ಬೆಂಗಳೂರು: ಗುಜರಾತಿನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿತದಿಂದ ಇದುವರೆಗೆ 140ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಾರು ಜನರು ನದಿಯಲ್ಲಿ ಕಾಣೆಯಾಗಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
‘ಗುಜರಾತಿನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿತದ ಸುದ್ದಿ ಅತ್ಯಂತ ಆಘಾತಕಾರಿಯಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ನವೀಕರಣಗೊಂಡು ಉದ್ಘಾಟಣೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದಿದ್ದು ಬಿಜೆಪಿಯ ಭ್ರಷ್ಟಾಚಾರದ ಫಲ. ಗುಜರಾತಿನಲ್ಲೂ #40PercentSarkara ಸ್ಥಾಪಿಸಿದ್ದೀರಾ ಪ್ರಧಾನಿ ಮೋದಿಯವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮೊರ್ಬಿ ತೂಗುಸೇತುವೆ ಕುಸಿತದಲ್ಲಿ
100ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು.ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ.
ಇದು ಗುಜರಾತ್ ಮಾಡೆಲ್ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ @BJP4Karnataka?
40 ಪರ್ಸೆಂಟ್
"ಒಂದು ದೇಶ ಒಂದು ಕಮಿಷನ್" ಎಂದು ಜಾರಿಯಾಗಿದೆಯೇ? pic.twitter.com/SzCLNeKQRT— Karnataka Congress (@INCKarnataka) October 31, 2022
ಇದನ್ನೂ ಓದಿ: Solar Scam : ಸೋಲಾರ್ ಹಗರಣ ತನಿಖೆ, ಕಾದು ನೋಡಿ ಎಂದ್ರು ಸಿಎಂ ಬೊಮ್ಮಾಯಿ
‘ಮೊರ್ಬಿ ತೂಗುಸೇತುವೆ ಕುಸಿತದಲ್ಲಿ 140ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು. ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ. ಇದು ಗುಜರಾತ್ ಮಾಡೆಲ್ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ ಬಿಜೆಪಿ? 40 ಪರ್ಸೆಂಟ್ "ಒಂದು ದೇಶ ಒಂದು ಕಮಿಷನ್" ಎಂದು ಜಾರಿಯಾಗಿದೆಯೇ?’ ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಪ್ರಶ್ನಿಸಿದೆ.
ಮೊರ್ಬಿ ತೂಗುಸೇತುವೆಯನ್ನು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಸಾರ್ವಜನಿಕ ಪ್ರವೇಶಕ್ಕೆ ಬಿಡಲಾಗಿತ್ತು.
ಅನುಭವವಿಲ್ಲದ ಗಡಿಯಾರ ತಯಾರಿಕಾ ಕಂಪೆನಿಗೆ ದುರಸ್ತಿ ಕೆಲಸ ವಹಿಸಲಾಗಿತ್ತು.
ಟೆಂಡರ್ ಪ್ರಕ್ರಿಯೆಯಲ್ಲಿ ಕಂಪೆನಿಯ ಅನುಭವ ಪರಿಗಣಿಸಿರಲಿಲ್ಲವೇಕೆ?
ಗುಜರಾತಿನಲ್ಲೂ #40PercentSarkara ಸ್ಥಾಪಿಸಿದ್ದೀರಾ @narendramodi ಅವರೇ?
— Karnataka Congress (@INCKarnataka) October 31, 2022
‘ಮೊರ್ಬಿ ತೂಗುಸೇತುವೆಯನ್ನು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಸಾರ್ವಜನಿಕ ಪ್ರವೇಶಕ್ಕೆ ಬಿಡಲಾಗಿತ್ತು. ಅನುಭವವಿಲ್ಲದ ಗಡಿಯಾರ ತಯಾರಿಕಾ ಕಂಪೆನಿಗೆ ದುರಸ್ತಿ ಕೆಲಸ ವಹಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಕಂಪೆನಿಯ ಅನುಭವ ಪರಿಗಣಿಸಿರಲಿಲ್ಲವೇಕೆ? ಗುಜರಾತಿನಲ್ಲೂ #40PercentSarkara ಸ್ಥಾಪಿಸಿದ್ದೀರಾ ಪ್ರಧಾನಿ ಮೋದಿಯವರೇ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಗುಜರಾತಿನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿತದಿಂದ ಇದುವರೆಗೆ 60 ಮಂದಿ ಮೃತಪಟ್ಟು, ನೂರಾರು ಜನ ನದಿಯಲ್ಲಿ ಕಾಣೆಯಾಗಿರುವ ಸುದ್ದಿ ಅತ್ಯಂತ ಆಘಾತಕಾರಿಯಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ.ನವೀಕರಣಗೊಂಡು ಉದ್ಘಾಟಣೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದಿದ್ದು ಬಿಜೆಪಿಯ ಭ್ರಷ್ಟಾಚಾರದ ಫಲ.#MorbiBridgeCollapse pic.twitter.com/DkySaeAxki
— Karnataka Congress (@INCKarnataka) October 31, 2022
ಇದನ್ನೂ ಓದಿ: ಉಡುಗೊರೆ ರೂಪದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಮೈಲುಗಲ್ಲು ನೆಟ್ಟಿದ್ದಾರೆ: ಬಿಜೆಪಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.