NRI News: ಗೀತಾ ಪಾರ್ಕ್ ವಿಧ್ವಂಸಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಕೆನಡಾ ಅಧಿಕಾರಿಗಳು

NRI  News: ಕೆನಡಾದಲ್ಲಿರುವ ಭಗವದ್ಗೀತಾ ಪಾರ್ಕ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಹೇಳಿಕೆ ನೀಡಿದೆ. ಕೆನಡಾ ಸರ್ಕಾರಿ ಅಧಿಕಾರಿಗಳ ಪ್ರಕಾರ ಉದ್ಯಾನವನವನ್ನು ಧ್ವಂಸಗೊಲಿಸಲಾಗಿಲ್ಲ ಎಂದಿದ್ದು, ದುರುಸ್ತಿ ಸಮಯದಲ್ಲಿ ಖಾಲಿ ಜಾಗ ಬಿಡಲಾಗಿದೆ ಎಂದು ಹೇಳಿದ್ದಾರೆ. ಈ ಘಟನೆಗೆ ಬಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕ್ದ್ರಮಕ್ಕೆ ಆಗ್ರಹಿಸಿತ್ತು.  

Written by - Nitin Tabib | Last Updated : Oct 3, 2022, 06:40 PM IST
  • ಕೆನಡಾದ ಬ್ರಾಂಪ್ಟನ್‌ನಲ್ಲಿರುವ 'ಶ್ರೀ ಭಗವದ್ಗೀತೆ' ಪಾರ್ಕ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ಭಾರತ ವ್ಯಕ್ತಪಡಿಸಿದ ಕಳವಳಕ್ಕೆ ಕೆನಡಾ ಪ್ರತಿಕ್ರಿಯೆ ನೀಡಿದೆ.
  • ಕೆನಡಾದ ಸರ್ಕಾರಿ ಅಧಿಕಾರಿಗಳು ಹೇಳುವ ಪ್ರಕಾರ ಉದ್ಯಾನವನವನ್ನು ಧ್ವಂಸಗೊಳಿಸಲಾಗಿಲ್ಲ,
  • ಆದರೆ ದುರಸ್ತಿ ಕಾರ್ಯದ ಸಮಯದಲ್ಲಿ ಖಾಲಿ ಜಾಗವನ್ನು ಬಿಡಲಾಗಿದೆ ಎನ್ನಲಾಗಿದೆ.
NRI News: ಗೀತಾ ಪಾರ್ಕ್ ವಿಧ್ವಂಸಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಕೆನಡಾ ಅಧಿಕಾರಿಗಳು title=
NRI News

NRI News: ಕೆನಡಾದ ಬ್ರಾಂಪ್ಟನ್‌ನಲ್ಲಿರುವ 'ಶ್ರೀ ಭಗವದ್ಗೀತೆ' ಪಾರ್ಕ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯದ ಬಗ್ಗೆ ಭಾರತ ವ್ಯಕ್ತಪಡಿಸಿದ ಕಳವಳಕ್ಕೆ ಕೆನಡಾ ಪ್ರತಿಕ್ರಿಯೆ ನೀಡಿದೆ. ಕೆನಡಾದ ಸರ್ಕಾರಿ ಅಧಿಕಾರಿಗಳು ಹೇಳುವ ಪ್ರಕಾರ ಉದ್ಯಾನವನವನ್ನು ಧ್ವಂಸಗೊಳಿಸಲಾಗಿಲ್ಲ, ಆದರೆ ದುರಸ್ತಿ ಕಾರ್ಯದ ಸಮಯದಲ್ಲಿ ಖಾಲಿ ಜಾಗವನ್ನು ಬಿಡಲಾಗಿದೆ ಎನ್ನಲಾಗಿದೆ. ಭಾರತವು ಘಟನೆಯನ್ನು ಖಂಡಿಸಿದ ಕೆಲವು ದಿನಗಳ ನಂತರ ಅಧಿಕಾರಿಗಳ ಈ ಪ್ರತಿಕ್ರಿಯೆ ಬಂದಿದೆ ಮತ್ತು ಈ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ನಗರ ಆಡಳಿತವನ್ನು ಒತ್ತಾಯಿಸಲಾಗಿದೆ. ಈ ಉದ್ಯಾನವನವನ್ನು ಮೊದಲು ಟ್ರಾಯರ್ಸ್ ಪಾರ್ಕ್ ಎಂದು ಕರೆಯಲಾಗುತ್ತಿತ್ತು ಮತ್ತು ನಂತರ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ಸೆಪ್ಟೆಂಬರ್ 28 ರಂದು ಉದ್ಘಾಟಿಸಲಾಗಿತ್ತು.

ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಭಾನುವಾರ ಟ್ವೀಟ್ ಮಾಡಿ, “ಬ್ರಾಂಪ್ಟನ್‌ನ ಶ್ರೀ ಭಗವದ್ಗೀತಾ ಪಾರ್ಕ್‌ನಲ್ಲಿ ನಡೆದ ದ್ವೇಷದ ಅಪರಾಧ ವಿಧ್ವಂಸಕ ಕೃತ್ಯವನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಕೆನಡಾದ ಅಧಿಕಾರಿಗಳು ಮತ್ತು ಪೊಲೀಸರಿಗೆ ನಾವು ವಿನಂತಿಸುತ್ತೇವೆ" ಎಂದು ಹೇಳಿತ್ತು. ಇದರ ನಂತರ ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಕೂಡ ಭಾನುವಾರ ರಾತ್ರಿ ಟ್ವಿಟರ್‌ನಲ್ಲಿ ಈ ವಿಷಯವನ್ನು ದೃಢಪಡಿಸಿದ್ದರು. ಬ್ರಾಂಪ್ಟನ್ ಕೆನಡಾದ ಒಂಟಾರಿಯೊ ಪ್ರಾಂತ್ಯದ ಒಂದು ನಗರವಾಗಿದೆ. ಭಾರತೀಯ ಮೂಲದ ಹೆಚ್ಚಿನ ಸಂಖ್ಯೆಯ ಜನರು ಅದರಲ್ಲಿ ವಾಸಿಸುತ್ತಿದ್ದಾರೆ. ಘಟನೆಯ ಕುರಿತು ಟ್ವೀಟ್ ಮಾಡಿದ್ದ ಬ್ರೌನ್, "ಇತ್ತೀಚೆಗೆ ಉದ್ಘಾಟನೆಗೊಂಡ ಭಗವದ್ಗೀತಾ ಉದ್ಯಾನವನದ ಹಾಳುಗೆಡುವ ಬಗ್ಗೆ ನಿನ್ನೆಯ ವರದಿಯನ್ನು ಅನುಸರಿಸಿ, ನಾವು ಈ ವಿಷಯವನ್ನು ತನಿಖೆ ಮಾಡಲು ತ್ವರಿತ ಕ್ರಮ ಕೈಗೊಂಡಿದ್ದೇವೆ. ಶ್ರೀ ಭಗವದ್ಗೀತಾ ಉದ್ಯಾನವನಕ್ಕೆ ಶಾಶ್ವತ ಗುರುತು ಹಾಕಲು  ಬಿಲ್ಡರ್ ಅಲ್ಲಿ ಖಾಲಿ ಸ್ಥಳವನ್ನು ಬಿಟ್ಟು ಹೋಗಿದ್ದಾರೆ ಎಂದು ನಮಗೆ ತಿಳಿದುಬಂದಿದೆ" ಎಂದಿದ್ದಾರೆ.

ಇದನ್ನೂ ಓದಿ-NRI News: Canada ದಲ್ಲಿ ಭಾರತೀಯ ಸಮುದಾಯದವರನ್ನು ಏಕೆ ಗುರಿಯಾಗಿಸಲಾಗುತ್ತಿದೆ? ಇಲ್ಲಿದೆ ವಿಸ್ತೃತ ವರದಿ

ಇಡೀ ಘಟನೆ ಏನು? ವಿವರಿಸಿದ ಮೇಯರ್
ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಬ್ರೌನ್ ಭಾರತೀಯ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು "ಈ ವಿಷಯವು ಮುನ್ನೆಲೆಗೆ ಬಂದಿರುವುದಕ್ಕೆ ನಮಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ. ಈ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಮತ್ತು ಬ್ರಾಂಪ್ಟನ್ ಅನ್ನು ಸುರಕ್ಷಿತ ಮತ್ತು ಅಂತರ್ಗತ ಸ್ಥಳವನ್ನಾಗಿ ಮಾಡಿದ್ದಕ್ಕಾಗಿ ನಾವು ಸಮುದಾಯಕ್ಕೆ (ಭಾರತೀಯರು) ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇದು ಸಾಮಾನ್ಯ ಅಭ್ಯಾಸವಲ್ಲ ಏಕೆಂದರೆ ನಾವು ಯಾವುದೇ ಕುರುಹುಗಳನ್ನು ಹಾನಿಗೊಳಗಾಗದ ಅಥವಾ ಮರುಹೆಸರಿಸುವವರೆಗೆ ತೆಗೆದುಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-NRI News: ಕೆನಡಾದ ಪಾರ್ಕ್ ಗೆ ‘ಶ್ರೀ ಭಗವದ್ಗೀತಾ’ ಎಂದು ನಾಮಕರಣ: ಇದರ ಹಿಂದಿದೆ ಬಲವಾದ ಕಾರಣ!

ಕೆನಡಾದಲ್ಲಿ ನೆಲೆಸಿರುವ ಭಾರತೀಯರಿಗೆ ಭಾರತ ನೀಡಿದ ಸಲಹೆ ಏನು?
"ಉದ್ಯಾನದಲ್ಲಿ ಯಾವುದೇ ಶಾಶ್ವತ ಗುರುತು ಅಥವಾ ರಚನೆಯನ್ನು ಧ್ವಂಸಗೊಳಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಕಳೆದ ತಿಂಗಳು, ಭಾರತ ಕೆನಡಾದಲ್ಲಿರುವ ತನ್ನ ನಾಗರಿಕರಿಗೆ ಜಾಗರೂಕರಾಗಿರಲು ಸಲಹೆಯನ್ನು ನೀಡಿತ್ತು, "ದ್ವೇಷ ಅಪರಾಧ, ಕೋಮು ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳೇ ಇದಕ್ಕೆ ಕಾರಣ" ಎಂದು ಭಾರತ ಹೇಳಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News