ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?

Actress prema: ಬಿಗ್ ಬಾಸ್ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್‌ನ ಎರಡ ಪ್ರೋಮೋಗಳು ಈಗಾಗಲೇ ರಿಲೀಸ್‌ ಆಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿರುವ ಆ 11 ಜನ ಯಾರು ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದ್ದು, ಯಾರ್ಯಾರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಲೆಕ್ಕಾಚಾರ ಬಹಳ ಜೋರಾಗಿಯೇ ನಡೀತಿದೆ.

1 /5

ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಪ್ರೇಮಾ ಕನ್ನಡದ ಖ್ಯಾತ ಖಾಸಗಿ ಚಾನೆಲ್‌ನ ಕಾರ್ಯಕ್ರಮ ಒಂದರಲ್ಲಿ ಜಡ್ಜ್‌ ಆಗಿದ್ದಾರೆ. ಈ ಭಾರಿಯಾದರೂ ನಟಿ ಪ್ರೇಮಾ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡ್ತಾರಾ ಇಲ್ವಾ ಅನ್ನೋದನ್ನ್‌ ಇನ್ನೂ ಮುಂದೆಯಷ್ಟೆ ಕಾದು ನೋಡ್ಬೇಕಿದೆ.

2 /5

ನಟಿ ಪ್ರೇಮಾ ಬಿಗ್‌ ಬಾಸ್‌ ಮನೆಗೆ  ಬರ್ತಾರೆ ಎನ್ನುವ ಸುದ್ದಿ ಇಂದು ನಿನ್ನೆಯದ್ದಲ್ಲ. ಈ ಮುಂಚೆ ಬಂದ ಬಿಗ್‌ ಬಾಸ್‌ ಸೀಸನ್‌ನಲ್ಲಿಯೂ ಸಹ ನಟಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಚರ್ಚೆ ಶುರವಾಗಿತ್ತು, ಆದರೆ ಲಾಂಚ್‌ ದಿನ ಲಿಸ್ಟ್‌ನಲ್ಲಿ ನಟಿಯ ಹೆಸರನ್ನು ನೋಡದೆ ಫ್ಯಾನ್ಸ್‌ ನಿರಾಶರಾಗುತ್ತಿದ್ದರು. 

3 /5

ಇದೀಗ ವೈರಲ್‌ ಆಗುತ್ತಿರುವ ಸಾಂಭವ್ಯ ಆಟಗಾರರ ಪಟ್ಟಿಯಲ್ಲಿ ಒಂದಾನೊಂದು ಕಾಲದಲ್ಲಿ ತನ್ನ ಬ್ಯೂಟಿ ಹಾಗೂ ನಟನೆಯಿಂದ ಸಿನಿಮಾ ರಂಗವನ್ನು ಆಳಿದ್ದ ನಟಿ ಪ್ರೇಮಾ ಈ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಹೀಗೊಂದು ಚರ್ಚೆ ಸೋಶಿಯಲ್‌ ಮಿಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದು, ವಿಷಯ ಕೇಳಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ.

4 /5

‘ಬಿಗ್ ಬಾಸ್‌’ ಸೀಸನ್‌ ಆರಂಭವಾಗುವ ಮುನ್ನ ಸ್ಪರ್ಧಿಗಳ ಸಾಂಭವ್ಯ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ. ಹೀಗೆ ಬಿಗಗಬಾಸ್‌ ಲಾಂಚ್‌ ವರೆಗೂ ಸಾಂಭವ್ಯ ಆಟಗಾರರ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದು ಕಾಮನ್‌. ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳುವುದು, ಬಿಗ್‌ ಬಾಸ್‌ ಲಾಂಚ್‌ ದಿನವಷ್ಟೆ.

5 /5

ಬಿಗ್ ಬಾಸ್ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್‌ನ ಎರಡ ಪ್ರೋಮೋಗಳು ಈಗಾಗಲೇ ರಿಲೀಸ್‌ ಆಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ. ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿರುವ ಆ 11 ಜನ ಯಾರು ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದ್ದು, ಯಾರ್ಯಾರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಲೆಕ್ಕಾಚಾರ ಬಹಳ ಜೋರಾಗಿಯೇ ನಡೀತಿದೆ.