ಬಾಳೆಹಣ್ಣು ಎಂಬುದು ಅನೇಕ ಪೋಷಕಾಶಗಳನ್ನು ಹೊಂದಿರುವ ಹಣ್ಣು. ಇದನ್ನು ಸೇವಿಸುವುದರಿಂದ ದೇಹಕ್ಕೆ ಆರೋಗ್ಯ ಲಭಿಸುತ್ತದೆ. ಮಲಬದ್ಧತೆ, ಅಸಿಡಿಟಿ ಮುಂತಾದ ಸಮಸ್ಯೆಯುಳ್ಳವರು ಬಾಳೆಹಣ್ಣನ್ನು ಸೇವಿಸುವುದರಿಂದ ತಕ್ಷಣ ಪರಿಹಾರ ಕಂಡುಕೊಳ್ಳಬಹುದು.
ಬಾಳೆಹಣ್ಣು ಸೇವಿಸಿದರೆ ಅದರಲ್ಲಿರುವ ಪೊಟ್ಯಾಶಿಯಂ, ಮೆಗ್ನೇಶಿಯಂ ಸೇರಿದಂತೆ ಅನೇಕ ಪೋಷಕಾಂಶಗಳ ದೇಹಕ್ಕೆ ಸಿಗುತ್ತದೆ.
ಬಾಳೆಹಣ್ಣು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು
ಬಾಳೆಹಣ್ಣು ದೇಹದ ಬೊಜ್ಜು ಕರಗಿಸಲು ಸಹಕಾರಿ. ಇದರ ಜೊತೆಗೆ ಕೋಪವನ್ನು ನಿಯಂತ್ರಿಸಲು ಕೂಡ ಪ್ರಯೋಜನವಾಗುತ್ತದೆ.
ಬಾಳೆಹಣ್ಣು ಸೇವಿಸುವುದರಿಂದ ಹೃದ್ರೋಗ ಅಪಾಯವೂ ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆಗೂ ಬಾಳೆಹಣ್ಣು ಸೇವನೆ ಮಾಡುವುದು ಉತ್ತಮ ಎಂದು ಪರಿಗಣಿಸಲಾಗಿದೆ.