ಬೆಳಗಾವಿ: ಕೆಪಿಎಂಇ ಕಾಯ್ದೆಯಲ್ಲಿ ಕೆಲ ಅಂಶಗಳನ್ನು ಬದಲಾಯಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು, ವೈದ್ಯರು ಮುಷ್ಕರದಿಂದ ಹಿಂದೆ ಸರಿದಿದ್ದಾರೆ.
ಕೆಪಿಎಂಇ ಮಸೂದೆ ಕುರಿತಂತೆ ರಾಜ್ಯದಲ್ಲಿ ತಲೆದೋರಿದ್ದ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ಇಂದು ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ರಮೇಶ್ ಕುಮಾರ್ ಉಪಸ್ಥಿತಿಯಲ್ಲಿ ವೈದ್ಯ ಸಂಘದ ಮುಖಂಡರೊಂದಿಗೆ ನಡೆಸಿದ ಸಭೆ ಸಫಲಗೊಂಡಿದೆ.
ಸಿಎಂ ವೈದ್ಯರ ಜೊತೆ ನಡೆಸಿದ ಸಭೆಯಲ್ಲಿ ಕೆಪಿಎಂಇ ಮಸೂದೆಯಲ್ಲಿ ವೈದ್ಯರಿಗೆ ಜೈಲು ಶಿಕ್ಷೆ ಬದಲು ನೋಟಿಸ್ ನೀಡುವುದು ಸೇರಿದಂತೆ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿರುವುದರಿಂದ ವೈದ್ಯರು ಮುಷ್ಕರವನ್ನು ಕೈಬಿಟ್ಟಿದ್ದಾರೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಸ್ಯೆಯಿಂದ ಹೊರಬಂದಿದ್ದು, ಸೋಮವಾರ ಈ ಕುರಿತು ಮಸೂದೆ ಮಂಡನೆಯಾಗಲಿದೆ.