Kriti Sanon Marriage: ಬಾಲಿವುಡ್ ನಟಿ ಕೃತಿ ಸನನ್ ಇತ್ತೀಚೆಗೆ ಎಲ್ಲರ ಗಮನ ಸೆಳೆದಿದ್ದರು. ನಟಿ ತನ್ನ ಹುಟ್ಟುಹಬ್ಬವನ್ನು ಯುಕೆಯಲ್ಲಿ ತನ್ನ ರೂಮರ್ಡ್ ಬಾಯ್ಫ್ರೆಂಡ್ ಕಬೀರ್ ಬಹಿಯಾ ಜೊತೆ ಆಚರಿಸಿಕೊಂಡರು.. ಗುಟ್ಟಾಗಿ ಹುಟ್ಟು ಹಬ್ಬ ಆಚರಿಸಿಕೊಂಡರೂ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು, ಕೃತಿ ಮತ್ತು ಕಬೀರ್ ಅವರ ಪೋಟೋ ಮತ್ತು ವೀಡಿಯೊಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು..
ಕೃತಿ ಸನನ್ ಪ್ರಸ್ತುತ ತನ್ನ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ.. ಅವರು ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಡೇಟಿಂಗ್ ವದಂತಿ ಬಗ್ಗೆ ಮೌನ್ ಮುರಿದಿದ್ದಾರೆ..
ಸಂದರ್ಶನವೊಂದರಲ್ಲಿ ಡೇಟಿಂಗ್ ಸುದ್ದಿಗೆ ನಟಿ ಪ್ರತಿಕ್ರಿಯಿಸಿದ್ದು, ಈ ಸಂಬಂಧ ಮಾತುಕತೆಗಳು ನಿರಾಶಾದಾಯಕವಾಗಿವೆ ಎಂದು ಕೃತಿ ಸನನ್ ಹೇಳಿದ್ದಾರೆ.
ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ, ಕೃತಿ ಸನನ್ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದು, 'ನಾನು ಇದೀಗ ಮದುವೆಯಾಗುವ ಮೂಡ್ನಲ್ಲಿದ್ದೇನೆ ಮತ್ತು ಈ ಸುದ್ದಿ ತುಂಬಾ ಕಳವಳಕಾರಿಯಾಗಿದೆ' ಎಂದು ಹೇಳಿದ್ದಾರೆ.
'ಇಂತಹ ತಪ್ಪು ಮಾಹಿತಿ ಹರಡಿದಾಗ, ಅದನ್ನು ಕೇಳಲು ತುಂಬಾ ಕೋಪ ಬರುತ್ತದೆ. ಇದು ನನಗೆ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ನನ್ನ ಸ್ನೇಹಿತರು ನನಗೆ ಮೆಸೇಜ್ ಕಳುಹಿಸಿದ್ದಾರೆ, ಇದು ನಿಜವೇ? ಎಂದು ಆದರೆ ಇದು ನಿಜವಲ್ಲ ಎಂದು ನಾನು ಅವರಿಗೆ ಪದೇ ಪದೇ ವಿವರಿಸಬೇಕು' ಎಂದು ಹೇಳಿದರು.
ಕೃತಿ ಸನನ್ ಹೆಸರನ್ನು ಬೇರೋಬ್ಬರೊಂದಿಗೆ ಲಿಂಕ್ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಟೈಗರ್ ಶ್ರಾಫ್ನಿಂದ ಹಿಡಿದು ಪ್ರಭಾಸ್ವರೆಗಿನ ಹಲವಾರು ನಟರೊಂದಿಗೆ ನಟಿಯ ಹೆಸರು ಲಿಂಕ್ ಆಗಿತ್ತು.
ಕಬೀರ್ ಒಬ್ಬ ಉದ್ಯಮಿ ಮತ್ತು ತನಗಿಂತ 10 ವರ್ಷ ಚಿಕ್ಕವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ... ಅವರು ಯುಕೆಯಲ್ಲಿ ಜೊತೆಯಲ್ಲೇ ವಾಸಿಸುತ್ತಿದ್ದಾರೆ ಎನ್ನುವ ಹಲವಾರು ವದಂತಿಗಳು ಹರಿದಾಡುತ್ತಿವೆ..