ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಬೆಂಗಳೂರು ಪ್ರವಾಹ ಹಾಗೂ ನಿರ್ವಹಣೆ ಬಗ್ಗೆ ಚರ್ಚೆ ಸಂದರ್ಭದಲ್ಲಿ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ,ರೇನ್ಬೋ ಬಡಾವಣೆ ನಿರ್ಮಾಣದಲ್ಲಿ ತಪ್ಪಾಗಿದೆ ಎಂದು ಸದನಕ್ಕೆ ತಿಳಿಸಿದರು. ನಗರದಲ್ಲಿ ಮಳೆ ನಿರ್ವಹಣೆ ವಿಷಯವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತಾನ್ನಾಡಿ,ನಾನು ಮಳೆ ಬಂದಂತ ಜಾಗಕ್ಕೆ ಬೋಟ್ ಮೂಲಕ ಹೋಗಿದ್ದೆ ಎಂದ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಶಾಸಕ ಅರವಿಂದ ಲಿಂಬಾವಳಿ,ಸರ್, ನೀವು ನಡೆದೆ ಹೋಗಬಹುದಿತ್ತು. ಬೋಟ್ ಮೂಲಕ ಹೋಗುವ ಅವಶ್ಯಕತೆ ಇರಲಿಲ್ಲ ಎಂದರು.
ಇದನ್ನೂ ಓದಿ : ರಾಜಕಾಲುವೆ ಸಮಸ್ಯೆ ಯಾವಾಗ ಸರಿ ಮಾಡುತ್ತೀರಿ? : ಶಾಸಕ ಕೃಷ್ಣೆಬೈರೇಗೌಡ ಪ್ರಶ್ನೆ
ನೀನು ಬಂದಿದ್ದರೆ ನಿನ್ನ ಜೊತೆ ಬರ್ತಿದ್ದೆ ಅಂದ ಸಿದ್ದರಾಮಯ್ಯ, ನಿಮಗೆ ಮಿಸ್ ಲೀಡ್ ಮಾಡೋರು ಸುತ್ತ ತುಂಬಾ ಜನ ಇದ್ದಾರೆ ಎಂದು ಲಿಂಬಾವಳಿ ಪ್ರತ್ಯುತ್ತರ ನೀಡಿದರು. ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ,ಮಾತಾನ್ನಾಡಿದ ಸಿದ್ದರಾಮಯ್ಯ,ಅಲ್ಲಪ್ಪ ಬೋಟ್ ನಿಮ್ಮನ್ನು ಕರೆದುಕೊಂಡು ಹೋದ ಪುಣ್ಯಾತ್ಮ ಯಾರಪ್ಪ ಎಂದು ಸಿದ್ದರಾಮಯ್ಯಗೆ ಕಿಚಾಯಿಸಿದರು.ನಾನು ಮಹಾದೇವಪುರ ಕ್ಷೇತ್ರಕ್ಕೆ ನಡೆದು ಹೋಗಿದ್ದೆ.ನೀವು ಬೋಟ್ ಹೋಗಿದ್ರಿ.ಒಂದುವರೆ ಅಡಿ ನೀರಲ್ಲಿ ಬೋಟ್ ಮೂಲಕ ಹೋಗಿದ್ರಿ ಎಂದು ಸಿಎಂ ವ್ಯಂಗ್ಯ ಮಾಡಿದರು.
ಇದನ್ನೂ ಓದಿ : ಕರ್ನಾಟಕ - ಕೇರಳ ಗಡಿ ಭಾಗದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ: ಗೃಹ ಸಚಿವ ಆರಗ ಜ್ಞಾನೇಂದ್ರ
ನಂತರ ಮಾತಾನ್ನಾಡಿದ ಲಿಂಬಾವಳಿ, ಸಿದ್ದರಾಮಯ್ಯ ಮತ್ತು ಸಿಎಂ ಬರುವ ಎರಡು ದಿನ ಮೊದಲು ಅಲ್ಲಿ ನೀರು ಇದ್ದಿದ್ದು ನಿಜ.ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದು ಸತ್ಯ. ವಿಚಾರ ಗಂಭೀರ ಇದೆ ಎಂದರು.ಆದರೆ, ಸಿದ್ದರಾಮಯ್ಯ ಹೋಗುವಾಗ ನೀರು ತಗ್ಗಿತ್ತು.ಆ ಲೇಔಟ್ ಮಾಡುವಾಗ ಮಿಸ್ಟೇಕ್ ಆಗಿದೆ.ಸೆಲೆಬ್ರಿಟಿಗಳೆ ಆ ಲೇಔಟ್ ನಲ್ಲಿ ಇದ್ದಾರೆ, ಈ ವೇಳೆ ಶಾಸಕ ಸತೀಶ್ ರೆಡ್ಡಿ ಮಧ್ಯೆ ಪ್ರವೇಶ ಮಾಡಿ,ಬೆಂಗಳೂರು ಬೆಳೆಯುತ್ತಿದೆ, ಕಾಂಕ್ರೀಟ್ ಕಾಡಗಿದೆ.ಕೆರೆಗಳಿಗೆ ನೀರು ಹೋಗುವುದು ನಿಂತು ಹೋಗಿದೆ.ಈ ವೇಳೆ ಸಿದ್ದರಾಮಯ್ಯ ಮಧ್ಯೆ ಪ್ರವೇಶ ಮಾಡಿ,ನಾನು ನನ್ನ ಬೋಟ್ ತೆಗೆದುಕೊಂಡು ಹೋಗಿದ್ದೆ,ನಾನೇಕೆ ಸುಳ್ಳು ಹೇಳಲಿ. ಐದು ಅಡಿ ನೀರು ನಿಂತಿತ್ತು,ಏನಪ್ಪ ಲಿಂಬಾವಳಿ ಎಂದು ಸಿದ್ದರಾಮಯ್ಯ ಅವರ ಶೈಲಿಯಲ್ಲಿ ಕೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.