10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬಾಲಿವುಡ್ ನಟಿ ಕರಿನಾ ಕಪೂರ್ ಗುರುವಾರ ಚಾಲನೆ ನೀಡಿದರು. (ಪೋಟೋ ಕೃಪೆ: ಪಿಟಿಐ)
ಉದ್ಘಾಟನಾ ಭಾಷಣ ಮಾಡಲು ತೆರಳುತ್ತಿರುವ ಕರೀನಾ ಕಪೂರ್.
ಈ ಸಂದರ್ಭದಲ್ಲಿ ಮಾತನಾಡಿದ ಕರೀನಾ, "ಸಿನಿಮಾ ನನ್ನ ರಕ್ತದಲ್ಲಿಯೇ ಬೆರೆತಿದೆ. ನಮ್ಮ ತಾತ ಬೆಂಗಳೂರು, ಮೈಸೂರಿನ ಮೇಲೆ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದರು. ಚಿತ್ರರಂಗದಿಂದ ನಾನು ಸಾಕಷ್ಟು ಗೌರವಕ್ಕೆ ಪಾತ್ರಳಾಗಿದ್ದೇನೆ. ಸಿನಿಮಾ ಧರ್ಮವನ್ನೂ ಮೀರಿ ಎಲ್ಲರನ್ನೂ ಒಂದು ಕುಟುಂಬದಂತೆ ಒಂದುಗೂಡಿಸುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಕೆಂಪು ಅಂಚಿನ ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದ ಕರೀನಾ, ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದರು. (ಪೋಟೋ ಕೃಪೆ: ಪಿಟಿಐ)
ಚಲನಚಿತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಕಲಾ ತಂಡ.
ಕರ್ನಾಟಕ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ಕರೀನಾ ಕಪೂರ್ ಖಾನ್.
ಕರ್ನಾಟಕ ಮಂತ್ರಿ ರೋಷನ್ ಬೇಗ್ ಮತ್ತು ಚಿತ್ರ ನಿರ್ಮಾಪಕ ಓಂ ಪ್ರಕಾಶ್ ಮೆಹ್ರಾ ಅವರೊಂದಿಗೆ ಚಿತ್ರೋತ್ಸವ ಉದ್ಘಾಟಿಸುತ್ತಿರುವುದು.