ಜೇನುತುಪ್ಪ ಎಂಬುದು ಸಂಜೀವಿನಿಯಂತೆ ಪ್ರಭಾವ ಬೀರುತ್ತದೆ. ಆದರೆ ಇದು ಮಾಂಸಾಹಾರದ ಜೊತೆ ಸೇವಿಸಿದರೆ ವಿಷವಾಗಿ ಪರಿಣಮಿಸಬಹುದು.
ಮೈದಾ ಎಂಬುದು ಸಾಮಾನ್ಯವಾಗ ಆರೋಗ್ಯಕರ ಆಹಾರವಲ್ಲ ಎಂದು ಹೇಳುತ್ತೇವೆ. ಇದು ನಿಧಾನವಾಗಿ ಜೀರ್ಣವಾಗುವ. ಕಾರಣದಿಂ ಮಲಬದ್ಧತೆ ಉಂಟಾಗಬಹುದು. ಮಾಂಸದ ಜೊತೆ ಇದನ್ನು ತಿನ್ನುವುದು ಒಳ್ಳೆಯದಲ್ಲ.
ಕೆಲವರು ಶೀಘ್ರವಾಗಿ ಜೀರ್ಣವಾಗಬೇಕು ಎಂದು ಮಾಂಸಾಹಾರ ಸೇವಿಸಿದ ಬಳಿಕ ಮೊಸರು ತಿನ್ನುವುದುಂಟು. ಆದರೆ ಅದು ದೇಹಕ್ಕೆ ಒಳ್ಳೆಯದಲ್ಲ. ಹಾಲಿನಿಂದ ಮಾಡಿದ ಯಾವುದೇ ಉತ್ಪನ್ನವನ್ನು ಮಾಂಸಾಹಾರದ ಜೊತೆ ತಿನ್ನಬೇಡಿ.
ಇನ್ನು ಕೆಲವರು ಮಾಂಸಾಹಾರ ಸೇವಿಸಿದ ಬಳಿಕ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಅದು ದೇಹದ ಉಷ್ಣತೆಯನ್ನು ಹೆಚ್ಚು ಮಾಡಬಹುದು. ಅಷ್ಟೇ ಅಲ್ಲದೆ, ಜೀರ್ಣಕಾರಿ ಸಮಸ್ಯೆ, ನಿದ್ರಾಹೀನತೆ ಮತ್ತು ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ಇನ್ನು ಮಾಂಸಾಹಾರದ ಜೊತೆಗೆ ಗೆಡ್ಡೆ ಪದಾರ್ಥಗಳನ್ನು ಸೇವಿಸಬೇಡಿ. ಅದು ಜೀರ್ಣ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ.
ಇನ್ನು ಬೇಯಿಸಿದ ಮೂಲಂಗಿಯನ್ನು ಮಾಂಸದ ಜೊತೆ ತಿಂದರೆ, ರಕ್ತವು ವಿಷಕಾರಿಯಾಗುವ ಸಾಧ್ಯತೆ ಇದೆ. ಏಕೆಂದರೆ ಮೂಲಂಗಿ ಮತ್ತು ಮಾಂಸದಲ್ಲಿ ಹೆಚ್ಚಿದ ಪ್ರೋಟೀನ್ ಗಳಿರುತ್ತವೆ. ಅವರು ಒಂದಕ್ಕೊಂದು ಪ್ರತಿಕ್ರಿಯೆಯಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಇನ್ನು ಸೊಪ್ಪುಗಳನ್ನು ಮಾಂಸದ ಜೊತೆ ತಿಂದರೆ ಅಜೀರ್ಣ ಉಂಟಾಗುತ್ತದೆ.