ಬೆಂಗಳೂರು: ಬಿಜೆಪಿಗೆ ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ‘ಭಾರತ್ ಜೋಡೋ ಯಾತ್ರೆ’ಯಲ್ಲಿ ರಾಹುಲ್ ಮಾತನಾಡಿರುವ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಹಂಚಿಕೊಂಡಿದೆ.
‘ನಾನು ಯಾತ್ರೆಯುದ್ದಕ್ಕೂ ರೈತರೊಂದಿಗೆ ಸಂವಾದ ನಡೆಸುತ್ತಾ ಬಂದಿದ್ದೇನೆ. ರೈತರನ್ನು ಎಲ್ಲೂ ಕಡೆಯಿಂದಲೂ ಹಿಂಡಿ ಹಾಕಲಾಗಿದೆ. ರೈತರಿಗೆ ನೀಡಬೇಕಾದ ಬೆಂಬಲ ಬೆಲೆ ನೀಡುತ್ತಿಲ್ಲ. ಇನ್ನೊಂದೆಡೆ ಇದೇ ಮೊದಲ ಬಾರಿಗೆ ಕೃಷಿಗೂ GST ಹಾಕಲಾಗಿದೆ. ಟ್ರಾಕ್ಟರ್, ಕೀಟನಾಶಕ, ರಸಗೊಬ್ಬರಕ್ಕೂ GST ಕಟ್ಟಬೇಕಾಗಿದೆ’ ಅಂತಾ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
"ಬಿಜೆಪಿಗೆ ರೈತರ ಹಾಗೂ ಬಡವರ ಬಗ್ಗೆ ಕಾಳಜಿ ಇಲ್ಲ.
ರೈತರನ್ನು ಎಲ್ಲೂ ಕಡೆಯಿಂದಲೂ ಹಿಂಡಿ ಹಾಕಲಾಗಿದೆ. ರೈತರಿಗೆ ನೀಡಬೇಕಾದ ಬೆಂಬಲ ಬೆಲೆ ನೀಡುತ್ತಿಲ್ಲ.
ಇನ್ನೊಂದೆಡೆ ಇದೇ ಮೊದಲ ಬಾರಿಗೆ ಕೃಷಿಗೂ GST ಹಾಕಲಾಗಿದೆ. ಟ್ರಾಕ್ಟರ್, ಕೀಟನಾಶಕ, ರಸಗೊಬ್ಬರಕ್ಕೂ GST ಕಟ್ಟಬೇಕಾಗಿದೆ"#BharatJodoYatra #BharatAikyataYatre pic.twitter.com/COw9Y2hfc9
— Karnataka Congress (@INCKarnataka) October 8, 2022
ಇದನ್ನೂ ಓದಿ: ಟಿಪ್ಪು, ತಾಳಗುಪ್ಪ ರೈಲುಗಳಿಗೆ ಮರುನಾಮಕರಣ: ಸಿದ್ದರಾಮಯ್ಯ ಹೇಳಿದ್ದೇನು..?
‘ಹಣ ಎಂದೂ ಮಾಯವಾಗುವುದಿಲ್ಲ. ಅದು ನಿಮ್ಮ ಜೇಬಿನಿಂದ ಹೋಗುತ್ತಿದ್ದರೆ ಮತ್ತೊಬ್ಬರ ಜೇಬು ಸೇರುತ್ತಿದೆ ಎಂದೇ ಅರ್ಥ. ಪ್ರಪಂಚದ 2ನೇ ಶ್ರೀಮಂತ ವ್ಯಕ್ತಿ ನಮ್ಮ ಪ್ರಧಾನಿಗಳ ಆತ್ಮೀಯ ಗೆಳೆಯ. ನಿಮ್ಮ ಹಣ ಆ ಉದ್ಯಮಿಯ ಜೇಬು ಸೇರುತ್ತಿದೆ. ಆತ ಜಗತ್ತಿನ 2 ನೇ ಶ್ರೀಮಂತನಾಗಿದ್ದು ನಿಮ್ಮ ಹಣದಿಂದ. ದೇಶದ ಜನರ ಹಣ ಕಸಿದು ಪ್ರಧಾನಿ ಮೋದಿಯವರ ನೆಚ್ಚಿನ ಉದ್ಯಮಿಗಳಿಗೆ ನೀಡಲಾಗುತ್ತಿದೆ’ ಎಂದು ರಾಹುಲ್ ಟೀಕಿಸಿದ್ದಾರೆ.
"ಹಣ ಎಂದೂ ಮಾಯವಾಗುವುದಿಲ್ಲ.
ಅದು ನಿಮ್ಮ ಜೇಬಿನಿಂದ ಹೋಗುತ್ತಿದ್ದರೆ ಮತ್ತೊಬ್ಬರ ಜೇಬು ಸೇರುತ್ತಿದೆ ಎಂದೇ ಅರ್ಥ.ಪ್ರಪಂಚದ 2 ನೇ ಶ್ರೀಮಂತ ವ್ಯಕ್ತಿ ನಮ್ಮ ಪ್ರಧಾನಿಗಳ ಆತ್ಮೀಯ ಗೆಳೆಯ. ನಿಮ್ಮ ಹಣ ಆ ಉದ್ಯಮಿಯ ಜೇಬು ಸೇರುತ್ತಿದೆ.
ಆತ ಜಗತ್ತಿನ 2 ನೇ ಶ್ರೀಮಂತನಾಗಿದ್ದು ನಿಮ್ಮ ಹಣದಿಂದ"#BharatJodoYatra pic.twitter.com/oSU3x13neh
— Karnataka Congress (@INCKarnataka) October 8, 2022
‘ಕೃಷಿ ಕಾಯ್ದೆಗಳು, ನೋಟು ಅಮಾನ್ಯೀಕರಣ ಮತ್ತು GSTಗಳು ಮಾರಕ ಅಸ್ತ್ರಗಳು. ಇವು ಕೇವಲ ಕೇಂದ್ರದ ನೀತಿಗಳಲ್ಲ. ಬದಲಾಗಿ ಭಾರತದ ಜನರ ಮೇಲೆ, ರೈತರ ಮೇಲೆ, ಕಾರ್ಮಿಕರ, ಸಣ್ಣ ಉದ್ಯಮದ ಮೇಲೆ ದಾಳಿ ಮಾಡಲು ಬಳಸಿದ ಅಸ್ತ್ರಗಳು. ಈ ಅಸ್ತ್ರಗಳಿಂದ ಲಕ್ಷಾಂತರ ರೈತರು, ಕೂಲಿ ಕಾರ್ಮಿಕರು, ಸಣ್ಣ ಉದ್ದಿಮೆಗಳು ನಾಶವಾಗಿವೆ. ಏಕೆ ನಮ್ಮ ಜೀವನ, ಇತಿಹಾಸ, ಭಾಷೆ, ಸಂಸ್ಕೃತಿ, ಕನ್ನಡ ಇವುಗಳ ಮೇಲೆ ದಾಳಿಯಾಗುತ್ತಿದೆ? ನಮ್ಮ ಭವ್ಯವಾದ ಇತಿಹಾಸ, ಬಸವಣ್ಣನವರ ಪರಂಪರೆಯನ್ನು ಪಠ್ಯಪುಸ್ತಕದಿಂದ ಏಕೆ ಅಳಿಸಿ ಹಾಕಲಾಗುತ್ತಿದೆ? ಯಾವ ಶಕ್ತಿ ಬಸವಣ್ಣನವರ ಮೇಲೆ ದಾಳಿ ಮಾಡುತ್ತಿದೆ?’ ಅಂತಾ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: PFI ಜೊತೆ ಪೊಲೀಸರ ನಂಟು.? ರಾಜ್ಯದ ಮೇಲೂ NIA ಕಣ್ಣು.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.