Aadhaar Card Alert: ಆಧಾರ್ ಕೇಂದ್ರಕ್ಕೆ ಸುತ್ತುವ ಅಗತ್ಯವಿಲ್ಲ, ಈ ಆನ್‌ಲೈನ್ ಸೇವೆ ಮತ್ತೆ ಪ್ರಾರಂಭ

                    

ಆಧಾರ್ ಕಾರ್ಡ್‌ನಲ್ಲಿ ಅನೇಕ ಮಾಹಿತಿಗಳನ್ನು ನವೀಕರಿಸಲು ಆಧಾರ್ ಸೇವಾ ಕೇಂದ್ರ, ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹಲವು ಬಾರಿ ಸುತ್ತಬೇಕಾಗುತ್ತದೆ.

1 /6

ನವದೆಹಲಿ: ಕೋಟ್ಯಂತರ ಆಧಾರ್ ಕಾರ್ಡ್ ಬಳಕೆದಾರರಿಗೆ ಆಧಾರ್ ಕಾರ್ಡ್ ಒದಗಿಸುವ ಯುಐಡಿಎಐ ಮತ್ತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈಗ ನೀವು ಮನೆಯಿಂದಲೇ ಆಧಾರ್-ಸಂಬಂಧಿತ ಜನಸಂಖ್ಯಾ ವಿವರಗಳನ್ನು ನವೀಕರಿಸಬಹುದು. ಇದಕ್ಕಾಗಿ ಈಗ ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ. ಈ ವಿವರಗಳಲ್ಲಿ ಕಾರ್ಡ್‌ದಾರರು ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಮತ್ತು ಲಿಂಗವನ್ನು ಸುಲಭವಾಗಿ ನವೀಕರಿಸಲು ಸಾಧ್ಯವಾಗುತ್ತದೆ.

2 /6

Uidai.gov.in/images/AadhaarHandbook2020.pdf ನಲ್ಲಿ ಆಧಾರ್ ಕೈಪಿಡಿಯ ಪಿಡಿಎಫ್ ಫೈಲ್ ಇದೆ. ಈ ಕೈಪಿಡಿಯಲ್ಲಿ ಆಧಾರ್‌ನಲ್ಲಿ ಹೆಸರನ್ನು ಬದಲಾಯಿಸುವುದರಿಂದ ಯಾವುದೇ ರೀತಿಯ ತಿದ್ದುಪಡಿಗಳನ್ನು ಸರಿಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನೀಡಲಾಗಿದೆ.

3 /6

ಆಧಾರ್‌ನಲ್ಲಿ, ನೀವು ಡಾಕ್ಯುಮೆಂಟ್ ಇಲ್ಲದೆ ಇಮೇಲ್ ಐಡಿಯನ್ನು ಬದಲಾಯಿಸಬಹುದು ಅಥವಾ ಸೇರಿಸಬಹುದು. ಇದಕ್ಕಾಗಿ ಆಧಾರ್ ಸೇವಾ ಕೇಂದ್ರದಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆನ್‌ಲೈನ್ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವ ಮೂಲಕ ನೀವು ಈ ಕೆಲಸವನ್ನು ಮಾಡಬಹುದು.

4 /6

ನೀವು ನಗರವನ್ನು ಬದಲಾಯಿಸುತ್ತಿದ್ದರೆ ಅಥವಾ ಮನೆಯನ್ನು ಬದಲಾಯಿಸುತ್ತಿದ್ದರೆ, ಆಧಾರ್ ಕಾರ್ಡ್ (Aadhaar Card) ಅನ್ನು ನವೀಕರಿಸುವುದು ನಿಮಗೆ ಮುಖ್ಯವಾಗಿದೆ. ಇದಕ್ಕಾಗಿ ಮೊದಲು ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕಾಗಿತ್ತು. ಈಗ ಈ ಸೌಲಭ್ಯವು ಆನ್‌ಲೈನ್ನಲ್ಲಿಯೂ  ಲಭ್ಯವಿದೆ. ಇದನ್ನೂ ಓದಿ: ಯಾವುದೇ ದಾಖಲೆಗಲಿಲ್ಲದೆ ಆಧಾರ್‌ನಲ್ಲಿ ಮೊಬೈಲ್ ನಂಬರ್ ನವೀಕರಿಸಲು ಇಲ್ಲಿದೆ ಸುಲಭ ವಿಧಾನ

5 /6

ಯುಐಡಿಎಐ (UIDAI) ಪ್ರಕಾರ ಭಾರತದಲ್ಲಿ 1.30 ಶತಕೋಟಿಗೂ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ನೀಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ಆಧಾರ್ ಕಾರ್ಡ್ ಬಳಕೆ ಹೆಚ್ಚಾಗಿದೆ. ಜನರು ತಮ್ಮ ಆಧಾರ್ ವಿವರಗಳನ್ನು ಆಗಾಗ್ಗೆ ನವೀಕರಿಸುತ್ತಿದ್ದಾರೆ ಎಂದು ಕಂಡುಬಂದಿದೆ. ಇದನ್ನೂ ಓದಿ: Aadhaar ಮೂಲಕ ನಿಮಿಷಗಳಲ್ಲಿ ಉಚಿತವಾಗಿ ಪಡೆಯಿರಿ PAN Card

6 /6

ಆಧಾರ್‌ನಲ್ಲಿ ಬಯೋಮೆಟ್ರಿಕ್ ತರಹದ ಫೋಟೋ ಬದಲಾವಣೆಗಳನ್ನು ಮಾಡಲು 100 ರೂಪಾಯಿ ತೆಗೆದುಕೊಳ್ಳುತ್ತದೆ. ಲಿಂಗವನ್ನು ಬದಲಾಯಿಸಲು ಅಥವಾ ಸರಿಪಡಿಸಲು ಯುಐಡಿಎಐ ನಿಮಗೆ ಅನುಮತಿಸುತ್ತದೆ. ಈ ಕೆಲಸವನ್ನು ಆಧಾರ್ ಸೇವಾ ಕೇಂದ್ರದಿಂದಲೂ ಮಾಡಲಾಗುವುದು.