"ಒಳ್ಳೆ ತೊಂಡೆಕಾಯಿ ಇದ್ದಂಗೆ ಇದ್ದಿಯ... ನನ್ಗೆ ಜರ್ಕ್‌ ಹೊಡಿತಾ ಇದೆ"- ಪಬ್ಲಿಕ್‌ನಲ್ಲಿಯೇ ಆ್ಯಂಕರ್​ ಅನುಪಮಾ ಗೌಡ ಬಗ್ಗೆ ನಟ ಉಪೇಂದ್ರ ಶಾಕಿಂಗ್‌ ಕಾಮೆಂಟ್

‌Actor Upendra Comment on Anupama Gowda: ನಟನೆ-ನಿರೂಪಣೆ ಎರಡರಲ್ಲೂ ಬ್ಯುಸಿ ಆಗಿರುವ ಅನುಪಮಾ ಗೌಡ ಬಗ್ಗೆ ನಟ ಉಪೇಂದ್ರ ಶಾಕಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ಅವರು ನೀಡಿದ ಹೇಳಿಕೆ ಕೇಳಿ ಅನುಪಮ ಅವರೇ ಒಂದು ಕ್ಷಣ ಶಾಕ್‌ ಆಗಿದ್ದು ಸುಳ್ಳಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ನಟನೆ-ನಿರೂಪಣೆ ಎರಡರಲ್ಲೂ ಬ್ಯುಸಿ ಆಗಿರುವ ಅನುಪಮಾ ಗೌಡ ಬಗ್ಗೆ ನಟ ಉಪೇಂದ್ರ ಶಾಕಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ಅವರು ನೀಡಿದ ಹೇಳಿಕೆ ಕೇಳಿ ಅನುಪಮ ಅವರೇ ಒಂದು ಕ್ಷಣ ಶಾಕ್‌ ಆಗಿದ್ದು ಸುಳ್ಳಲ್ಲ.  

2 /7

ಅಕ್ಕ ಧಾರಾವಾಹಿ ಮೂಲಕ ಸೀರಿಯಲ್‌ ಲೋಕಕ್ಕೆ ಕಾಲಿಟ್ಟ ಅನುಪಮಾ, ಬಿಗ್‌ ಬಾಸ್‌ʼನಲ್ಲಿ ಎರಡು ಬಾರಿ ಸ್ಪರ್ಧಿಸಿದ್ದರು. ಇದಲ್ಲದೆ ಹಲವಾರು ರಿಯಾಲಿಟಿ ಶೋಗಳಲ್ಲೂ ಪಾಲ್ಗೊಂಡಿದ್ದರು.  

3 /7

ಇನ್ನು ಕಲರ್ಸ್ ಕನ್ನಡದ ಜನಪ್ರಿಯ ಅವಾರ್ಡ್ಸ್‌ ಶೋ ಅನುಬಂಧ ಅವಾರ್ಡ್ಸ್‌ ವೇದಿಕೆಗೆ ನಟ ಉಪೇಂದ್ರ ಆಗಮಿಸಿದ್ದಾಗ, ಅನುಪಮಾ ಜೊತೆ ನಡೆಸಿದ ತಮಾಷೆಯ ಮಾತುಕತೆಯ ವಿಡಿಯೋ ವೈರಲ್‌ ಆಗಿದೆ.  

4 /7

ಸಿನಿಮಾವೊಂದರಲ್ಲಿ ಉಪೇಂದ್ರ ಅವರು ಹೇಳಿದ್ದ, 'ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ' ಎಂಬ ಡೈಲಾಗ್‌ ಕಾರಣದಿಂದಾಗಿಯೇ ನಾನಿನ್ನು ಮದುವೆಯಾಗಿಲ್ಲ ಎಂದು ಅನುಪಮಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ್ಪಿ, " ಆ ಡೈಲಾಗೇ ಪುಸ್ತಕದ ಬದನೆಕಾಯಿಯಮ್ಮ" ಎಂದು ಹೇಳಿದ್ದರು. ಅದರ ಪ್ರೋಮೋವನ್ನು ಈ ಹಿಂದೆ ಕಲರ್ಸ್‌ ಬಿಡುಗಡೆ ಮಾಡಿತ್ತು.  

5 /7

ಮತ್ತಷ್ಟು ತಮಾಷೆಯ ಮಾತು ಶುರು ಹಚ್ಚಿದ ಅನುಪಮಾ, "ಸರ್‌, ನೀವು ಮಾತ್ರ ಮದುವೆಯಾಗಿ ಮಕ್ಕಳು ಮಾಡಿಕೊಂಡು ಆ ಜೀವನ ನೋಡಿದ್ದೀರಿ, ನಮಗೆ ನಿಮ್ಮನ್ನು ನೋಡಿದರೆ ಹೊಟ್ಟೆ ಉರಿಯುತ್ತೆ" ಎಂದಿದ್ದರು. ಅದಕ್ಕೆ ವೇದಿಕೆಯಲ್ಲೇ ರಕ್ತಕಣ್ಣೀರು ಸ್ಟೈಲ್‌ʼನಲ್ಲಿ ಡೈಲಾಗ್‌ ಹೊಡೆದ ಉಪ್ಪಿ, "ಇಷ್ಟು ಸುಂದರವಾದ ಹುಡುಗಿ, ನನ್ನ ನೋಡಿದ್ರೆ ಹೊಟ್ಟೆ ಉರ್ಕೊಂತೀನಿ ಅಂತಿದ್ದಾಳೆ. ನೀವು ಯೆಸ್‌ ಅಂದ್ರೆ ಎಷ್ಟು ಜನ ಕ್ಯೂ ನಲ್ಲಿ ನಿಂತಿರ್ತಾರೆ" ಎಂದಾಗ,  ಹಾಗೆಲ್ಲ ಏನೂ ಇಲ್ಲ ಸರ್‌ ಎಂದು ಅನುಪಮಾ ಹೇಳಿದ್ದಾರೆ.  

6 /7

ಅದೇ ಸಂದರ್ಭದಲ್ಲಿ ಮತ್ತೊಮ್ಮೆ ತಮಾಷೆ ಹೇಳಿಕೆ ಕೊಟ್ಟ ಉಪೇಂದ್ರ, "ಬ್ಯೂಟಿ ಹಾಗೂ ಬುದ್ದಿವಂತಿಕೆಯ ಮಿಶ್ರಣ ನೀವು. ಒಳ್ಳೆ ತೊಂಡೆಕಾಯಿ ಇದ್ದಂಗೆ ಇದ್ದಿಯಲ್ಲಮ್ಮ..ನನಗೆ ಜರ್ಕ್‌ ಹೊಡಿತಾ ಇದೆ. ಇನ್ನು ಹುಡುಗರಿಗೆ ಹೆಂಗಾಗಿರರ್ಬೇಕು" ಎಂದಾಗ ಅನುಪಮಾ ಗೌಡ ಅರೆಕ್ಷಣ ಶಾಕ್‌ ಆಗಿ ಬಿಟ್ಟರು.  

7 /7

ಅಷ್ಟೇ ಅಲ್ಲದೆ, "ನಿಮ್ಮದು ಏನೋ ಪ್ಲ್ಯಾನ್‌ ಇದೆ. ನನ್ನನ್ನ ಮನೆಯಿಂದ ಹೊರಗಡೆ ಹಾಕಿಸಿ, ರೋಡಲ್ಲಿ ಮಲ್ಕೋಬೇಕು  ಅನ್ನೋ ಪ್ಲ್ಯಾನ್‌ ಮಾಡಿದಂತಿದೆ" ಎಂದು ಉಪ್ಪಿ ಹೇಳುತ್ತಿದ್ದಂತೆ, ಈ ಪ್ರೋಗ್ರಾಂಗೆ ಪ್ರಿಯಾಂಕ ಮೇಡಂ ಕೂಡ ಬರ್ತಿದ್ದಾರೆ ಎಂದು ಅನುಪಮಾ ಹೇಳಿದ್ದಾರೆ. ಅದಕ್ಕೆ, "ಹಾಗಿದ್ರೆ ಇದನ್ನೆಲ್ಲಾ ಅವರಿಗೆ ತೋರಿಸ್ತೀರಾ?" ಎಂದು ಉಪ್ರೇಂದ್ರ ಪ್ರಶ್ನಿಸಿದ್ದಾರೆ. ಆಗ ಅನುಪಮಾ ʼಹೌದುʼ ಎಂದಿದ್ದೇ ತಡ, " ಈ ಪ್ರೋಗ್ರಾಂನ ನೀವೇ ಮಾಡಿಕೊಳ್ಳಿ ನಾನು ಹೊರಡುತ್ತೇನೆ" ಎಂದು ಉಪೇಂದ್ರ ಹೇಳಿ ನಗುತ್ತಿದ್ದಾರೆ.