗಳ ಆಫರ್‌’ಗಳು ಬರಲಾರಂಭಿಸಿದವು.

3 /8

ರೇಖಾ ಅವರ ತಾಯಿ ಅವರ ಚಿತ್ರಗಳಿಗಿಂತ ಅವರ ವೈಯಕ್ತಿಕ ಜೀವನದಿಂದಲೇ ಹೆಚ್ಚು ಮುಖ್ಯಾಂಶಗಳಲ್ಲಿ ಇದ್ದರು. 1940 ರಲ್ಲಿ ವಿವಾಹವಾದರೂ ಸಹ, ಕೇವಲ ಆರು ವರ್ಷಗಳ ನಂತರ ಜೀವನವು ಹದಗೆಟ್ಟಿತು. ಅದಾದ ಬಳಿಕ ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.

4 /8

ಇನ್ನು ನಟ ಜೆಮಿನಿ ಗಣೇಶನ್ ಅವರೊಂದಿಗೆ ‘ಮಿಸ್ ಮಾಲಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಪುಷ್ಪವಲ್ಲಿ ಅವರ ಜೀವನದಲ್ಲಿ ಹೊಸ ತಿರುವು ಸಿಕ್ಕಿತು. ರೇಖಾ ಅವರ ತಾಯಿ ಜೆಮಿನಿ ಗಣೇಶನ್ ಅವರನ್ನು ಪ್ರೀತಿಸುತ್ತಿದ್ದರು, ಆದರೆ ನಟ ಈ ಹಿಂದೆ ಮದುವೆಯಾಗಿದ್ದರು.

5 /8

ಜೆಮಿನಿ ಗಣೇಶನ್ ಎಂದಿಗೂ ಪುಷ್ಪವಲ್ಲಿಗೆ ತನ್ನ ಹೆಂಡತಿಯ ಸ್ಥಾನಮಾನವನ್ನು ನೀಡಲಿಲ್ಲ, ಆದರೆ ರೇಖಾ ಅವರ ತಾಯಿ ತನ್ನ ಇಡೀ ಜೀವನವನ್ನು ಗರ್ಲ್ ಫ್ರೆಂಡ್ ಆಗಿಯೇ ಕಳೆದರು. ಮದುವೆಯಾಗದೆ ಜೆಮಿನಿ ಗಣೇಶನ್ ಅವರ ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು, ಅವರಲ್ಲಿ ಒಬ್ಬರು ಪ್ರಸಿದ್ಧ ನಟಿ ರೇಖಾ.

6 /8

ರೇಖಾ ಅವರ ತಾಯಿ ಪುಷ್ಪವಲ್ಲಿ 1991 ರಲ್ಲಿ ಕೊನೆಯುಸಿರೆಳೆದರು. ಹೆಚ್ಚಿನ ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

7 /8

ರೇಖಾ ಕೂಡ ಚಿತ್ರಗಳಲ್ಲಿ ಕೆಲಸ ಮಾಡಬೇಕೆಂದು ಪುಷ್ಪವಲ್ಲಿ ಬಯಸಿದ್ದರು. ರೇಖಾ ಮೊದಲ ಬಾರಿಗೆ ತೆಲುಗು ಚಿತ್ರ 'ರಂಗುಲ ರತ್ನಂ' ನಲ್ಲಿ ಕಾಣಿಸಿಕೊಂಡರು. ಆಗ ಅವರ ವಯಸ್ಸು ಕೇವಲ 12 ವರ್ಷ. ಸುಮಾರು 15 ನೇ ವಯಸ್ಸಿನಲ್ಲಿ,  ತಮ್ಮ ಮೊದಲ ಬಾಲಿವುಡ್ ಚಿತ್ರ 'ಅಂಜನಾ ಸಫರ್' ನಲ್ಲಿ ಕೆಲಸ ಮಾಡಿದರು,

8 /8

ಪುಷ್ಪವಲ್ಲಿಯವರಂತೆ ಅವರ ಮಗಳು ರೇಖಾ ಅವರ ಜೀವನವೂ ಅಲ್ಲೋಲಕಲ್ಲೋಲದಿಂದ ಕೂಡಿತ್ತು. ಪ್ರಸಿದ್ಧಿ, ಆಸ್ತಿ ಪಾಸ್ತಿ ಹೊರತಾಗಿಯೂ, 69 ನೇ ವಯಸ್ಸಿನಲ್ಲಿ ಅವರು ಒಬ್ಬಂಟಿಯಾಗಿ ವಾಸಿಸುತ್ತಾರೆ.