Bigg boss kannada season 9 : ಬಿಗ್ ಬಾಸ್ ಮನೆಯಲ್ಲಿ ಆಟದ ಜೊತೆ ಪಾಠವೂ ಇರುತ್ತದೆ. ಟಾಸ್ಕ್ ಜೊತೆ ಜೊತೆಗೆ ಭಾವನೆಗಳ ಬುತ್ತಿ ಕೂಡ ಇರುತ್ತದೆ. ಬಿಗ್ ಬಾಸ್ ಕನ್ನಡ 9 ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ ವೇಳೆ ವೇದಿಕೆಯಲ್ಲೇ ಎಲ್ಲಾ ಸ್ಪರ್ಧಿಗಳಿಗೂ ಕಿಚ್ಚ ಸುದೀಪ್ ಒಂದು ಟಾಸ್ಕ್ ನೀಡಿದ್ದರು. ಕೆಲವೊಂದು ಟೈಟಲ್‌ಗಳಿರುವ ಬ್ಯಾಂಡ್ ಅನ್ನು ನೀಡಿದ್ದರು. ಈ ಬ್ಯಾಂಡ್ ಮೇಲಿರುವ ಹೆಸರಿಗೆ ತಕ್ಕ ಸ್ಪರ್ಧಿಗಳನ್ನು ಆರಿಸಿಕೊಳ್ಳಬೇಕಿತ್ತು. ಬಿಗ್ ಬಾಸ್ ಶುರುವಾಗಿ ಮೂರನೇ ದಿನ ಈ ಬ್ಯಾಂಡ್‌ನ್ನು ತಾವು ಆಯ್ಕೆ ಮಾಡಿದ ಕಂಟೆಸ್ಟಂಡ್‌ಗೆ ನೀಡಿದ್ದಾರೆ. ಯಾರಿಗೆ ಯಾವ ಟೈಟಲ್ ಇರುವ ಕೈಪಟ್ಟಿ ಲಭಿಸಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿ : Mahesh Babu : ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ಇನ್ನಿಲ್ಲ
ದೊಡ್ಮನೆಗೆ ಬಂದ ಸ್ಪರ್ಧಿಗಳಲ್ಲಿ ಕೆಲವರು ಮೊದಲೇ ಪರಿಚಯಸ್ಥರು, ಸ್ನೇಹಿತರು. ಆದರೆ ಮತ್ತೆ ಕೆಲವರು ಮುಖ ಪರಿಚಯವಿದ್ದರೂ ಭೇಟಿಯಾಗಿದ್ದು ಬಿಗ್ ಮನೆಯಲ್ಲಿಯೇ. ಹೀಗಾಘಿ ಒಬ್ಬರೊನ್ನಬ್ಬರು ಅರಿತುಕೊಳ್ಳಲು ಕೆಲವು ದಿನಗಳು ಬೇಕು. ಇದೇ ಕಾರಣಕ್ಕೆ ಬಿಗ್ ಬಾಸ್ ಎರಡು ದಿನ ಕಳೆದ ಬಳಿಕ ಮೂರನೇ ದಿನ ಈ ಬ್ಯಾಂಡ್‌ಗಳನ್ನು ನೀಡಲು ಆದೇಶಿಸಿದ್ದರು. ಇದರ ಅನುಸಾರ, ರಾಕೇಶ್ ಅಡಿಗ ಚಿಂತಾಕ್ರಾಂತ ಎಂಬ ಬ್ಯಾಂಡ್‌ನ್ನು ಮಯೂರಿಗೆ ನೀಡಿದರು. ರೂಪೇಶ್ ರಾಜಣ್ಣ ಅವರಿಗೆ ಸಿಕ್ಕಿದ್ದ ಚಾಣಕ್ಯ ಕೈಪಟ್ಟಿ ಯನ್ನ ಆರ್ಯವರ್ಧನ್ ಗುರೂಜಿಗೆ ಕೊಟ್ಟರು. ಅನುಪಮಾ ಗೌಡಗೆ ಸಿಕ್ಕಿದ್ದ ವಿದೂಷಕ ಬ್ಯಾಂಡ್‌ನ್ನು ಸದಾ ಎಲ್ಲರನ್ನೂ ನಕ್ಕು ನಗಿಸುತ್ತಿರುವ ಅರುಣ್ ಸಾಗರ್ ಅವರಿಗೆ ಕಟ್ಟಿದರು. ನೇಹಾ ಗೌಡಗೆ ಲಭಿಸಿದ್ದ ಸಾಹಸಿ ಕೈಪಟ್ಟಿಯನ್ನ ಫಿಸಿಕಲ್ ಟಾಸ್ಕ್ ಅನ್ನು ಸಖತ್ ಆಗಿ ಆಡಿ ಎಲ್ಲರ ಮನಗೆದ್ದಿದ್ದ ಅಮೂಲ್ಯ ಗೌಡಗೆ ತೊಡಿಸಿದರು.
ಕೈಗೆ ಪಟ್ಟಿ ಕಟ್ಟಿ, ಸಂಬಂಧ ಗಟ್ಟಿಯಾಗೋ ಸಮಯ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/of0YmNntRr
— Colors Kannada (@ColorsKannada) September 27, 2022
ಆರ್ಯವರ್ಧನ್ ಅವರಿಗೆ ಪ್ರಶಾಂತ ಎಂದು ಬರೆದ ಬ್ಯಾಂಡ್ ಸಿಕ್ಕಿತ್ತು. ಅದನ್ನು ಅವರು ರೂಪೇಶ್ ಶೆಟ್ಟಿಗೆ ಕೊಟ್ಟರು. ದರ್ಶ್ ಚಂದ್ರಪ್ಪ ಅವರಿಗೆ ದೊರೆತಿದ್ದ ನಾಯಕ ಬ್ಯಾಂಡ್‌ನ್ನು ಅರುಣ್ ಸಾಗರ್ ಗೆ ಹಾಕಿದರು. ದಿವ್ಯಾ ಉರುಡುಗ ಅವರಿಗೆ ದಯಾಳು ಎಂಬ ಕೈಪಟ್ಟಿ ಸಿಕ್ಕಿತ್ತು, ಅದನ್ನು ಅವರು ದರ್ಶ್ ಚಂದ್ರಪ್ಪ ಕೈಗೆ ಕಟ್ಟಿದರು.
ಇದನ್ನೂ ಓದಿ : BBK 9 Day 2 : ಸಂಬರಗಿ ಸವಾಲ್‌ಗೆ ಹೆಣ್ಮಕ್ಳು ಕೊಟ್ರು ಜವಾಬ್
ಐಶ್ವರ್ಯ ಪಿಸ್ಸೆಗೆ ಲಭಿಸಿದ್ದ ಟೀಚರ್ ಕೈಪಟ್ಟಿಯನ್ನ ತಮ್ಮ ಪಾರ್ಟ್ನರ್ ಆಗಿರುವ ದಿವ್ಯಾ ಉರುಡುಗಗೆ ಹಾಕಿದರು. ಇನ್ನೂ ಪ್ರಶಾಂತ್ ಸಂಬರಗಿ ಅವರಿಗೆ ಗೆಳೆಯ ಎಂಬ ಬ್ಯಾಂಡ್ ಸಿಕ್ಕಿತ್ತು, ಅದನ್ನು ಅವರು ಅರುಣ್ ಸಾಗರ್‌ಗೆ ಕೊಟ್ಟರು. ವಿನೋದ್ ಗೊಬ್ಬರಗಾಲ ಅವರಿಗೆ ಸಿಕ್ಕಿದ್ದ ಕಿಲಾಡಿ ಎಂಬ ಬ್ಯಾಂಡ್‌ನ್ನು ಅವರು ಪ್ರಶಾಂತ್ ಸಂಬರಗಿಗೆ ತೊಡಿಸಿದರು. ಇನ್ನೂ ದೀಪಿಕಾ ದಾಸ್ ಅವರಿಗೆ ಸಿಕ್ಕಿದ್ದ ಧೈರ್ಯವಂತ ಬ್ಯಾಂಡ್‌ನ್ನು ಅವರು ಪ್ರಶಾಂತ್ ಸಂಬರಗಿಗೆ ನೀಡಿದರು. ರೂಪೇಶ್ ಶೆಟ್ಟಿ ಬಳಿಯಿದ್ದ ತ್ಯಾಗರಾಜ ಎಂಬ ಕೈಪಟ್ಟಿಯನ್ನ ಅವರು ರಾಕೇಶ್ ಅಡಿಗ ಅವರಿಗೆ ತೊಡಿಸಿದರು.
ಕಾವ್ಯಶ್ರೀ ಗೌಡ ಅವರಿಗೆ ಕಥೆಗಾರ ಎಂಬ ಬ್ಯಾಂಡ್ ಸಿಕ್ಕಿತ್ತು, ಅದನ್ನು ಅವರು ರೂಪೇಶ್ ರಾಜಣ್ಣ ಅವರಿಗೆ ನೀಡಿದರು. ಮಯೂರಿ ಅವರ ಬಳಿಯಿದ್ದ ಗೊಂಬೆ ಬ್ಯಾಂಡ್‌ನ್ನು ಅವರು ನೇಹಾ ಗೌಡಗೆ ನೀಡಿದರು. ಸಾನ್ಯ ಅಯ್ಯರ್ ಅವರ ಹತ್ತಿರವಿದ್ದ ಕಲಾವಿದ ಕೈಪಟ್ಟಿಯನ್ನ, ಅವರು ಕುತಂತ್ರಿ ಕಲೆ ಎನ್ನುತ್ತಾ ಪ್ರಶಾಂತ್ ಸಂಬರಗಿಗೆ ತೊಡಿಸಿದರು. ಆರ್ಯವರ್ಧನ್ ಗುರೂಜಿಗೆ ನಂಬಿಕಸ್ಥ ಎಂಬ ಬ್ಯಾಂಡ್‌ನ್ನು ಅರುಣ್ ಸಾಗರ್ ನೀಡಿದ್ದು, ಇದನ್ನು ಅಡುಗೆ ವಿಚಾರಕ್ಕಾಗಿ ನೀಡಿರುವುದಾಗಿ ಹೇಳಿದರು. ಇನ್ನೂ ನವಾಜ್ ಬಳಿಯಿದ್ದ ಸುರಸುಂದರಿ ಕೈಪಟ್ಟಿಯನ್ನ ಐಶ್ವರ್ಯ ಪಿಸ್ಸೆಗೆ ಕೊಟ್ಟರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.