Powerful Electric Scooter: ಉತ್ತಮ ಕಾರ್ಯಕ್ಷಮತೆ ಜೊತೆಗೆ ನಿಮ್ಮ ಬಜೆಟ್‌ನಲ್ಲಿ ಲಭ್ಯವಾಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು

                           

ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ 100 ರೂಪಾಯಿ ಗಡಿ ದಾಟಿದೆ.  ಇದರ ಜೊತೆಗೆ ದ್ವಿಚಕ್ರ ವಾಹನಗಳ ಬೆಲೆಯಿಂದ ನೀವು ತೊಂದರೆಗೀಡಾಗಿದ್ದರೆ ಚಿಂತಿಸಬೇಡಿ. ನಿಮ್ಮ ಅಗತ್ಯವನ್ನು ಪೂರೈಸುವ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದು ಮಾತ್ರವಲ್ಲ ನಿಮ್ಮ ಬಜೆಟ್‌ನಲ್ಲಿ ಲಭ್ಯವಾಗಲಿವೆ.  ಇಲ್ಲಿ ನಾವು ಅಂತಹ ಐದು ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹೀರೋ ಎಲೆಕ್ಟ್ರಿಕ್ನಿಂದ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್ ಹೀರೋ ಆಪ್ಟಿಮಾ ಎಚ್ಎಕ್ಸ್ (ಡ್ಯುಯಲ್ ಬ್ಯಾಟರಿ). ಇದರ ದೆಹಲಿಯ ಎಕ್ಸ್ ಶೋ ರೂಂ ಬೆಲೆ 78,640 ರೂ. ಇದು 550 | 1200 ವ್ಯಾಟ್‌ಗಳ ಮೋಟಾರ್ ಹೊಂದಿದೆ. ಸಿಟಿ ಸ್ಪೀಡ್ ರೂಪಾಂತರದಲ್ಲಿ, ಈ ಸ್ಕೂಟರ್‌ನ ವೇಗ ಗಂಟೆಗೆ 42 ಕಿಲೋಮೀಟರ್‌ಗಿಂತ ಹೆಚ್ಚು. ಇದು ಎಲ್ಇಡಿ ಲ್ಯಾಂಪ್, ರಿಮೋಟ್ ಲಾಕ್ ಮತ್ತು ಆಂಟಿ-ಥೆಫ್ಟ್ ಅಲಾರ್ಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್ಬಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಈ ಸ್ಕೂಟರ್ ಒಮ್ಮೆ ಪೂರ್ಣ ಚಾರ್ಜ್‌ನಲ್ಲಿ 122 ಕಿ.ಮೀ ವರೆಗೆ ಚಲಿಸಲಿದೆ. ಬ್ಯಾಟರಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ  ಎಂದು ಕಂಪನಿ ತಿಳಿಸಿದೆ (Photo Credit- Zee Business)

2 /5

ದ್ವಿಚಕ್ರ ವಾಹನ ಕಂಪನಿ ಟಿವಿಎಸ್ ಮೋಟಾರ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ (TVS iCube Electric) ಉತ್ತಮ ಆಯ್ಕೆಯಾಗಿದೆ. ದೆಹಲಿಯಲ್ಲಿ ಇದರ ಆನ್-ರೋಡ್ ಬೆಲೆ 1,08,012 ರೂ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ 4.4 ಕೆವಿ ಎಲೆಕ್ಟ್ರಿಕ್ ಮೋಟರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 78 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ, ಇದು 75 ಕಿ.ಮೀ. ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ 4.2 ಸೆಕೆಂಡುಗಳಲ್ಲಿ ಶೂನ್ಯದಿಂದ 40 ಕಿ.ಮೀ ವೇಗವನ್ನು ಹಿಡಿಯಬಲ್ಲದು  ಎಂದು ಕಂಪನಿ ಹೇಳಿದೆ. (Photo Credit- Zee Business)  

3 /5

ಬಜಾಜ್ ಆಟೋ ತನ್ನ ಹಳೆಯ ಬ್ರಾಂಡ್ ಚೇತಕ್ ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಮಾರುಕಟ್ಟೆಗೆ ತಂದಿದೆ. ಇದು ನಿಮ್ಮ ಅಗತ್ಯವನ್ನೂ ಪೂರೈಸುತ್ತದೆ. ಇದರ ಆರಂಭಿಕ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 1,15,000 ರೂ. ಇದು ಒಂದೇ ಪೂರ್ಣ ಚಾರ್ಜ್‌ನಲ್ಲಿ 95 ಕಿ.ಮೀ ಪ್ರಯಾಣಿಸುತ್ತದೆ. ಇದನ್ನು 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲಾಗುತ್ತದೆ. 60 ನಿಮಿಷಗಳಲ್ಲಿ 25 ಪ್ರತಿಶತದವರೆಗೆ ತ್ವರಿತ ಚಾರ್ಜ್ ಆಗುತ್ತದೆ. (Photo Credit- Zee Business) ಇದನ್ನೂ ಓದಿ- Best Electric Scooters! ಪೂರ್ಣ ಚಾರ್ಜ್‌ನಲ್ಲಿ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್‌ಗಳ ಬೆಲೆ, ವೈಶಿಷ್ಟ್ಯ ತಿಳಿಯಿರಿ

4 /5

ವಿನ್ಯಾಸ ಮತ್ತು ಕಾರ್ಯಕ್ಷಮತೆಯಲ್ಲಿ ನಿಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಈ ಸ್ಕೂಟರ್ ಹೊಂದಿದೆ. ಇದರ ಎಕ್ಸ್ ಶೋ ರೂಂ ಬೆಲೆ 1,17,600 ರೂ. ಇದು ಮೊಬೈಲ್ ಚಾರ್ಜಿಂಗ್ (Mobile Charging) ಯುಎಸ್‌ಬಿ ಪೋರ್ಟ್, ಸ್ಟೈಲಿಶ್ ಟೈಲ್ ಲ್ಯಾಂಪ್, ದೊಡ್ಡ ಫುಟ್‌ಸ್ಪೇಸ್ ಹೊಂದಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 139 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ನೀವು ಅದನ್ನು ಮೊಬೈಲ್‌ಗೆ ಸಂಪರ್ಕಿಸಬಹುದು ಮತ್ತು ಹಲವು ವೈಶಿಷ್ಟ್ಯಗಳನ್ನು ಬಳಸಬಹುದು ಎಂದು ಕಂಪನಿ ತಿಳಿಸಿವೆ. (Photo Credit- Zee Business) ಇದನ್ನೂ ಓದಿ- Piaggio One ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ತಿಳಿಯಿರಿ ಇದರ ವೈಶಿಷ್ಟ್ಯ

5 /5

ಅಗ್ಗದ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಉತ್ತಮ ಆಯ್ಕೆಯಾಗಿದೆ. ದೆಹಲಿಯಲ್ಲಿ ಇದರ ಬೆಲೆ 56,940 ರೂ. ಇದು ಪೋರ್ಟಬಲ್ ಬ್ಯಾಟರಿ, ಟೆಲಿಸ್ಕೋಪಿಕ್ ಸಸ್ಪೆನ್ಸ್, ಅಲಾಯ್ ವೀಲ್, ಯುಎಸ್ಬಿ ಚಾರ್ಜರ್ ಇತ್ಯಾದಿಗಳನ್ನು ಹೊಂದಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 85 ಕಿ.ಮೀ ಪ್ರಯಾಣಿಸುತ್ತದೆ. ಇದರ ಉನ್ನತ ವೇಗ ಗಂಟೆಗೆ 25 ಕಿಲೋಮೀಟರ್. ಈ ಸ್ಕೂಟರ್ 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. (Photo Credit- Zee Business)