ಒಂದೇ ಒಂದು ದಿನ ಶಾಲೆಗೆ ರಜೆ ಹಾಕದೆ 50 ದೇಶ ಸುತ್ತಿದ್ಳು 10ರ ಹರೆಯದ ಬಾಲೆ! ಅದ್ಹೇಗೆ ಗೊತ್ತಾ?

Meet Aditi Tripathi: 10 ವರ್ಷದ ಭಾರತೀಯ ಮೂಲದ ಬಾಲಕಿ ಅದಿತಿ ತ್ರಿಪಾಠಿ ಎಂಬವರು ಒಂದೇ ಒಂದು ದಿನವೂ ಸ್ಕೂಲ್ ಮಿಸ್ ಮಾಡಿಕೊಳ್ಳದೆ, ತನ್ನ ಪ್ರಯಾಣದ ಪಟ್ಟಿಯಲ್ಲಿರುವ 50 ದೇಶಗಳನ್ನು ಸುತ್ತಿದ್ದಾರೆ

Written by - Bhavishya Shetty | Last Updated : Aug 16, 2023, 12:48 PM IST
    • 10 ವರ್ಷದ ಭಾರತೀಯ ಮೂಲದ ಬಾಲಕಿ ಅದಿತಿ ತ್ರಿಪಾಠಿ
    • ಒಂದೇ ಒಂದು ದಿನವೂ ಸ್ಕೂಲ್ ಮಿಸ್ ಮಾಡಿಕೊಳ್ಳದೆ 50 ದೇಶಗಳನ್ನು ಸುತ್ತಿದ್ದಾರೆ
    • ಪೋಷಕರಾದ ದೀಪಕ್ ಮತ್ತು ಅವಿಲಾಶ ಜೊತೆ ದಕ್ಷಿಣ ಲಂಡನ್‌’ನ ಗ್ರೀನ್‌’ವಿಚ್‌’ನಲ್ಲಿ ವಾಸಿಸುತ್ತಿದ್ದಾರೆ
ಒಂದೇ ಒಂದು ದಿನ ಶಾಲೆಗೆ ರಜೆ ಹಾಕದೆ 50 ದೇಶ ಸುತ್ತಿದ್ಳು 10ರ ಹರೆಯದ ಬಾಲೆ! ಅದ್ಹೇಗೆ ಗೊತ್ತಾ? title=
Aditi Tripathi

10 year old Indian-origin girl Aditi: ಪ್ರವಾಸ ಹೋಗೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಆದರೆ ಪ್ರವಾಸದ ಸಂದರ್ಭದಲ್ಲಿ ನಮ್ಮ ದಿನನಿತ್ಯದ ಕೆಲಸಗಳನ್ನು ತ್ಯಜಿಸಬೇಕಾಗುತ್ತದೆ. ಅದರಲ್ಲೂ ಮಕ್ಕಳಿಗೆ ಸ್ಕೂಲ್, ಕಲಿಕೆ ಮಿಸ್ ಆಗೋದು ಪಕ್ಕಾ, ಇದೇ ಕಾರಣಕ್ಕೆ ಅದೆಷ್ಟೋ ಮಂದಿ ತಮ್ಮ ಟ್ರಿಪ್ ಪ್ಲಾನ್’ಗಳನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಏಷ್ಯಾಕಪ್ 2023ಕ್ಕೆ ಟೀಂ ಇಂಡಿಯಾ ಪ್ರಕಟ! ಕನ್ನಡಿಗ ಸೇರಿ ಇಬ್ಬರು ಮ್ಯಾಚ್ ವಿನ್ನರ್’ಗಳೇ ಔಟ್

ಆದರೆ 10 ವರ್ಷದ ಭಾರತೀಯ ಮೂಲದ ಬಾಲಕಿ ಅದಿತಿ ತ್ರಿಪಾಠಿ ಎಂಬವರು ಒಂದೇ ಒಂದು ದಿನವೂ ಸ್ಕೂಲ್ ಮಿಸ್ ಮಾಡಿಕೊಳ್ಳದೆ, ತನ್ನ ಪ್ರಯಾಣದ ಪಟ್ಟಿಯಲ್ಲಿರುವ 50 ದೇಶಗಳನ್ನು ಸುತ್ತಿದ್ದಾರೆ. ಈ ವಿಷಯ ಆಶ್ಚರ್ಯ ಎನಿಸಿದರೂ ಸತ್ಯ.

ಯಾಹೂ ಲೈಫ್ ಯುಕೆ ವರದಿಯ ಪ್ರಕಾರ, ಅದಿತಿ ತನ್ನ ಪೋಷಕರಾದ ದೀಪಕ್ ಮತ್ತು ಅವಿಲಾಶ ಜೊತೆ ದಕ್ಷಿಣ ಲಂಡನ್‌’ನ ಗ್ರೀನ್‌’ವಿಚ್‌’ನಲ್ಲಿ ವಾಸಿಸುತ್ತಿದ್ದಾರೆ. ಈ ದಂಪತಿ ವೃತ್ತಿಯಲ್ಲಿ ಅಕೌಂಟೆಂಟ್‌’ಗಳಾಗಿದ್ದಾರೆ. ಇನ್ನು ವಾರ್ಷಿಕವಾಗಿ 20,000 ಪೌಂಡ್‌’ಗಳನ್ನು ಪ್ರಯಾಣಕ್ಕಾಗಿ ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇದುವರೆಗೆ ಅದಿತಿ ನಾರ್ವೆ, ನೆದರ್ಲ್ಯಾಂಡ್ಸ್ ಮತ್ತು ಮೊನಾಕೊ ಸೇರಿದಂತೆ ಯುರೋಪ್’ನ ಹೆಚ್ಚಿನ ಭಾಗಗಳು, ನೇಪಾಳ, ಸಿಂಗಾಪುರ್ ಮತ್ತು ಥೈಲ್ಯಾಂಡ್ ದೇಶಗಳಿಗೆ ಭೇಟಿ ನೀಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಬ್ಯಾಂಕ್ ಉದ್ಯೋಗಕ್ಕೆ ಮತ್ತು ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ಭಾವಿಸಿದ ದಂಪತಿ ಸ್ಮಾರ್ಟ್ ಪ್ಲಾನ್ ಮಾಡಿದ್ದಾರೆ. ಅದೇನೆಂದರೆ ಬ್ಯಾಂಕ್ ರಜೆ ಮತ್ತು ಶಾಲೆಗೆ ರಜೆ ಇದ್ದ ಸಂದರ್ಭದಲ್ಲಿ ಹೀಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ, ಇನ್ನು ಈ ಪ್ರಯಾಣಕ್ಕೆಂದು ದಂಪತಿ ಅಂದಾಜು 20,000 ಪೌಂಡ್‌ ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಹೇಳುವುದಾದರೆ ಪ್ರತಿ ವರ್ಷ ಪ್ರಯಾಣಕ್ಕಾಗಿ 21 ಲಕ್ಷ ರೂ. ವ್ಯಯಿಸುತ್ತಾರಂತೆ.

ಇದನ್ನೂ ಓದಿ: video : ಬೆಕ್ಕಿನ ಮಡಿಲೊಳಗೆ  ಸೇರಿಕೊಂಡಿರುವ ಕೋಳಿ ಮರಿಗಳು! ಫುಲ್ ಶಾಕ್ ನಲ್ಲಿ ತಾಯಿ ಕೋಳಿ ! 

ತ್ರಿಪಾಠಿ ಕುಟುಂಬವು ತಮ್ಮ ಮಗಳು ಅದಿತಿಹೆ ಜಗತ್ತಿನಲ್ಲಿರುವ ವಿವಿಧ ಸಂಸ್ಕೃತಿಗಳು, ಆಹಾರ ಪದ್ಧತಿ, ಜನರ ಜೀವನ ಶೈಲಿ ಬಗ್ಗೆ ತಿಳಿಸಿಕೊಡಲು ಈ ಪ್ರಯಾಣ ಮಾಡುತ್ತಾರೆ ಎಂದು ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News