Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?

Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ನಟಿ ಆರತಿ ಆ ಕಾಲದ ಟಾಪ್‌ ಕನ್ನಡ ನಟಿಯರಲ್ಲಿ ಒಬ್ಬರಾದವರು. ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಮಿನುಗು ತಾರೆ ಕಲ್ಪನಾ ಮುಂದೆ ಆರತಿಯನ್ನು ಚಿತ್ರರಂಗಕ್ಕೆ ಪರಿಚಯಿಸಿ ಸ್ಟಾರ್ ಪಟ್ಟ ತಂದುಕೊಟ್ಟರು.

2 /7

ಈ ಸಮಯದಲ್ಲಿಯೇ ಆರತಿ ಮತ್ತು ಪುಟ್ಟಣ್ಣ ಕಣಗಾಲ್‌ ನಡುವೆ ಪ್ರೀತಿ ಹುಟ್ಟಿತು ಎಂಬ ಮಾತಿದೆ. 1975ರಲ್ಲಿ ಬಿಳಿ ಹೆಂಡ್ತಿ ಸಿನಿಮಾ ಶೂಟಿಂಗ್​ ವೇಳೆ ಪುಟ್ಟಣ್ಣ ಕಣಗಾಲ್‌ ಮತ್ತು ಆರತಿ ವಿವಾಹವಾದರಂತೆ. ಮದುವೆಯಾಗಿ ಶೂಟಿಂಗ್‌ ಸೆಟ್‌ ಗೆ ತೆರಳಿದ್ದರಂತೆ. 

3 /7

ಪುಟ್ಟಣ್ಣ ಕಣಗಾಲ್‌ ಮತ್ತು ಆರತಿ ದಾಂಪತ್ಯ ಜೀವನವೂ ಸುಖವಾಗಿತ್ತು. ಇವರ ಪ್ರೀತಿಯ ಫಲವಾಗಿ ಯಶಸ್ವಿನಿ ಎಂಬ ಮಗಳು ಜನಿಸಿದಳು. ಆದರೆ ಕಾಲ ಕಳೆದಂತೆ ಮನಸ್ತಾಪ ಶುರುವಾಯಿತು. 

4 /7

ಪುಟ್ಟಣ್ಣ ಕಣಗಾಲ್​ ಕೋಪದಿಂದ ಸಂಬಂಧದಲ್ಲಿ ಬಿರುಕು ಮೂಡಿತು. ವೈವಾಹಿಕ ಜೀವನ ಹದಗೆಟ್ಟ ಸಮಯದಲ್ಲೇ ಆರತಿಗೆ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಪ್ರವಾಸೋದ್ಯಮ, ಕಾರ್ಮಿಕ, ಶಿಕ್ಷಣ ಸಚಿವರಾಗಿದ್ದ ಎಂ.ರಘುಪತಿ ಪರಿಚಯವಾಯಿತು.

5 /7

ಆರತಿ ಮತ್ತು ಸಚಿವ ಎಂ.ರಘುಪತಿ ನಡುವೆ ಒಳ್ಳೆಯ ಭಾಂದವ್ಯ ಬೆಳೆಯಿತು. ಆರತಿ ಮತ್ತು ಎಂ.ರಘುಪತಿ ನಡುವಿನ ಅತಿಯಾದ ಸ್ನೇಹದಿಂದ ಪುಟ್ಟಣ್ಣ ಕಣಗಾಲ್​ ಮನನೊಂದು ಖಿನ್ನತೆಗೆ ಜಾರಿದರು. ಸಿನಿಮಾಗಳಿಂದ ದೂರವಾಗಿ, ಹಾರ್ಟ್ ಅಟ್ಯಾಕ್​ ನಿಂದ ಪುಟ್ಟಣ್ಣ ಕಣಗಾಲ್‌ ಸಾವನ್ನಪ್ಪಿದ್ದರು. 

6 /7

ಸಚಿವ ಎಂ.ರಘುಪತಿ​ ಅವರು ಆರತಿ ಅವರನ್ನು ಎಂಎಲ್‌ಸಿ ಮಾಡಿದರು. ಜೆಪಿ ನಗರದಲ್ಲಿ ಬಿಡಿಎ ಕಡೆಯಿಂದ ದೊಡ್ಡ ಬಂಗಲೆ ದೊರೆಯಿತು. ಕಾರ್ಯಕ್ರಮವೊಂದರಲ್ಲಿ ಆರತಿಯ ಕೈ ಹಿಡಿದು ಎಂ.ರಘುಪತಿ ಕಾಣಿಸಿಕೊಳ್ಳುತ್ತಾರೆ. ಇಬ್ಬರು ಮದುವೆಯಾಗಿದ್ದಾರೆ ಎಂದು ವದಂತಿ ಹಬ್ಬುತ್ತದೆ. 

7 /7

ಕೆಲದಿನಗಳ ಬಳಿಕ ಎಂ.ರಘುಪತಿ ಮತ್ತು ಆರತಿ ನಡುವೆ ವೈಮನಸ್ಸು ಶುರುವಾಗುತ್ತದೆ. ಆರತಿ ಸಿನಿರಂಗದಿಂದಲೂ ದೂರ ಸರಿಯುತ್ತಾರೆ. ಕೊನೆಗೆ ಎಂ ರಘುಪತಿ ಕೂಡ ದೂರವಾಗುತ್ತಾರೆ.