NRI: ಮಲೇಷ್ಯಾನಲ್ಲಿರುವ ಭಾರತೀಯ ಮೂಲದ ವಿಕಲಚೇತನ ವ್ಯಕ್ತಿಗೆ ಮುಂದಿನ ವಾರ ಗಲ್ಲುಶಿಕ್ಷೆ, ಕಾರಣ ಇಲ್ಲಿದೆ

ಮಾದಕ ಪದಾರ್ಥ ಸಾಗಣೆ ಆರೋಪದ ಹಿನ್ನೆಲೆ ಶಿಕ್ಷೆಗೆ ಗುರಿಯಾಗಿರುವ ಮತ್ತು ಮಲೇಷ್ಯಾನಲ್ಲಿ ವಾಸಿಸುವ ಭಾರತೀಯ ಮೂಲದ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬನಿಗೆ ಗಲ್ಲುಶಿಕ್ಷೆ ಕಾಯಂಗೊಳಿಸಿ ಸಿಂಗಾಪುರ್ ನ್ಯಾಯಾಲಯ ಆದೇಶ ಹೊರಡಿಸಿದೆ.  

Written by - Nitin Tabib | Last Updated : Apr 21, 2022, 06:04 PM IST
  • ಭಾರತೀಯ ಮೂಲದ ಮಲೇಷ್ಯಾ ವ್ಯಕ್ತಿಗೆ ಗಲ್ಲುಶಿಕ್ಷೆ ಖಾಯಂ
  • ವ್ಯಕ್ತಿ ಮಾನಸಿಕವಾಗಿ ವಿಕಲಚೇತನನಾಗಿದ್ದಾನೆ.
  • ಮಾದಕ ಪದಾರ್ಥ ಕಳ್ಳಸಾಗಣೆ ಆರೋಪದ ಹಿನ್ನೆಲೆ ತಪ್ಪಿತಸ್ತ ಎಂದು ನ್ಯಾಯಾಲಯ ತೀರ್ಪುನೀಡಿದೆ.

Trending Photos

NRI: ಮಲೇಷ್ಯಾನಲ್ಲಿರುವ ಭಾರತೀಯ ಮೂಲದ ವಿಕಲಚೇತನ ವ್ಯಕ್ತಿಗೆ ಮುಂದಿನ ವಾರ ಗಲ್ಲುಶಿಕ್ಷೆ, ಕಾರಣ ಇಲ್ಲಿದೆ title=
NRI News Update

ಸಿಂಗಾಪುರ್: ಮಲೇಷ್ಯಾನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಮಾನಸಿಕ ವಿಕಲಚೇತನ ವ್ಯಕ್ತಿಗೆ ಮಾದಕ ಪದಾರ್ಥ ಸಾಗಣೆ ಆರೋಪಗಳ ಹಿನ್ನೆಲೆ ತಪ್ಪಿತಸ್ತ ಎಂದು ತೀರ್ಪು ನೀಡಲಾಗಿದ್ದು, ಸಿಂಗಾಪುರಿನ ಚಂಗಿ ಕಾರಾಗ್ರಹದಲ್ಲಿ ಆತನ ಹೆಸರನ್ನು ಗಲ್ಲುಶಿಕ್ಷೆಗಾಗಿ ಬುಧವಾರ ಪಟ್ಟಿಮಾಡಲಾಗಿದೆ. ಆತನು ಸಲ್ಲಿಸಿದ್ದ ಕೊನೆಯ ಮನವಿಯನ್ನು ನ್ಯಾಯಾಲಯ ತಿರಸ್ಕರಿಸದೆ ಎಂದು ಮಾಧ್ಯಮಗಳು ವರದಿಮಾಡಿವೆ.

ನಾಗೇಂದ್ರನ್ ಧರ್ಮಲಿಂಗಮ್ (34) ಎಂಬ ವ್ಯಕ್ತಿಯನ್ನು 2009 ರಲ್ಲಿ 42.72 ಗ್ರಾಂ ಹೆರಾಯಿನ್ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿತ್ತು. ಸಿಂಗಾಪುರ್ ಕಾಯಿದೆಯ ಪ್ರಕಾರ ಮಾದಕ ಪದಾರ್ಥದ ಕಳ್ಳಸಾಗಣೆಗೆ ಪ್ರಕರಣದಲ್ಲಿ ಉರಿಶಿಕ್ಷೆ ನೀಡಲಾಗುತ್ತದೆ.

ಈ ಕುರಿತು ಮಲೇಷ್ಯಾ ಡೈಲಿ 'ದಿ ಸ್ಟಾರ್'ಗೆ ಮಾಹಿತಿ ನೀಡಿರುವ ಧರ್ಮಲಿಂಗಮ್ ಅವರ ಮಾಜಿ ವಕೀಲ M. ರವಿ, "ಮುಂದಿನ ಬುಧವಾರ ನಾಗಂದ್ರನ್ ನನ್ನು ಗಲ್ಲಿಗೇರಿಸಲಾಗುವ ಸುದ್ದಿ ತುಂಬಾ ನೋವು ತಂದಿದೆ" ಎಂದಿದ್ದಾರೆ.

ಇದನ್ನೂ ಓದಿ-NRI: ನೆದರ್ಲ್ಯಾಂಡ್ ನಲ್ಲಿ US ಅಧ್ಯಕ್ಷ ಜೋ ಬಿಡೆನ್ ರಾಯಭಾರಿಯಾಗಿ ಶೇಫಾಲಿ ದುಗ್ಗಲ್ ಆಯ್ಕೆ

ಮಾದಕವಸ್ತು ಕಳ್ಳಸಾಗಣೆಗಾಗಿ ವಿಧಿಸಲಾಗಿಡ್ಡ ಮರಣದಂಡನೆಯ ವಿರುದ್ಧ ನಾಗೇಂದ್ರನ್ ಪರ ವಕೀಲರು ಸಲ್ಲಿಸಿದ್ದ ಅಂತಿಮ ಮನವಿಯನ್ನು ಸಿಂಗಾಪುರದ ನ್ಯಾಯಾಲಯವು ಮಾರ್ಚ್ 29 ರಂದು ತಿರಸ್ಕರಿಸಿದ ನಂತರ ಈ ಮರಣದಂಡನೆ ಖಾಯಂಗೊಳಿಸಲಾಗಿದೆ. ಅವರ ಅಪರಾಧ ಮತ್ತು ಶಿಕ್ಷೆಯ ವಿರುದ್ಧ ಅವರ ಮನವಿಯನ್ನು 2011 ರಲ್ಲಿಯೂ ಕೂಡ ವಜಾಗೊಳಿಸಲಾಗಿತ್ತು.

ಇದನ್ನೂ ಓದಿ-NRI: ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿಯಾಗಿ ಭಾರತೀಯ ಮೂಲದ ಅಮೇರಿಕನ್ ನೌಕಾಪಡೆಯ ಅನುಭವಿ ಶಾಂತಿ ಸೇಠಿ ನೇಮಕ

2017 ರಲ್ಲಿ ಈ ಕುರಿತು ವಿಚಾರಣೆ ನಡೆಸಿದ್ದ ಸಿಂಗಾಪುರದ ಹೈಕೋರ್ಟ್, ನಾಲ್ವರು ಮಾನಸಿಕ ಮತ್ತು ಮನೋವೈದ್ಯಕೀಯ ತಜ್ಞರ ಸಾಕ್ಷ್ಯಗಳ ಆಧಾರದ ಮೇಲೆ ಧರ್ಮಲಿಂಗಮ್ ಅವರಿಗೆ ಜೀವಾವಧಿ ಶಿಕ್ಷೆ ನೀಡಲು ಅರ್ಹರಲ್ಲ ಎಂದು ತೀರ್ಪು ನೀಡಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News