ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್

      

Last Updated : Nov 18, 2017, 02:10 PM IST
ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಒಲಿಂಪಿಕ್ ಪದಕ ವಿಜೇತ ಸುಶೀಲ್   ಕುಮಾರ್ title=

ನವ ದೆಹಲಿ : ಕುಸ್ತಿಯಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ಗಳಿಸಿದ್ದ ಸುಶೀಲ್ ಕುಮಾರ್ ಅವರು ಶುಕ್ರವಾರ ಇಂದೋರ್ನಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಪುರುಷರ 74 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿದ್ದಾರೆ.

ಮಧ್ಯಪ್ರದೇಶ ಕುಸ್ತಿ ಅಸೋಸಿಯೇಷನ್ ಇಂದೋರ್ ನಲ್ಲಿ ಆಯೋಜಿಸಿದ್ದ 62ನೇ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಸುಶೀಲ್ ಕುಮಾರ್ ಅವರು ಒಟ್ಟು ಎರಡು ನಿಮಿಷ 33 ಸೆಕೆಂಡುಗಳ ಕಾಲ ಹೋರಾಟ ನಡೆಸಿ ಅಂತಿಮ ಸುತ್ತಿನಲ್ಲಿ ಜಯಶಾಲಿಯಾಗಿದ್ದಾರೆ. ಈ ಮೂಲಕ ಮೂರು ವರ್ಷಗಳ ಬಳಿಕ ಸುಶೀಲ್ ರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.

ಇದೇ ವೇಳೆ ಭಾರತದ ಏಕೈಕ ಮಹಿಳಾ ಒಲಿಂಪಿಕ್ ಪದಕ ವಿಜೇತೆ ಕುಸ್ತಿ ಪಟು ಸಾಕ್ಷಿ ಮಲಿಕ್ ಮತ್ತು ಗೀತಾ ಫೋಗಟ್ ಅವರು ಕ್ರಮವಾಗಿ 62 ಕೆ.ಜಿ. ಮತ್ತು 59 ಕೆ.ಜಿ. ವಿಭಾಗಗಳಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.

Trending News