Vastu Tips For Kitchen: ಅಡುಗೆ ಮನೆಯಲ್ಲಿ ಎಂದಿಗೂ ಸಹ ಖಾಲಿ ಆಗಲೇಬಾರದು ಈ ವಸ್ತುಗಳು

Vastu Tips For Kitchen: ವಾಸ್ತುವಿನ ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಲಕ್ಷ್ಮೀ ಸ್ವರೂಪ ಎಂದು ಹೇಳಲಾಗುತ್ತದೆ. ಆ ವಸ್ತುಗಳು ಎಂದಿಗೂ ಸಹ ಖಾಲಿ ಆಗದಂತೆ ನೋಡಿಕೊಳ್ಳಬೇಕು.

Vastu Tips For Kitchen: ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ಮೂಲೆಯ ಬಗ್ಗೆಯೂ ಮತ್ತು ಮನೆಯಲ್ಲಿರುವ ಪ್ರತಿ ವಸ್ತುವಿನ ಬಗ್ಗೆಯೂ ಕೆಲವು ನಿಯಮಗಳನ್ನು ಹೇಳಲಾಗಿದೆ. ಅಡುಗೆಮನೆಗೆ ಸಂಬಂಧಿಸಿದಂತೆಯೂ ಸಹ ವಾಸ್ತುವಿನಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಐದು ವಸ್ತುಗಳು ಎಂದಿಗೂ ಸಹ ಖಾಲಿ ಆಗಬಾರದು. ಮನೆಯಲ್ಲಿ ಈ ವಸ್ತುಗಳು ಖಾಲಿ ಆಗುವುದರಿಂದ ಧನ ನಷ್ಟ ಉಂಟಾಗುತ್ತದೆ. ಸಂಪತ್ತಿನ ದೇವತೆಯಾದ ಲಕ್ಷ್ಮಿಯು ಕೋಪಗೊಳ್ಳಬಹುದು ಎಂದು ನಂಬಲಾಗಿದೆ. ಆ ವಸ್ತುಗಳು ಯಾವುವು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಉಪ್ಪು- ಮನೆಯಲ್ಲಿ ಉಪ್ಪು ಖಾಲಿಯಾಗುತ್ತಿದ್ದರೆ, ಅದು ಮುಗಿಯುವ ಮೊದಲು ತಕ್ಷಣ ಅದನ್ನು ತನ್ನಿ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮನೆಯಲ್ಲಿ ಉಪ್ಪು ಖಾಲಿಯಾದರೆ ಅದು ನಕಾರಾತ್ಮಕತೆಯ ಸಂಕೇತವಾಗಿದೆ ಎಂದು ನಂಬಲಾಗಿದೆ. ಇದರಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಇದು ಮನೆಯ ಮಹಿಳೆಯರ ಮೇಲೂ ಕೆಟ್ಟ ಪರಿಣಾಮ ಉಂಟು ಮಾಡುವುದರ ಜೊತೆಗೆ ತಾಯಿ ಲಕ್ಷ್ಮಿ ಅಂತಹ ಮನೆಯಲ್ಲಿ ನೆಲೆಸುವುದಿಲ್ಲ ಎನ್ನಲಾಗುತ್ತದೆ. 

2 /5

ಗೋಧಿ ಹಿಟ್ಟು- ವಾಸ್ತು ಶಾಸ್ತ್ರದಲ್ಲಿ ಗೋಧಿ ಹಿಟ್ಟಿನ ಬಗ್ಗೆ ಹಲವು ನಂಬಿಕೆಗಳಿವೆ. ಅಡುಗೆಮನೆಯಲ್ಲಿ ಗೋಧಿ ಹಿಟ್ಟು ಎಂದಿಗೂ ಖಾಲಿ ಆಗಬಾರದು.  ಇದರಿಂದ ಮನೆಯಲ್ಲಿ ಬಡತನ ಬರುತ್ತದೆ. ಇದರೊಂದಿಗೆ, ವ್ಯಕ್ತಿಯು ಗೌರವದ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.

3 /5

ಅಕ್ಕಿ- ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಕ್ಕಿಯಿಂದ ತಯಾರಿಸಿದ ಅಕ್ಷತೆಯನ್ನು ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ, ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಅಕ್ಕಿ ಸಂಪೂರ್ಣವಾಗಿ ಖಾಲಿಯಾಗಲು ಬಿಡಬೇಡಿ. ಅದು ಮುಗಿಯುವ ಮೊದಲು ಹೆಚ್ಚು ಅಕ್ಕಿ ತನ್ನಿ. ಯಾವ ಮನೆಯಲ್ಲಿ ಲಕ್ಷ್ಮಿ ಸ್ವರೂಪವಾದ ಅಕ್ಕಿ ಖಾಲಿ ಆಗುತ್ತದೆಯೋ ಅಂತಹ ಮನೆಯಲ್ಲಿ ಶುಕ್ರ ದೋಷ ಉಂಟಾಗುತ್ತದೆ ಮತ್ತು ವೈಭವವು ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

4 /5

ಸಾಸಿವೆ ಎಣ್ಣೆ- ವಾಸ್ತು ಶಾಸ್ತ್ರದಲ್ಲಿ ಸಾಸಿವೆ ಎಣ್ಣೆಯ ಬಗ್ಗೆಯೂ ಹೇಳಲಾಗಿದೆ. ಮನೆಯಲ್ಲಿ ಸಾಸಿವೆ ಎಣ್ಣೆ ಸಂಪೂರ್ಣವಾಗಿ ಖಾಲಿ ಆಗಬಾರದು. ಸಾಸಿವೆ ಎಣ್ಣೆಯು ಶನಿ ದೇವನಿಗೆ ಸಂಬಂಧಿಸಿದೆ. ಮನೆಯಲ್ಲಿ ಸಾಸಿವೆ ಎಣ್ಣೆ ಖಾಲಿಯಾದರೆ ಶನಿದೇವ ಕೋಪಗೊಳ್ಳುತ್ತಾನೆ. ಆದ್ದರಿಂದ, ಯಾವಾಗಲೂ ಸಾಸಿವೆ ಎಣ್ಣೆಯನ್ನು ಅಡುಗೆಮನೆಯಲ್ಲಿ ಇರಿಸಿ. ಸಾಧ್ಯವಾದರೆ ಶನಿವಾರ ಸಾಸಿವೆ ಎಣ್ಣೆಯನ್ನು ದಾನ ಮಾಡಿ. 

5 /5

ಅರಿಶಿನ - ಅರಿಶಿನವನ್ನು ತಿನ್ನುವುದರ ಜೊತೆಗೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಜ್ಯೋತಿಷ್ಯದಲ್ಲಿಯೂ ಅರಿಶಿನಕ್ಕೆ ಮಹತ್ವ ನೀಡಲಾಗಿದ್ದು, ಹಲವು ಪರಿಹಾರಗಳನ್ನು ಹೇಳಲಾಗಿದೆ. ಅಡುಗೆ ಮನೆಯಲ್ಲಿ ಅರಿಶಿನ  ಖಾಲಿ ಆದರೆ ಗುರುದೋಷ ಬರುತ್ತದೆ ಎಂಬ ನಂಬಿಕೆ ಇದೆ. ಅರಿಶಿನ ಮತ್ತು ಹಳದಿ ಬಣ್ಣವು ವಿಷ್ಣುವಿಗೆ ಬಹಳ ಪ್ರಿಯವಾದುದು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಆದ್ದರಿಂದ, ಅಡುಗೆಮನೆಯಲ್ಲಿ ಎಂದಿಗೂ ಸಹ ಅರಿಶಿನ ಖಾಲಿ ಆಗದಂತೆ ಮುನ್ನೆಚ್ಚರಿಕೆ ವಹಿಸಿ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ