ತೂಕ ಇಳಿಸಲು ಬೆಳಗಿನ ಉಪಾಹಾರ: ಪ್ರಸ್ತುತ ಬಹುತೇಕ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಳ. ಹೆಚ್ಚುತ್ತಿರುವ ತೂಕವು ಹಲವು ಕಾಯಿಲೆಗಳಿಗೆ ಮೂಲ ಎಂದರೆ ತಪ್ಪಾಗಲಾರದು. ಹಾಗಾಗಿಯೇ, ಜನರು ತೂಕವನ್ನು ನಿಯಂತ್ರಿಸಲು ಯೋಗ, ವ್ಯಾಯಾಮ ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಇನ್ನೂ ಕೆಲವರು ತೂಕವನ್ನು ಕಡಿಮೆ ಮಾಡುವ ಸಲುವಾಗಿ ಆಹಾರವನ್ನೂ ತ್ಯಜಿಸುತ್ತಾರೆ. ಇದರಿಂದಲೂ ನಿರೀಕ್ಷಿತ ಫಲಿತಾಂಶ ದೊರೆಯದೇ ನಿರಾಸೆಗೊಳ್ಳುವವರೇ ಹೆಚ್ಚು. ಆದರೆ, ನಿತ್ಯ ಬೆಳಗಿನ ಉಪಹಾರದಲ್ಲಿ ಕೆಲವು ಆಹಾರಗಳನ್ನು ಸೇವಿಸುವುದರಿಂದ ಬೊಜ್ಜು, ತೂಕವನ್ನು ಸುಲಭವಾಗಿ ಆರೋಗ್ಯಕರವಾಗಿ ಕರಗಿಸಬಹುದು. ಅಂತಹ ಆಹಾರಗಳ ಬಗ್ಗೆ ತಿಳಿಯೋಣ...
ತೂಕ ನಷ್ಟಕ್ಕೆ, ಬೆಳಗಿನ ಉಪಾಹಾರದಲ್ಲಿ ಇವುಗಳನ್ನು ತಪ್ಪದೇ ಸೇರಿಸಿ -
ಮೊಸರು, ಡ್ರೈ ಫ್ರೂಟ್ಸ್, ಹಣ್ಣುಗಳು ಮತ್ತು ಬೀಜಗಳು:
ಇದನ್ನು ಮಾಡಲು, ಒಂದು ಬಟ್ಟಲಿನಲ್ಲಿ ಅಗಸೆಬೀಜದ ಪುಡಿಯೊಂದಿಗೆ ಮೊಸರನ್ನು ಸೇರಿಸಿ.ಈಗ ಅದಕ್ಕೆ ಕತ್ತರಿಸಿದ ಸೇಬು, ದಾಳಿಂಬೆ, ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಅದನ್ನು ಸೇವಿಸಿ. ನೀವು ಇದನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಿದರೆ ಅದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- Heart Health: ಹೃದಯವನ್ನು ಹೆಲ್ದಿಯಾಗಿಡಲು ಈ ಪೇಯಗಳು ನಿಮ್ಮ ಆಹಾರದಲ್ಲಿರಲಿ
ಬಾಳೆಹಣ್ಣು, ದಾಲ್ಚಿನ್ನಿ, ಬಾದಾಮಿ ಸ್ಮೂಥಿ:
ಇದನ್ನು ಮಾಡಲು, ಒಂದು ಬಾಳೆಹಣ್ಣು, 4 ಬಾದಾಮಿ, ಒಂದು ಲೋಟ ಹಾಲು, ಎರಡು ಚಮಚ ಮೊಸರು, ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಸ್ಮೂಥಿ ಮಾಡಿ. ಈ ಸ್ಮೂಥಿಯನ್ನು ಸೇವಿಸಿ. ತೂಕ ಇಳಿಸುವಲ್ಲಿ ಬಾಳೆಹಣ್ಣು ತುಂಬಾ ಪ್ರಯೋಜನಕಾರಿ. ಏಕೆಂದರೆ ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ನಾರಿನಂಶವಿದೆ, ಆದ್ದರಿಂದ ನೀವು ಸ್ಥೂಲಕಾಯತೆಯಿಂದ ತೊಂದರೆಗೀಡಾಗಿದ್ದರೆ ಮತ್ತು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ನೀವು ಈ ಸ್ಮೂಥಿಯನ್ನು ಬೆಳಗಿನ ಉಪಾಹಾರದಲ್ಲಿ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ- ದೇಹದಲ್ಲಿ ಕಂಡು ಬರುವ ಈ ಲಕ್ಷಣಗಳು ವಿಟಮಿನ್ ಬಿ 12 ಕೊರತೆಯ ಚಿಹ್ನೆಗಳು
ಹಸಿರು ಸೇಬು ಮತ್ತು ಪಾಲಕ್ ಸ್ಮೂಥಿ-
ಪದಾರ್ಥಗಳು - ಹಸಿರು ಸೇಬು ಒಂದು, ಪಾಲಕ್ ಅರ್ಧ ಕಪ್, ಬಾದಾಮಿ ಹಾಲು ಅರ್ಧ ಕಪ್, ಒಂದು ಸಣ್ಣದಾಗಿ ಹೆಚ್ಚಿದ ಖರ್ಜೂರ, ಕಲ್ಲಂಗಡಿ ಬೀಜಗಳು ಒಂದು ಚಮಚ.
ತಯಾರಿಸುವ ವಿಧಾನ:
ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಮತ್ತು ಅದರಿಂದ ಪೇಸ್ಟ್ ಮಾಡಿ. ನಂತರ ಅದನ್ನು ಒಂದು ಬೌಲ್ ನಲ್ಲಿ ತೆಗೆದುಕೊಂಡು ಅದನ್ನು ಸೇವಿಸಿ. ಸೇಬು ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕಾಗಿ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.