Viral Video: ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು!

ಕೊನೆ ಎಸೆತದವರೆಗೂ ಗೆಲುವಿಗಾಗಿ ಹೋರಾಡಿದ ಪಾಕ್ ತಂಡ ತಾನು ಮಾಡಿಕೊಂಡ ಎಡವಟ್ಟುಗಳಿಂದಲೇ ಸೋಲು ಕಾಣಬೇಕಾಯಿತು.

Written by - Puttaraj K Alur | Last Updated : Oct 24, 2022, 06:09 PM IST
  • ಟೀಂ ಇಂಡಿಯಾ ವಿರುದ್ಧ ಸೋತ ಬಳಿಕ ಕಂಗೆಟ್ಟ ಪಾಕಿಸ್ತಾನ ಆಟಗಾರರು
  • ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈಹೊತ್ತು ಕುಳಿತಕೊಂಡ ಪಾಕ್ ಆಟಗಾರರು
  • ತಂಡದ ಆಟಗಾರರಿಗೆ ಧೈರ್ಯ ತುಂಬಿದ ನಾಯಕ ಬಾಬರ್ ಅಜಮ್, ಕೋಚ್ ಮ್ಯಾಥೂ ಹೇಡನ್
Viral Video: ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು! title=
ಸೋತ ಬಳಿಕ ಕಂಗೆಟ್ಟ ಪಾಕಿಸ್ತಾನ ಆಟಗಾರರು!

ನವದೆಹಲಿ: ದೀಪಾವಳಿ ಹಬ್ಬಕ್ಕೆ ದೇಶದ ಜನತೆಗೆ ಟೀಂ ಇಂಡಿಯಾ ಆಟಗಾರರ ಭರ್ಜರಿ ಗಿಫ್ಟ್ ನೀಡಿದ್ದಾರೆ. ಒಂದು ದಿನ ಮುಂಚಿತವಾಗಿಯೇ ಮೆಲ್ಬೋರ್ನ್ ಮೈದಾನದಲ್ಲಿ ಭಾರತೀಯ ಆಟಗಾರರು ದೀಪಾವಳಿ ಆಚರಿಸಿದ್ದಾರೆ. ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸುವ ಮೂಲಕ ಟೀಂ ಇಂಡಿಯಾ ಕಳೆದ ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ನಿಗದಿತ 20 ಓವರ್‍ಗಳಲ್ಲಿ 159 ರನ್ ಗಳಿಸಿತು. ಸವಾಲಿನ ಟಾರ್ಗೆಟ್ ಬೆನ್ನುಹತ್ತಿದ ಭಾರತ ತಂಡ ಕೊನೆ ಎಸೆತದವರೆಗೂ ಹೋರಾಟ ನಡೆಸಿ ವಿರೋಚಿತ ಗೆಲುವು ಸಾಧಿಸಿತು. ಸ್ಫೋಟಕ ಆಟವಾಡಿದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟು ಸಂಭ್ರಮಿಸಿದರು.  

ಕೊನೆ ಎಸೆತದವರೆಗೂ ಗೆಲುವಿಗಾಗಿ ಹೋರಾಡಿದ ಪಾಕ್ ತಂಡ ತಾನು ಮಾಡಿಕೊಂಡ ಎಡವಟ್ಟುಗಳಿಂದಲೇ ಸೋಲು ಕಾಣಬೇಕಾಯಿತು. ಈ ಮಹತ್ವದ ಪಂದ್ಯದ ಗೆಲುವಿನ ಬಳಿಕ ಟೀಂ ಇಂಡಿಯಾ ಸಂತಸದ ಅಲೆಯಲ್ಲಿ ತೇಲಾಡಿದರೆ, ಅತ್ತ ಪಾಕ್ ಆಟಗಾರರು ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದರು. ಸೋಲಿನ ಶಾಕ್‍ನಿಂದ ಕಂಗೆಟ್ಟಿರುವ ಪಾಕ್ ಆಟಗಾರರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾ ಮೋಸದಿಂದ ಗೆದ್ದಿದೆ ಎಂದ ಪಾಕಿಸ್ತಾನ..!

ಒಂದು ಹಂತದಲ್ಲಿ ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಪಾಕ್ ಆಟಗಾರರಿಗೆ ಕೊಹ್ಲಿ ಬಿಗ್ ಶಾಕ್ ನೀಡಿದರು. ಕಿಂಗ್ ಕೊಹ್ಲಿ ಸ್ಫೋಟಕ ಆಟಕ್ಕೆ ಪಾಕ್ ಆಟಗಾರರು ಮೈದಾನದಲ್ಲಿಯೇ ತಲೆಮೇಲೆ ಕೈಹೊತ್ತು ಕುಳಿತಿದ್ದರು. ಮೈದಾನದಲ್ಲಿ ತಮ್ಮ ಹತಾಶೆ ಹೊರಹಾಕುತ್ತಿದ್ದ ಪಾಕ್ ಆಟಗಾರರಿಗೆ ಕೊನೆ ಓವರ್ ದೊಡ್ಡ ನಿರಾಸೆ ಮೂಡಿಸಿತು. ಸೋಲುವ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿದರೆ, ಪಾಕ್ ಆಟಗಾರರು ನಿರಾಸೆಯಿಂದಲೇ ಮೈದಾನದಿಂದ ಹೊರನಡೆದರು.   

ಡ್ರೆಸ್ಸಿಂಗ್ ರೂಂನಲ್ಲಿ ಸಪ್ಪೆ ಮೊರೆ ಹಾಕಿಕೊಂಡು ಕುಳಿತ್ತಿದ್ದ ಆಟಗಾರರಿಗೆ ತಂಡದ ಮುಖ್ಯ ಕೋಚ್ ಮ್ಯಾಥ್ಯೂ ಹೇಡನ್ ಮತ್ತು ನಾಯಕ ಬಾಬರ್ ಅಜಮ್ ಧೈರ್ಯ ತುಂಬಿದ್ದಾರೆ. ಈ ವಿಡಿಯೋವನ್ನು ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.  

ನಾಯಕ ಬಾಬರ್ ಅಜಮ್ ತಂಡದ ಆಟಗಾರರನ್ನು ಸಮಾಧಾನಪಡಿಸಿದ್ದಾರೆ. ‘ನಾವು ಸೋತಿದ್ದು ಒಂದೇ ಒಂದು ಪಂದ್ಯ, ಟಿ-20 ವಿಶ್ವಕಪ್ ಅಲ್ಲ. ಪ್ರತಿಯೊಬ್ಬರು ಚೆನ್ನಾಗಿ ಆಡಿದ್ದೀರಿ. ಆದರೆ ಕೆಲವು ತಪ್ಪುಗಳಿಂದ ನಾವು ಸೋಲಬೇಕಾಯಿತು. ಮುಂದೆ ಇನ್ನೂ ನಮಗೆ ದೊಡ್ಡ ದೊಡ್ಡ ಪಂದ್ಯಗಳಿವೆ, ನಾವು ಅದಕ್ಕಾಗಿ ಸಿದ್ಧರಾಗಬೇಕಿದೆ. ಹೀಗಾಗಿ ಯಾರೂ ಧೈರ್ಯ ಕಳೆದುಕೊಳ್ಳಬೇಡಿ. ತಂಡದ ಸೋಲಿಗೆ ಕೇವಲ ಒಬ್ಬರತ್ತ ಬೆರಳು ಮಾಡಲು ಬರುವುದಿಲ್ಲ. ಇಲ್ಲಿ ಇಡೀ ತಂಡವೇ ಸೋತಿದೆ. ಹೀಗಾಗಿ ನಾವು ಮುಂದಿನ ಪಂದ್ಯಗಳಿಗೆ ಭರ್ಜರಿಯಾಗಿ ತಯಾರಿ ನಡೆಸಬೇಕಿದೆ ಧೈರ್ಯವಾಗಿರಿ’ ಅಂತಾ ಹೇಳಿದ್ದಾರೆ.    

ಇದನ್ನೂ ಓದಿ: T20 World Cup 2022: ಪಾಕಿಸ್ತಾನ ತಂಡಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದ ರಮೀಝ್ ರಾಜಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News