ರೋಬೊಟಿಕ್ ತಂತ್ರಜ್ಞಾನದ ಮೂಲಕ ಮಷಿನ್ನಿಂದಲೇ ಸಂಪೂರ್ಣ ಕೆಲಸ ನಡೆಯುತ್ತಿದ್ದು ಇಡೀ ಕಟ್ಟಡವನ್ನು ಕೇವಲ 45 ದಿನಗಳಲ್ಲಿ ಮುಗಿಸುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿದೆ.
ವಿದೇಶಗಳಲ್ಲಿ ಬಳಕೆಯಾಗ್ತಿದ್ದ ಅತ್ಯಾಧುನಿಕ ಟೆಕ್ನಾಲಜಿ ಇದೀಗ ಕರ್ನಾಟಕ್ಕೂ ಎಂಟ್ರಿ ಕೊಟ್ಟಿದೆ
ಈ ಕಟ್ಟಡ ವಿನ್ಯಾಸವನ್ನು ಐಐಟಿ ಮದ್ರಾಸ್ ಮಾನ್ಯ ಮಾಡಿದೆ.ಯಾವುದೇ ರೀತಿಯ ಇಟ್ಟಿಗೆ ಬಳಸದೇ ಕೇವಲ ಸಿಮೆಂಟ್ ಕಾಂಕ್ರಿಟ್ ಬಳಕೆಯಿಂದಲೇ ಸಂಪೂರ್ಣ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.
ಇದರ ವಿಶೇಷ ಏನೆಂದರೆ ಕೇವಲ ಐದೇ ಐದು ಜನ ಕೆಲಸಗಾರರು, ಲ್ಯಾಪ್ಟಾಪ್ ಬಳಕೆಯಿಂದ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.
ಸುಮಾರು ಒಂದು ಸಾವಿರ ಚದರ ಅಡಿಯಲ್ಲಿ ಈ ಕಟ್ಟಡವನ್ನು ನೂತನ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ.
ಈಗ ಈ ತಂತ್ರಜ್ಞಾನದ ಮೂಲಕ ಇದೆ ಮೊದಲ ಬಾರಿಗೆ ಅಂಚೆ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ.
ಹೌದು, ಬೆಂಗಳೂರಿನ ಹಲಸೂರಿನಲ್ಲಿ 3D ಕಾಂಕ್ರೀಟ್ ತಂತ್ರಜ್ಞಾನ ಬಳಸಿ ಮೊಟ್ಟ ಮೊದಲ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ಈ ಕಟ್ಟಡ ನಿರ್ಮಾಣದ ಹೊಣೆಯನ್ನು ಎಲ್ & ಟಿ ಕಂಪನಿ ಹೊತ್ತಿದೆ.