Top Selling MPV: ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದ 3 ಬಹು ಉದ್ದೇಶಿತ ಕಾರುಗಳು, ಮತ್ತೆ ನಂ.1 ಪಟ್ಟಕ್ಕೇರಿದೆ ಈ ಕಾರು

Top 3 MPV: ಮಾರುತಿ ಸುಜುಕಿ ಎರ್ಟಿಗಾಗೆ ಈ ವರ್ಷದ ಆರಂಭದಲ್ಲಿ ಮಿಡ್ ಲೈಫ್ ಅಪ್ಡೇಟ್ ಸಿಕ್ಕಿತ್ತು. ಇದರಲ್ಲಿ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದ ಜೊತೆಗೆ 1.5ಲೀ ಡ್ಯುಯೆಲ್ ಜೆಟ್ ಇಂಜಿನ್ ಶಾಮೀಲಾಗಿವೆ.

Written by - Nitin Tabib | Last Updated : Oct 14, 2022, 04:58 PM IST
  • ಮಾರುತಿ ಎರ್ಟಿಗಾ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ MPV ಆಗಿ ಹೊರಹೊಮ್ಮಿದೆ.
  • ಮಾರುತಿ ಎರ್ಟಿಗಾ ಸೆಪ್ಟೆಂಬರ್‌ನಲ್ಲಿ ಒಟ್ಟು 9,299 ಯುನಿಟ್‌ಗಳ ಮಾರಾಟವನ್ನು ಕಂಡಿದೆ,
  • ಇದು MPV ವಿಭಾಗದಲ್ಲಿ ಹೆಚ್ಚು ಮಾರಾಟವಾದ ವಾಹನವಾಗಿದೆ.
Top Selling MPV: ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದ 3 ಬಹು ಉದ್ದೇಶಿತ ಕಾರುಗಳು, ಮತ್ತೆ ನಂ.1 ಪಟ್ಟಕ್ಕೇರಿದೆ ಈ ಕಾರು title=
Top Three MPV

Top Selling MPV: ಮಾರುತಿ ಎರ್ಟಿಗಾ ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ MPV ಆಗಿ ಹೊರಹೊಮ್ಮಿದೆ. ಮಾರುತಿ ಎರ್ಟಿಗಾ ಸೆಪ್ಟೆಂಬರ್‌ನಲ್ಲಿ ಒಟ್ಟು 9,299 ಯುನಿಟ್‌ಗಳ ಮಾರಾಟವನ್ನು ಕಂಡಿದೆ, ಇದು MPV ವಿಭಾಗದಲ್ಲಿ ಹೆಚ್ಚು ಮಾರಾಟವಾದ ವಾಹನವಾಗಿದೆ. ಇದಕ್ಕೂ ಮೊದಲು ಆಗಸ್ಟ್‌ನಲ್ಲಿಯೂ ಇದು ಹೆಚ್ಚು ಮಾರಾಟವಾದ MPV ಆಗಿತ್ತು. ಇದೇ ವೇಳೆ, ಇದರ ನಂತರ ಸೆಪ್ಟೆಂಬರ್‌ನಲ್ಲಿ, ಟೊಯೊಟಾ ಇನ್ನೋವಾ ಕ್ರಿಸ್ಟಾ ಎರಡನೇ ಅತಿ ಹೆಚ್ಚು ಮಾರಾಟವಾದ MPV ಆಗಿತ್ತು.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಳೆದ ವರ್ಷ ಇದೇ ತಿಂಗಳಲ್ಲಿ (ಸೆಪ್ಟೆಂಬರ್ 2021) ಮಾರಾಟವಾದ 4,724 ಯುನಿಟ್‌ಗಳಿಗೆ ಹೋಲಿಸಿದರೆ, 7,282 ಇನ್ನೋವಾ ಕ್ರಿಸ್ಟಾವನ್ನು ಮಾರಾಟ ಮಾಡಿದೆ. ಸೆಪ್ಟೆಂಬರ್ 2022 ರಲ್ಲಿ, ಈ ಎರಡೂ ಕಾರುಗಳ ಬಳಿಕ,  ಕಿಯಾ ಕ್ಯಾರೆನ್ಸ್ ಮೂರನೇ ಸ್ಥಾನದಲ್ಲಿತ್ತು. ದಕ್ಷಿಣ ಕೊರಿಯಾದ ವಾಹನ ತಯಾರಕ ಕ್ಯಾರೆನ್ಸ್‌ನ 5233 ಯುನಿಟ್‌ಗಳನ್ನು ಮಾರಾಟ ಮಾಡಿದೆ. ದೇಶದಲ್ಲಿ ಹೆಚ್ಚು ಮಾರಾಟವಾಗುವ ಈ ಮೂರು MPV ಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

MARUTI ERTIGA
ಮಾರುತಿ ಸುಜುಕಿ ಎರ್ಟಿಗಾ ಈ ವರ್ಷದ ಆರಂಭದಲ್ಲಿ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು. ಇದು ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಹೊಸ 1.5L DualJet ಎಂಜಿನ್ ಅನ್ನು ಪಡೆದುಕೊಂಡಿದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗಿದೆ. ಇದು ಸಿಎನ್‌ಜಿ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಇಳಿದಿದೆ, ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. ಎರ್ಟಿಗಾ CNG 26.11km/kg ಮೈಲೇಜ್ ನೀಡುತ್ತದೆ.

ಇದನ್ನೂ ಓದಿ-Stock Market Update: ಷೇರು ಮಾರುಕಟ್ಟೆಯಲ್ಲಿ ಭಾರಿ ಗೂಳಿ ಜಿಗಿತ, ಸೆನ್ಸೆಕ್ಸ್ ಸೂಚ್ಯಂಕ 927 ಅಂಕಗಳಿಂದ ಬಲಿಷ್ಠ

TOYOTA INNOVA CRYSTA
ಟೊಯೊಟಾ ಇನ್ನೋವಾ ಕ್ರಿಸ್ಟಾ 2.7-ಲೀಟರ್ ಪೆಟ್ರೋಲ್ (166hp ಪವರ್) ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ (150hp ಪವರ್) ಆಯ್ಕೆಗಳೊಂದಿಗೆ ಬರುತ್ತದೆ. ಆದರೂ ಕೂಡ, ಸದ್ಯಕ್ಕೆ, ಕಂಪನಿಯು ಡೀಸೆಲ್ ರೂಪಾಂತರಗಳಿಗೆ ಬುಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ. ಇನ್ನೋವಾ ಕ್ರಿಸ್ಟಾ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಪಡೆಯುತ್ತದೆ.

ಇದನ್ನೂ ಓದಿ-New Bike Launch: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? ಸದ್ದಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಈ ಹೊಚ್ಚ ಹೊಸ ಬೈಕ್, ಇಂದೇ ಬುಕ್ ಮಾಡಿ

KIA CARENS
ಕಿಯಾ ಕ್ಯಾರೆನ್ಸ್ ಪ್ರಸ್ತುತ 1.5-ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ (115hp ಪವರ್), 1.4-ಲೀಟರ್ ಟರ್ಬೊ-ಪೆಟ್ರೋಲ್ (140hp ಪವರ್) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳೊಂದಿಗೆ (115hp ಪವರ್) ಮಾರುಕಟ್ಟೆಯಲ್ಲಿ ಲಭ್ಯವಿದೆ. ಕ್ಯಾರನ್ಸ್ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 16.5kpl ಮತ್ತು 21.5kpl ಮೈಲೇಜ್ ನೀಡಬಹುದು ಎಂದು Kia ಹೇಳಿಕೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News