ಮಧ್ಯರಾತ್ರಿಯಲ್ಲಿ ಆಗೋ ಈ ಆಸೆಗಳಿಗೆ ಹೀಗೆ ಮಾಡಿದ್ರೆ ಸಖತ್ ಮಜಾ ಸಿಗುತ್ತೆ!

ಐದೈದು ಅಲಾರಂ, ಬಟ್ಟೆ ಇಸ್ತ್ರಿ ಮಾಡಿಕೊಂಡು ಮುಂಜಾನೆಗೆ ಸಜ್ಜಾಗಿದ್ದೀನಿ ಅಂದುಕೊಂಡಾಗಲೇ ಕೆಲವರಿಗೆ ಫ್ರಿಡ್ಜ್ ಮೇಲೆ ರೇಡ್ ಮಾಡಬೇಕೆಂಬ ತುಡಿತ ಉಂಟಾಗುತ್ತೆ. ಕೆಲವರಿಗೆ ತಡರಾತ್ರಿಯ ಸಮಯದಲ್ಲಿ ಏನನ್ನಾದರೂ ತಿನ್ನಬೇಕು ಎಂಬ ಆಸೆ ಉಂಟಾಗುತ್ತದೆ. ಈ ತಡರಾತ್ರಿಯ ಕಡುಬಯಕೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು 10 ಆರೋಗ್ಯಕರ ತಿಂಡಿ ಪಾಕವಿಧಾನಗಳನ್ನು ಇಲ್ಲಿ ನೀಡಲಾಗಿದೆ.

1 /10

1. ತರಕಾರಿಗಳ ಸ್ನಾಕ್ಸ್:   ಕೆಲವರಿಗೆ ಫಿಟ್ನೆಸ್ ಹಾಳಾಗುತ್ತದೆ ಎಂಬ ಭಯದಿಂದ ಸ್ನಾಕ್ ಗಳನ್ನು ತಿನ್ನಲು ಹಿಂಜರಿಯುತ್ತಾರೆ. ಆದರೆ ತರಕಾರಿಗಳಿಂದ ತಯಾರಿಸಿದ ಸ್ನಾಕ್ ಗಳನ್ನು ಮನೆಯಲ್ಲಿಯೇ ನೀವು ತಯಾರಿಸಿ ತಿನ್ನಬಹುದು. ಮಾರುಕಟ್ಟೆಯಲ್ಲಿ ಅಂತಹ ಸ್ನಾಕ್ ಗಳು ಇವೆ. ಅದನ್ನು ತಂದಿಟ್ಟುಕೊಂಡು, ಮಧ್ಯರಾತ್ರಿ ಉಂಟಾಗೋ ಕಡುಬಯಕೆಗಳನ್ನು ತೀರಿಸಿಕೊಳ್ಳಬಹುದು.

2 /10

2. ಓಟ್ ಮೀಲ್: ಸಾಮಾನ್ಯವಾಗಿ ಓಟ್ ಮೀಲ್ ನ್ನು ಬೆಳಿಗ್ಗಿನ ಉಪಹಾರಕ್ಕೆ ಸೇವಿಸುವುದನ್ನು ಕಂಡಿರಬಹುದು. ಆದರೆ ರಾತ್ರಿಯಲ್ಲಿ ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಓಟ್ಸ್ ಒಂದು ಸಂಕೀರ್ಣ ಕಾರ್ಬೋಹೈಡ್ರೇಟ್ ಆಗಿದ್ದು, ಇತರ ವಿಷಯಗಳ ಜೊತೆಗೆ, ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳವನ್ನು ನಿಯಂತ್ರಿಸುತ್ತದೆ.

3 /10

3. ಹುರಿದ ಕಡಲೆ ಕಡಲೆಯು ಒಂದು ಜನಪ್ರಿಯ ಆರೋಗ್ಯಕರ ಆಹಾರದ ಆಯ್ಕೆಯಾಗಿದ್ದು ಅದು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಏಕೆಂದರೆ ಅವುಗಳು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ.

4 /10

4. ಮೊಟ್ಟೆಗಳು: ಸಣ್ಣದಾಗಿ ಉದ್ದುದ್ದನೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ನ್ನು ಮೆಣಸಿನ ಪುಡಿಯೊಂದಿಗೆ ಮಿಕ್ಸ್ ಮಾಡಿ, ಬೇಯಿಸಿದ ಮೊಟ್ಟೆಯೊಂದಿಗೆ ತಿನ್ನಬಹುದು. ಇದರಿಂದ ನಿಮಗೆ ಉತ್ತಮ ಪ್ರೊಟೀನ್‌ ಜೊತೆಗೆ ಮನಸ್ಸಿಗೆ ತೃಪ್ತಿಯೂ ಸಿಗುತ್ತದೆ.

5 /10

5. ಫ್ರೂಟ್ ಮಿಲ್ಕ್ ಶೇಕ್: ನಿಮಗೆ ಸ್ವೀಟ್ ಆಗಿ ಏನಾದರೂ ತಿನ್ನಬೇಕು ಎಂದು ಮನಸ್ಸಾಗಿದ್ದರೆ ತಾಜಾ ಹಣ್ಣುಗಳು ಮತ್ತು ಕುರುಕುಲಾದ ಚಿಯಾ ಬೀಜಗಳನ್ನು ಹೆಪ್ಪುಗಟ್ಟಿದ ಗ್ರೀಕ್-ಮೊಸರಿನೊಂದಿಗೆ ಮಿಕ್ಸ್ ಮಾಡಿ ಸೇವಿಸಿ.  

6 /10

6. ಬಾಳೆಹಣ್ಣು ಮತ್ತು ಪೀನಟ್ ಬಟರ್: ಬಾಳೆಹಣ್ಣಿನಲ್ಲಿ ಇರುವ ಪೊಟ್ಯಾಸಿಯಮ್ ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅದನ್ನು ಪೀನಟ್ ಬಟರ್ ಜೊತೆಗೆ ಸಂಯೋಜಿಸಿ ತೃಪ್ತಿಕರವಾದ ಆಹಾರವಾಗಿ ಸೇವಿಸಬಹುದು.

7 /10

7. ಮಿಕ್ಸ್ ಸೀಡ್: ಇನ್ನು ಮಾರುಕಟ್ಟೆಯಲ್ಲಿ ಕೆಲ ಆರೋಗ್ಯಕರ ಒಣ ಬೀಜಗಳು ಲಭಿಸುತ್ತವೆ. ಅದರಲ್ಲಿ ಅಗಸೆ ಬೀಜಗಳು ಕೂಡ ಒಂದು.  ಇದನ್ನೂ ಹಾಗೆಯೇ ತಿನ್ನಬಹುದು. ಇಲ್ಲವಾದಲ್ಲಿ ಬೇರೆ ಕೆಲ ಆಹಾರ ಜೊತೆ ಸೇವಿಸಿದರೆ ನಿಮಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ.

8 /10

8. ಸ್ಯಾಂಡ್ವಿಚ್ ಹ್ಯಾಮ್ ಅಥವಾ ಕಾಟೇಜ್ ಚೀಸ್‌ನೊಂದಿಗೆ ಲೇಯರ್ಡ್ ಇನ್-ಹೌಸ್ ಸಾಸ್‌ಗಳೊಂದಿಗೆ  ಸ್ಯಾಂಡ್‌ವಿಚ್‌ ಗಳನ್ನು ತಯಾರಿಸಿ ಮನೆಯಲ್ಲಿ ಸಖತ್ ಟೇಸ್ಟಿ ಫುಡ್ ತಯಾರಿಸಿ.

9 /10

9. ಪಾಪ್ ಕಾರ್ನ್ ನೀವು ಮಲಗುವ ಮುನ್ನ ಏನಾದರೂ ತಿನ್ನಬೇಕು ಎಂದು ಬಯಸಿದರೆ ಪಾಪ್ ಕಾರ್ನ್  ಸೇವಿಸಿ. ಇದು ಉತ್ತಮ ಆಯ್ಕೆ. ಆದರೆ ಹೆಚ್ಚು ತಿಂದರೆ ಹೊಟ್ಟೆ ಉಬ್ಬುವಂತಹ ಅನುಭವ ನೀಡಬಹುದು ಎಚ್ಚರಿಕೆ ವಹಿಸಿ.

10 /10

10. ಒಣ ಹಣ್ಣುಗಳು ತಡರಾತ್ರಿಯ ಕಡುಬಯಕೆಗಳಿಗೆ ಯಾವಾಗಲೂ ಸುರಕ್ಷಿತ ಆಹಾರ ಸೇವನೆ ಮಾಡಬೇಕೆಂದು ಪ್ರೇರೇಪಿಸುತ್ತದೆ. ಅವುಗಳ ಹೆಚ್ಚಿನ ಪ್ರೊಟೀನ್ ಅಂಶ ಮತ್ತು ಉತ್ತಮ ಕೊಬ್ಬಿನಂಶಗಳು ದೇಹಕ್ಕೆ ಆರೋಗ್ಯವನ್ನು ನೀಡುತ್ತದೆ.