Beard Tips: ಶೀಘ್ರವಾಗಿ ಮಸ್ತ್ ಆಗಿ ಗಡ್ಡ ಬೆಳೆಯಬೇಕಾದ್ರೆ ಈ ಆಹಾರಗಳನ್ನು ಸೇವನೆ ಮಾಡಿ

ಪುರುಷರಿಗೆ ಗಡ್ಡ, ಮೀಸೆ ಎಂದರೆ ಬಲು ಪ್ರೀತಿ. ನಿಮಗೆ ಗೊತ್ತಾ? ಉದ್ದನೆಯ ಗಡ್ಡ, ಮೀಸೆ ಹೊಂದಿರುವ ಪುರುಷರು ತಕ್ಷಣವೇ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಇನ್ನೂ ಕೆಲ ಯುವಕರು ಸಖತ್ ಕ್ರೇಜ್ ನಿಂದ ಬೀಯರ್ಡ್ ಬೆಳೆಸುತ್ತಾರೆ. ಆದರೆ ಕೆಲವರಿಗೆ ಏನೇ ಸರ್ಕಸ್ ಮಾಡಿದ್ರೂ ಗಡ್ಡ ಬೆಳೆಯುವುದಿಲ್ಲ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ತರಹದ ಉತ್ಪನ್ನಗಳನ್ನು ಪ್ರಯೋಗ ಮಾಡುತ್ತಾರೆ. ಆದರೆ ಪ್ರಯೋಜನವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ನಿಮಗೆ ಇಂದು ಕೆಲ ಆಹಾರ ಸೇವನೆ ಮಾಡಲು ಸೂಚಿಸುತ್ತಿದ್ದೇವೆ. ಈ ಮೂಲಕ ನೀವು ಸಮೃದ್ಧವಾದ ಗಡ್ಡವನ್ನು ಶೀಘ್ರವೇ ಹೊಂದಬಹುದು.

1 /5

ಮೀನು: ಮೀನಿನಲ್ಲಿ ಮುಖ್ಯವಾಗಿ ಟ್ಯೂಬ್ ಮೀನುಗಳನ್ನು ಸೇವನೆ ಮಾಡಬೇಕು. ಇದರಲ್ಲಿ ಒಮೆಗಾ 3 ಕೊಬ್ಬಿನಾಂಶ ಇರುವ ಕಾರಣ ದೇಹಕ್ಕೆ ಉತ್ತಮ ಪೌಷ್ಟಿಕಾಂಶ ಸಿಗುತ್ತದೆ. ಹೀಗಾಗಿ ಕೂದಲು ಸಹ ಸಮೃದ್ಧವಾಗಿ ಬೆಳೆಯುತ್ತದೆ.

2 /5

ಧಾನ್ಯಗಳು: ಪ್ರತಿಯೊಬ್ಬರ ದೇಹಕ್ಕೂ ಪ್ರೋಟೀನ್ ಯುಕ್ತ ಆಹಾರಗಳು ಮುಖ್ಯ. ಅದಕ್ಕಾಗಿಯೇ ವೈದ್ಯರು ಹೆಚ್ಚಾಗಿ ಧಾನ್ಯಗಳಿಂದ ತಯಾರಿಸಿದ ಆಹಾರ ಸೇವನೆ ಮಾಡಲು ಸೂಚಿಸುತ್ತಾರೆ. ಈ ಧಾನ್ಯಗಳು ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ನೀಗಿಸುತ್ತದೆ. ಹೀಗಾಗಿ ಗಡ್ಡ ಬೆಳೆಯಲು ಸಹಕಾರಿಯಾಗುತ್ತದೆ.

3 /5

ಪಾಲಕ್ ಸೊಪ್ಪು: ಸೊಪ್ಪುಗಳಿಂದ ದೇಹಕ್ಕೆ ಉತ್ತಮ ಪೌಷ್ಟಿಕತೆ ದೊರಕುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ, ಫೋಲಿಕ್ ಆಮ್ಲ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳು ದೇಹಕ್ಕೆ ಅಗತ್ಯವಾಗಿ ಪೋಷಾಕಾಂಶಗಳನ್ನು ನೀಡುತ್ತದೆ. ಇದು ಗಡ್ಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

4 /5

ಕುಂಬಳಕಾಯಿ ಬೀಜ:ಈ ಬೀಜಗಳು ಗಡ್ಡ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದರೆ ನಂಬಲೇ ಬೇಕು. ಹೌದು ಇದರಲ್ಲಿರುವ ಸತುವಿನ ಅಂಶ ಗಡ್ಡ ಸಮೃದ್ಧವಾಗಿ ಬೆಳವಣಿಗೆಯಾಗಲು ಸಹಾಯ ಮಾಡುತ್ತದೆ.

5 /5

ತೆಂಗಿನ ಎಣ್ಣೆ: ನಿಮಗೆ ತಿಳಿದಿರಬಹುದು ಸಾಮಾನ್ಯವಾಗಿ ಹಿರಿಯರು ತೆಂಗಿನ ಎಣ್ಣೆಯನ್ನು ಆಹಾರಗಳಲ್ಲಿ ಬಳಕೆ ಮಾಡುತ್ತಿದ್ದರು ಎಂದು. ಆದರೆ ಇದರ ಹಿಂದಿನ ಕಾರಣ ತಿಳಿದಿರಲಿಕ್ಕಿಲ್ಲ. ತೆಂಗಿನ ಎಣ್ಣೆಯಲ್ಲಿ ಅಸಾಮಾನ್ಯ ಪೋಷಕಾಂಶಗಳಿವೆ. ಈ ಹಿನ್ನೆಲೆಯಲ್ಲಿ ಆಹಾರದಲ್ಲಿ ಬಳಕೆ ಮಾಡಿದರೆ ಉತ್ತಮ.