Ration Card Cancellation: ನೀವೂ ಸಹ ಪಡಿತರ ಚೀಟಿದಾರರಾಗಿದ್ದರೆ, ಈ ಸುದ್ದಿಯನ್ನು ತಪ್ಪದೇ ಓದಿ. ಪಡಿತರ ಚೀಟಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದ್ದು, ಇದರಡಿ 30 ದಿನದೊಳಗೆ ಅಂತ್ಯೋದಯ ಹಾಗೂ ಅರ್ಹ ಗೃಹ ಪಡಿತರ ಚೀಟಿದಾರರ ಪರಿಶೀಲನೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ.
ರದ್ದಾಗಲಿವೆ ಇಂತಹ ರೇಷನ್ ಕಾರ್ಡ್ಗಳು!
ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪಡಿತರ ಯೋಜನೆಯ ಪ್ರಯೋಜನ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಹೊಸ ಕ್ರಮ ಕೈಗೊಳ್ಳಲಾಗಿದ್ದು, ಪರಿಶೀಲನೆ ವೇಳೆ ಅನರ್ಹರೆಂದು ಕಂಡುಬಂದ ಫಲಾನುಭವಿಗಳ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು. ಇದರೊಂದಿಗೆ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಹೊಸ ರೇಷನ್ ಕಾರ್ಡ್ಗಳನ್ನು ನೀಡಲಾಗುವುದು. ಇದರಿಂದ ಅರ್ಹ ಫಲಾನುಭವಿಗಳು ಯಾವುದೇ ತೊಂದರೆ ಇಲ್ಲದೆ ಪಡಿತರ ಯೋಜನೆಯ ಲಾಭವನ್ನು ಪಡೆಯಲು ಸಹಾಯಕವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ- Diwali Bonus: ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ, ಸರ್ಕಾರ ಕೊಡುತ್ತೆ ದೀಪಾವಳಿ ಬೋನಸ್
ಅನರ್ಹ ಫಲಾನುಭವಿಗಳ ಜಾಗದಲ್ಲಿ ಅರ್ಹರಿಗೆ ರೇಷನ್ ಕಾರ್ಡ್:
ವಾಸ್ತವವಾಗಿ, ಅರ್ಹರಲ್ಲದವರೂ ಕೂಡ ಸರ್ಕಾರದ ಪಡಿತರ ಯೋಜನೆಯ ಫಲಾನುಭವಿಗಳಾಗಿರುವ ಬಗ್ಗೆ ನಿರಂತರವಾಗಿ ದೂರುಗಳು ದಾಖಲಾಗುತ್ತಿವೆ. ಈ ಹಿನ್ನಲೆಯಲ್ಲಿ, 'ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013' ಅಡಿಯಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದ್ದು ಅನರ್ಹ ಫಲಾನುಭವಿಗಳ ಜಾಗದಲ್ಲಿ ಅರ್ಹರಿಗೆ ರೇಷನ್ ಕಾರ್ಡ್ ನೀಡಲಾಗುತ್ತದೆ.
ಅರ್ಹರು ಸರ್ಕಾರದ ಯೋಜನೆಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಂತಹ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇದರ ಅಡಿಯಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ ಕುಟುಂಬ ಸದಸ್ಯರ ಸಂಖ್ಯೆ, ವಯಸ್ಸು, ವಾಸಸ್ಥಳ ಇತ್ಯಾದಿ ವಿವರಗಳನ್ನು ಸಂಗ್ರಹಿಸಿ ಡೇಟಾಬೇಸ್ ಸಿದ್ಧಪಡಿಸಲಾಗುತ್ತದೆ. ಇದರ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಪಡಿತರ ಯೋಜನೆಯ ಪ್ರಯೋಜನಗಳು ಲಭ್ಯವಾಗಲಿವೆ.
ಇದನ್ನೂ ಓದಿ- Free Ration : ಉಚಿತ ಪಡಿತರ ತೆಗೆದುಕೊಳ್ಳುವವರಿಗೆ ಸಿಹಿ ಸುದ್ದಿ : ಕೇಂದ್ರದಿಂದ ಕೋಟ್ಯಂತರ ಜನರಿಗೆ ನೇರ ಲಾಭ!
ಸರ್ಕಾರವು ಕಾಲಕಾಲಕ್ಕೆ ಪಡಿತರ ಚೀಟಿಗಳ ಪರಿಶೀಲನೆ ನಡೆಸುತ್ತಲೇ ಇರುತ್ತದೆ. ಸಂಸತ್ತಿನಲ್ಲಿ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, 2017 ರಿಂದ 2021 ರವರೆಗೆ ದೇಶದಲ್ಲಿ ಒಟ್ಟು 2 ಕೋಟಿ 41 ಲಕ್ಷ ಅನರ್ಹ ಮತ್ತು ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.