Photos: ಮುದ್ದು ಮುದ್ದಾಗಿದೆ ನಟಿ ಕಾಜಲ್‌ ಅಗರ್ವಾಲ್‌ ಬೇಬಿ!!

Kajal Agarwal: ತಾಯಂದಿರ ದಿನ ವಿಶೇಷವಾಗಿ ಕಾಜಲ್ ಅಗರ್ವಾಲ್ ತಮ್ಮ ಮಗನ ಮೊದಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

Kajal Agarwal: 2022 ರ ವರ್ಷವು ಕಾಜಲ್ ಅಗರ್ವಾಲ್‌ ಪಾಲಿಗೆ ಹರ್ಷ ತಂದಿದೆ. ಇವರ ಜೀವನದಲ್ಲಿ ಮುದ್ದು ಮಗುವಿನ ಆಗಮನವಾಗಿದೆ. ಮಗಧೀರ ನಟಿ ತನ್ನ ಮೊದಲ ಮಗುವಿಗೆ ತಾಯಿಯಾಗಿದ್ದಾರೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್‌ ಈ ಪುಟಾಣಿಗೆ ನೀಲ್ ಎಂದು ಕರೆಯುತ್ತಾರೆ. ಈ ಕಂದಮ್ಮ ಭುವಿಗೆ ಬಂದಾಗಿನಿಂದಲೂ ಕಾಜಲ್‌ ಅಗರ್ವಾಲ್‌ ಅಭಿಮಾನಿಗಳು ನೀಲ್‌ನನ್ನು ನೋಡಲು ಕಾತುರರಾಗಿದ್ದಾರೆ. ಬೇಬಿ ನೀಲ್‌ನ ಯಾವುದೇ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ. ಆದರೆ ತಾಯಂದಿರ ದಿನ ವಿಶೇಷವಾಗಿ ಕಾಜಲ್ ಅಗರ್ವಾಲ್ ತಮ್ಮ ಮಗನ ಮೊದಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

1 /5

2022 ರ ವರ್ಷವು ಕಾಜಲ್ ಅಗರ್ವಾಲ್‌ ಪಾಲಿಗೆ ಹರ್ಷ ತಂದಿದೆ. ಇವರ ಜೀವನದಲ್ಲಿ ಮುದ್ದು ಮಗುವಿನ ಆಗಮನವಾಗಿದೆ. ಮಗಧೀರ ನಟಿ ತನ್ನ ಮೊದಲ ಮಗುವಿಗೆ ತಾಯಿಯಾಗಿದ್ದಾರೆ. ಬೇಬಿ ನೀಲ್‌ನ ಯಾವುದೇ ಚಿತ್ರಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ. ಆದರೆ ತಾಯಂದಿರ ದಿನ ವಿಶೇಷವಾಗಿ ಕಾಜಲ್ ಅಗರ್ವಾಲ್ ತಮ್ಮ ಮಗನ ಮೊದಲ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

2 /5

ಕಾಜಲ್ ಅಗರ್ವಾಲ್ ತನ್ನ ತಾಯಂದಿರ ದಿನದ ಪೋಸ್ಟ್‌ನಲ್ಲಿ ತಮ್ಮ ಪ್ರೀತಿಯ ಮಗನಿಗೆ ಮುದ್ದಾದ ಸಂದೇಶವೊಂದನ್ನು ಬರೆದಿದ್ದಾರೆ.  "ನನ್ನ ಮೊದಲ ಮಗು. ನೀನು ಎಷ್ಟು ಅಮೂಲ್ಯ. ನಾನು ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದ ಕ್ಷಣ, ನಿನ್ನ ಪುಟ್ಟ ಕೈಯನ್ನು ಹಿಡಿದು, ನಿನ್ನ ಬೆಚ್ಚಗಿನ ಉಸಿರನ್ನು ಅನುಭವಿಸಿ ನೋಡಿದೆ. ನಿನ್ನ ಸುಂದರವಾದ ಕಣ್ಣುಗಳನ್ನು ನೋಡಿದಾಗ, ನಾನು ಶಾಶ್ವತವಾಗಿ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನನಗೆ ತಿಳಿದಿತ್ತು. ನೀನು ನನ್ನ ಮೊದಲ ಮಗು, ನನ್ನ ಮೊದಲ ಮಗ, ನನ್ನ ಮೊದಲ ಎಲ್ಲವೂ. ತಾಯಿಯಾಗುವುದು ಏನೆಂದು ನೀನು ನನಗೆ ಕಲಿಸಿದೆ. ನನಗೆ ನಿಸ್ವಾರ್ಥವಾಗಿರಲು ಕಲಿಸಿದೆ. ಶುದ್ಧ ಪ್ರೀತಿ, ನನ್ನ ದೇಹದ ಹೊರಗೆ ನನ್ನ ಹೃದಯದ ತುಂಡನ್ನು ಹೊಂದಲು ಸಾಧ್ಯ ಎಂದು ನೀವು ನನಗೆ ಕಲಿಸಿದೆ" ಎಂದು ನಟಿ ಕಾಜಲ್‌ ಅಗರ್ವಾಲ್‌ ಬರೆದುಕೊಂಡಿದ್ದಾರೆ. 

3 /5

ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಕಾಜಲ್‌ ಈ ಪುಟಾಣಿಗೆ ನೀಲ್ ಎಂದು ಕರೆಯುತ್ತಾರೆ. ಈ ಕಂದಮ್ಮ ಭುವಿಗೆ ಬಂದಾಗಿನಿಂದಲೂ ಕಾಜಲ್‌ ಅಗರ್ವಾಲ್‌ ಅಭಿಮಾನಿಗಳು ನೀಲ್‌ನನ್ನು ನೋಡಲು ಕಾತುರರಾಗಿದ್ದಾರೆ. 

4 /5

ನಟಿ ಕಾಜಲ್​​ ಗರ್ಭಿಣಿಯಾದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಮೇಲಿಂದ ಮೇಲೆ ಪ್ರೆಗ್ನೆನ್ಸಿ ಫೋಟೋ ಹಂಚಿಕೊಳ್ಳುತ್ತಿದ್ದರು. ಜೊತೆಗೆ ತಾವು ಮಾಡ್ತಿದ್ದ ವರ್ಕೌಟ್ ಫೋಟೋ ಸಹ ಶೇರ್ ಮಾಡಿಕೊಂಡಿದ್ದರು.

5 /5

ಮಗಧೀರ ಚಿತ್ರದ ಬೆಡಗಿ ಕಾಜಲ್ ಅಗರವಾಲ್ 2020ರ ಅಕ್ಟೋಬರ್ ತಿಂಗಳಲ್ಲಿ ಬಹುಕಾಲದ ಗೆಳೆಯ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ಕಾಜಲ್‌ ಅಗರ್‌ವಾಲ್‌ ಏಪ್ರಿಲ್‌ 18 ರಂದು ಗಂಡುಮಗುವಿಗೆ ಜನ್ಮ ನೀಡಿದ್ದಾರೆ.