ಮಾರುಕಟ್ಟೆಗೆ ಬರಲಿದೆ 7 ಆಸನಗಳ ಮಾರುತಿ ಸುಜುಕಿ ವ್ಯಾಗನಾರ್!

   

  • Mar 30, 2018, 15:36 PM IST
1 /6

ಮಾರುತಿ ಸುಜುಕಿ ತನ್ನ ಮೆಚ್ಚಿನ ಕಾರುಗಳಲ್ಲಿ ಒಂದಾದ ವ್ಯಾಗನಾರ್(WagonR), ಇದೀಗ ಮತ್ತಷ್ಟು ವಿಶಾಲವಾದ ಸ್ಥಳಾವಕಾಶದೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಹಿಂದಿನ ಮಾದರಿಯ ವ್ಯಾಗನಾರ್ ಕಾರಿಗಿಂತ ಬಹಳ ವಿಭಿನ್ನವಾಗಿದೆ. ಈ ಕಾರು 7 ಆಸನಗಳನ್ನು ಹೊಂದಿರಲಿದ್ದು, ಮತ್ತಷ್ಟು ವಿಶಾಲತೆ, ಹೆಚ್ಚು ಸಾಮರ್ಥ್ಯವನ್ನೂ ಹೊಂದಿದೆ. ಈ ವರ್ಷ ಹಬ್ಬದ ಸೀಸನ್'ನಲ್ಲಿ ಈ ಕಾರು ಮಾರುಕಟ್ಟೆಗೆ ಬರಲಿದೆ. 

2 /6

ನೂತನ ಮಾದರಿಯ ವ್ಯಾಗನಾರ್ ಕಾರು 1.2-ಲೀಟರ್ 3-ಸಿಲಿಂಡರ್'ನ ಪೆಟ್ರೋಲ್ ಎಂಜಿನ್ ಹೊಂದಿದೆ. 3 ಸಿಲಿಂಡರ್ ಎಂಜಿನ್ 84 ಬಿಎಚ್ಪಿ ಸಾಮರ್ಥ್ಯದೊಂದಿಗೆ 115nm ಟಾರ್ಕ್(ತಿರುಗುಬಲ)ಅನ್ನು ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ (ಎಎಂಟಿ) ಎರಡೂ ಆಯ್ಕೆಗಳನ್ನೂ ಈ ಕಾರಿನಲ್ಲಿ ಕಾಣಬಹುದು.

3 /6

ಮಾರುತಿ ವ್ಯಾಗನಾರ್ ಕಾರು 3 ವಿಧದಲ್ಲಿ ಬಿಡುಗಡೆಯಾಗುತ್ತಿದ್ದು, R ಬೇಸ್, R ಟಾಪ್ ಮತ್ತು R CNG ಹೊಂದಿರುತ್ತದೆ. ಇದಲ್ಲದೆ, ವ್ಯಾಗನ್ಆರ್ CNG ಮತ್ತು LPG ಇಂಧನ ಮಾದರಿಯಲ್ಲಿಯೂ ದೊರೆಯಲಿದೆ. 

4 /6

ಮಾಹಿತಿಯ ಪ್ರಕಾರ, ಕಂಪನಿಯು ಈ ಕಾರನ್ನು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಈ ಕಾರಿನ ಆರಂಭಿಕ ಬೆಲೆ 5.2 ಲಕ್ಷ ರೂ.ಗಳಾಗಿರಲಿದೆ. ದೆಹಲಿಯಲ್ಲಿ ಆರ್-ಬೇಸ್ ಎಕ್ಸ್ ಶೋರೂಮ್ ಬೆಲೆ 5.2 ಲಕ್ಷ ರೂ., ಆರ್ ಟಾಪ್ ಬೆಲೆ 6.5 ಲಕ್ಷ ರೂ. ಮತ್ತು ಆರ್ ಸಿಎನ್ ಜಿ ಬೆಲೆ 6.3 ಲಕ್ಷ ರೂ. ಆಗಿರಲಿದೆ.  

5 /6

ವ್ಯಾಗನಾರ್ 7 ಆಸನಗಳ ಲಿಮಿಟೆಡ್ ಆವೃತ್ತಿಯಲ್ಲಿ ಕಾರಿನ ಬಾಡಿ ಗ್ರಾಫಿಕ್ಸ್'ಗೆ ನೂತನ ಲುಕ್ ನೀಡಲಾಗಿದೆ. ಸೆಂಟ್ರಲ್ ಲಾಕಿಂಗ್, ಸೆಕ್ಯುರಿಟಿ ಅಲಾರಾಂ, ಕೀಲಿಕೈ ಇಲ್ಲದ ಪ್ರವೇಶದೊಂದಿಗೆ ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್, ಬ್ಲೂಟೂತ್ ಜೊತೆಗೆ ಡಬಲ್ ಡಿನ್ ಸ್ಟಿರಿಯೊ ಮತ್ತು ಪ್ರೀಮಿಯಂ ಆಸನಗಳ ಫ್ಯಾಬ್ರಿಕ್ನೊಂದಿಗೆ ಪವರ್ ವಿಂಡೋಗಳನ್ನು ಹೊಂದಿದೆ. ಕಾರಿನ ಮುಂಭಾಗ ಮತ್ತು ಹಿಂಭಾಗ ಹಳೆಯ ಮಾದರಿಯ ವ್ಯಾಗನಾರ್ ರೀತಿಯಲ್ಲೇ ಇದೆ.

6 /6

ಮಾರುತಿ ವ್ಯಾಗಾನಾರ್'ನ ಎಂಪಿವಿ, ವ್ಯಾಗಾನಾರ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಇದರಲ್ಲಿ ಮಾರುತಿ ಸುಜುಕಿಯ ಹೊಸ ವಿನ್ಯಾಸ ಅಂಶಗಳನ್ನು ಕಾಣಬಹುದು. ಪ್ರಸ್ತುತ ವ್ಯಾಗನಾರ್'ಗಿಂತ ಹೆಚ್ಚು ವಿಶಾಲವಾಗಿದೆ. ಹೊಸ ವ್ಯಾಗನಾರ್ 14 ಇಂಚಿನ ಅಲಾಂಚ್ ವ್ಹೀಲ್, ರೆಗ್ಯುಲರ್ ಹ್ಯಾಲೊಜೋನ್ ಹೆಡ್ ಲ್ಯಾಂಪ್ಸ್ ಮತ್ತು ರೂಫ್ ರೆಲ್ಸ್'ಗಳೊಂದಿಗೆ ಹಲವು ವಿಶೇಷತೆಗಳನ್ನು ಹೊಂದಿದೆ. ಹೊಸ ಕಾರಿನಲ್ಲಿ ಮೂರು ಸಾಲುಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.