PICS: ರಾಯ್ಬರೇಲಿ ಬಳಿ ಹಳಿ ತಪ್ಪಿದ ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರೈಲು

ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ ಕಾರಣ ಇಲ್ಲಿಯವರೆಗೆ  7 ಜನರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ.
 

  • Oct 10, 2018, 10:52 AM IST

ಬುಧವಾರ (ಅಕ್ಟೋಬರ್ 10) ಉತ್ತರಪ್ರದೇಶದ ರಾಯ್ಬರೇಲಿಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರೈಲು ರಾಯ್ಬರೇಲಿಯ ಹರ್ಚಂದ್ಪುರ್ ರೈಲ್ವೆ ನಿಲ್ದಾಣದ ಬಳಿ ಬೆಳಿಗ್ಗೆ 6.05 ಕ್ಕೆ ಅಪಘಾತಕ್ಕೀಡಾಗಿದೆ. ಹರ್​ಚಂದ್ ರೈಲು ನಿಲ್ದಾಣ 50 ಮೀಟರ್​ ದೂರವಿರುವಾಗ ರೈಲಿನ ಇಂಜಿನ್​ ಸಹಿತ ರೈಲಿನ ಆರು ಬೋಗಿಗಳು ಹಳಿತಪ್ಪಿವೆ. 

1 /5

ಇತ್ತೀಚೆಗೆ ರೈಲು ಅಪಘಾತಗಳು ಶೇ. 6 ರಷ್ಟು ಕಡಿಮೆಯಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಅದೇ ಸಮಯದಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರಾದ ಅಶ್ವನಿ ಲೋಹಾನಿ ಅವರು ದೇಶದಲ್ಲಿ ಟ್ರ್ಯಾಕ್ಗಳ ಸಂಖ್ಯೆಯನ್ನು ಬದಲಿಸಲು ಮತ್ತು ರೈಲ್ವೆಯ ರಚನೆಯನ್ನು ಬಲಗೊಳಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದರಿಂದಾಗಿ ರೈಲ್ವೆ ಪ್ರಯಾಣಿಕರು ಸುರಕ್ಷಿತ ಪ್ರಯಾಣವನ್ನು ಮಾಡಬಹುದು. ಗಮನಾರ್ಹವಾಗಿ, ಅಪಘಾತ ಸಂಭವಿಸಿದ ಮಾರ್ಗವು ಡೀಸೆಲ್ ಎಂಜಿನ್ ದ್ದಾಗಿದೆ, ವಿದ್ಯುದೀಕರಣ ಕಾರ್ಯವು ಇದೀಗ ಇಲ್ಲಿ ಪೂರ್ಣಗೊಂಡಿಲ್ಲ ಎನ್ನಲಾಗಿದೆ.  

2 /5

ಅಪಘಾತದ ನಂತರ, ಹೆಚ್ಚಿನ ಸಂಖ್ಯೆಯ ಸ್ಥಳೀಯ ಜನರು ಸ್ಥಳವನ್ನು ತಲುಪಿ, ಬೋಗಿಗಳಲ್ಲಿ ಸಿಲುಕಿದ್ದವರಲ್ಲಿ ಕೆಲವು ಪ್ರಯಾಣಿಕಾರನ್ನು ಪಾರುಮಾಡಿದರು. ಸ್ಥಳದಲ್ಲೇ ಮೃತಪಟ್ಟ ಕೆಲವರನ್ನೂ ಕೂಡ ಸ್ಥಳೀಯರು ಬೋಗಿಗಳಿಂದ ಹೊರತೆಗೆದಿದ್ದಾರೆ.  ಲಕ್ನೋ ಮತ್ತು ವಾರಣಾಸಿಯ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

3 /5

ಈ ಘಟನೆಯಲ್ಲಿ, ಎಂಜಿನ್ ಜೊತೆಗೆ 06 ಬೋಗಿಗಳು ಹಳಿ ತಪ್ಪಿರುವ ಬಗ್ಗೆ ವರದಿಯಾಗಿದೆ. ವರದಿಗಳ ಪ್ರಕಾರ ಮೊದಲಿ ಎಂಜಿನ್ ಹಳಿ ತಪ್ಪಿದ್ದು, ನಂತರ ಬೋಗಿಗಳು ಹಳಿತಪ್ಪಿವೆ ಎನ್ನಲಾಗಿದೆ.

4 /5

ಅಪಘಾತವು ತುಂಬಾ ಭಯಾನಕವಾಗಿದ್ದು ಬೋಗಿಗಳು ಒಂದರ ಮೇಲೆ ಒಂದು ಉರುಳಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  ಮತ್ತೊಂದೆಡೆ ಕೆಲವು ಬೋಗಿಗಳ ಚಕ್ರಗಳು ರೈಲಿನಿಂದ ಬೇರ್ಪಟ್ಟಿವೆ. ಆ ಸಮಯದಲ್ಲಿ ರೈಲು ಹೆಚ್ಚು ವೇಗವಾಗಿ ಚಲಿಸುತ್ತಿರಲಿಲ್ಲ ಎನ್ನಲಾಗಿದೆ.

5 /5

ನ್ಯೂ ಫರಕ್ಕಾ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ ಕಾರಣ ಇಲ್ಲಿಯವರೆಗೆ  7 ಜನರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ.