ʼಅಭಿಷೇಕ್‌ ಜೊತೆ ನನಗೆ ʼಅದನ್ನುʼ ಮಾಡೋದು ಇಷ್ಟವಿಲ್ಲʼ.. ಡಿವೋರ್ಸ್‌ ವದಂತಿ ಮಧ್ಯೆ ಕೊನೆಗೂ ಸತ್ಯ ಬಿಚ್ಚಿಟ್ಟ ನಟಿ ಐಶ್ವರ್ಯ ರೈ!!

 Aishwarya rai-Abhishek Bachchan: ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಈ ಇಬ್ಬರ ವಿಚ್ಛೇದನದ ಮಾತುಕತೆ ಮತ್ತೆ ವೇಗ ಪಡೆದುಕೊಂಡಿದೆ. ಆದರೆ ಇದುವರೆಗೂ ಅಭಿಷೇಕ್-ಐಶ್ವರ್ಯ ಅಥವಾ ಅವರ ಕುಟುಂಬದವರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 
 

1 /6

 ನಟಿ ಐಶ್ವರ್ಯ ರೈ ಬಾಲಿವುಡ್ ಅನ್ನು ಆಳಿದ ಸಮಯವಿತ್ತು. ಆದರೆ ಮದುವೆಯ ನಂತರ ಅವರು ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌.. ಇದಲ್ಲದೇ ಐಶ್ವರ್ಯಾ ಅನೇಕ ಹಿಟ್ ಚಿತ್ರಗಳನ್ನು ತಿರಸ್ಕರಿಸಿದ್ದಾರೆ.. ಆದರೆ ಅವೆಲ್ಲವೂ ಸೂಪರ್‌ಹಿಟ್‌ ಸಿನಿಮಾಗಳೇ..    

2 /6

ಐಶ್ವರ್ಯಾಗೆ 'ಕುಚ್ ಕುಚ್ ಹೋತಾ ಹೈ', 'ಮುನ್ನಾ ಭಾಯಿ ಎಂಬಿಬಿಎಸ್' ಮತ್ತು 'ಭೂಲ್ ಭುಲೈಯಾ' ಸಿನಿಮಾಗಳ ಆಫರ್ ಬಂದಿತ್ತು. ಆದರೆ ನಟಿ ಸಿನಿಮಾ ಮಾಡಲು ನಿರಾಕರಿಸಿದ್ದಾರೆ. ಶಾರುಖ್ ಖಾನ್ ಅಭಿನಯದ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲೂ ಐಶ್ವರ್ಯಾ ಅವರನ್ನು ಕೇಳಲಾಗಿತ್ತು ಎಂಬುದು ಕೆಲವೇ ಜನರಿಗೆ ತಿಳಿದಿರುವ ಒಂದು ವಿಷಯ. ಆದರೆ ಈ ಚಿತ್ರದಲ್ಲಿ ಪತಿ ಅಭಿಷೇಕ್ ಬಚ್ಚನ್ ಇರುವುದರಿಂದ ನಟಿ ಚಿತ್ರ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ..   

3 /6

‘ಹ್ಯಾಪಿ ನ್ಯೂ ಇಯರ್’ ಚಿತ್ರಕ್ಕೆ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಈ ಚಿತ್ರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಅಭಿಷೇಕ್ ಬಚ್ಚನ್ ಜೊತೆಗೆ ವಿವಾನ್ ಶಾ, ಸೋನು ಸೂದ್ ಮತ್ತು ಬೊಮನ್ ಇರಾನಿ ಕೂಡ ನಟಿಸಿದ್ದಾರೆ.  

4 /6

'ಹೌದು... 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕೆ ನನ್ನನ್ನು ಕೇಳಲಾಗಿತ್ತು... ನಾನು ಚಿತ್ರಕ್ಕೆ ಒಪ್ಪಿಕೊಂಡಿದ್ದರೆ ನನ್ನ ಮನಸ್ಸಿನಲ್ಲಿ ಒಂದು ನೆನಪು ಶಾಶ್ವತವಾಗಿ ಉಳಿಯುತ್ತಿತ್ತು. ಆದರೆ ಸಿನಿಮಾ ನನಗೆ ಮತ್ತು ಅಭಿಷೇಕ್‌ಗೆ ಇರಲಿಲ್ಲ. ಏಕೆಂದರೆ ನಾವು ಚಿತ್ರದಲ್ಲಿ ಜೋಡಿಯಾಗುತ್ತಿರಲಿಲ್ಲ... ಚಿತ್ರದಲ್ಲಿ ನಾನು ಮತ್ತು ಶಾರುಖ್ ಜೋಡಿಯಾಗಲಿದ್ದೆವು.. ಅದು ನನಗೆ ಮತ್ತು ಅಭಿಷೇಕ್‌ಗೆ ವಿಚಿತ್ರವಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹಾಗಾಗಿಯೇ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದೆ...' ಎಂದಿದ್ದಾರೆ ಐಶ್ವರ್ಯಾ ರೈ.  

5 /6

 "ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ, ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಲು ನಿರ್ಧರಿಸಿದರು. 2007ರಲ್ಲಿ ಐಶ್ವರ್ಯ-ಅಭಿಷೇಕ್ ಮದುವೆಯಾದರು. ಮದುವೆಯ ನಂತರ, ನಟಿ 2011 ರಲ್ಲಿ ಆರಾಧ್ಯ ಅವರಿಗೆ ಜನ್ಮ ನೀಡಿದರು.  

6 /6

ಐಶ್ವರ್ಯಾ ಮತ್ತು ಅಭಿಷೇಕ್ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದರು. ಐಶ್ವರ್ಯಾ ಮತ್ತು ಆರಾಧ್ಯ ಹಲವೆಡೆ ಕಾಣಿಸಿಕೊಂಡಿದ್ದಾರೆ. ಇಬ್ಬರ ಜೊತೆಯೂ ಅಭಿಷೇಕ್ ಇಲ್ಲ... ಅದಕ್ಕೇ ಅವರ ನಡುವೆ ಒಂದಷ್ಟು ವಾದ-ವಿವಾದಗಳು ನಡೆಯುತ್ತಿವೆ.. ಅಂತೆಲ್ಲಾ ಚರ್ಚೆಯಾಗುತ್ತಿದೆ.