2022ರಲ್ಲಿ ‘ಆರ್ಆರ್ಆರ್’, ‘ದಿ ಕಾಶ್ಮೀರ್ ಫೈಲ್’, ಕೆಜಿಎಫ್ ಚಾಪ್ಟರ್ 2, ಗಂಗೂಬಾಯಿ ಕಾಠಿವಾಡಿ ಮುಂತಾದ ಚಿತ್ರಗಳು ತೆರೆ ಮೇಲೆ ಭರ್ಜರಿ ಸೌಂಡ್ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಗಳಿಕೆ ಮಾಡಿವೆ. ಇಂತಹ ಇದು ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
ಬಾಕ್ಸ್ ಆಫೀಸ್ ಅಂಕಿಅಂಶಗಳ ಪ್ರಕಾರ, ಈ ವರ್ಷ ಚಿತ್ರರಂಗಕ್ಕೆ ಅದೃಷ್ಟ ಎಂದು ಹೇಳಲಾಗುತ್ತಿದೆ. ಈ ವರ್ಷ ಚಿತ್ರ ನಿರ್ಮಾಪಕರು ಒಂದಕ್ಕಿಂತ ಹೆಚ್ಚು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದ್ರೆ, 2 ವರ್ಷಗಳ ಹಿಂದೆ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿತ್ತು. ಕೋವಿಡ್ನಿಂದಾಗಿ ಎಲ್ಲಾ ಚಿತ್ರಮಂದಿರಗಳು ಬಂದ್ ಆಗಿದ್ದ ಹೀಗಾಗಿ ಸಿನಿ ಕಲಾವಿದರು, ಚಿತ್ರ ಮಂದಿರ ಮಾಲೀಕರು ತುಂಬಾ ಕಷ್ಟ ಅನುಭವಿಸಿದರು, ಇದರಿಂದಾಗಿ ಹೆಚ್ಚಿನ ಚಿತ್ರಗಳು ಬಿಡುಗಡೆ ಯಾದ್ರು ಯಶಸ್ಸು ಕಂಡಿರಲಿಲ್ಲ. ಆದರೆ 2022ರಲ್ಲಿ ‘ಆರ್ಆರ್ಆರ್’, ‘ದಿ ಕಾಶ್ಮೀರ್ ಫೈಲ್’, ಕೆಜಿಎಫ್ ಚಾಪ್ಟರ್ 2, ಗಂಗೂಬಾಯಿ ಕಾಠಿವಾಡಿ ಮುಂತಾದ ಚಿತ್ರಗಳು ತೆರೆ ಮೇಲೆ ಭರ್ಜರಿ ಸೌಂಡ್ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಗಳಿಕೆ ಮಾಡಿವೆ. ಇಂತಹ ಇದು ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..
'ಭೂಲ್ ಭೂಲಯ್ಯ 2' ಒಂದು ಹಾರರ್ ಕಾಮಿಡಿ ಸಿನಿಮಾ. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ, ರಾಜ್ಪಾಲ್ ಯಾದವ್ ಮತ್ತು ಟಬು ಅಭಿನಯದ ಈ ಚಿತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ. ಇಲ್ಲಿಯವರೆಗೆ ಚಿತ್ರ 200 ಕೋಟಿ ಗಳಿಸಿದೆ.
'ಕೆಜಿಎಫ್ ಚಾಪ್ಟರ್ 2' ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರವು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ರವೀನಾ ಟಂಡನ್ ಮತ್ತು ಸಂಜಯ್ ದತ್ ಕೂಡ ಕಾಣಿಸಿಕೊಂಡಿದ್ದರು. ಈ ಚಿತ್ರವು ಒಟ್ಟು 5 ಭಾಷೆಗಳಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ನಲ್ಲಿ 1240 ಕೋಟಿ ರೂ. ಬಾಚಿಕೊಂಡಿದೆ.
ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಚಿತ್ರ ಆರ್ಆರ್ಆರ್ ತೆರೆಯ ಮೇಲೆ ತನ್ನ ಶ್ರೇಷ್ಠತೆಯನ್ನು ತೋರಿಸಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಎಸ್ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ, ಇದು ಬಾಕ್ಸ್ ಆಫೀಸ್ನಲ್ಲಿ 1130 ಕೋಟಿ ಗಳಿಸಿತು.
'ದಿ ಕಾಶ್ಮೀರ್ ಫೈಲ್ಸ್' 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದ ಚಲನಚಿತ್ರವಾಗಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಅಭಿನಯದ ಈ ಚಿತ್ರಕ್ಕೆ ಪ್ರೇಕ್ಷಕರು ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ಚಿತ್ರ 331 ಕೋಟಿ ಗಳಿಸಿದೆ.
'ಗಂಗೂಬಾಯಿ ಕಥಿಯಾವಾಡಿ' ಚಿತ್ರವು ಎಸ್ ಹುಸೇನ್ ಜೈದಿ ಅವರ 'ಮಾಫಿಯಾ ಕ್ವೀನ್ಸ್ ಆಫ್ ಮುಂಬೈ' ಪುಸ್ತಕವನ್ನು ಆಧರಿಸಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರ ತೆರೆ ಮೇಲೆ 200 ಕೋಟಿ ಗಳಿಸಿತ್ತು.