ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಕುತೂಹಲ ಹೆಚ್ಚಿಸುವ #ಇಲೆವನ್ ಟಿಸರ್..!

ಇದು ಬರಿ ಇಲೆವನ್ ಅಲ್ಲ, ಸ್ಲ್ಯಾಶ್ #ಇಲೆವನ್. ಒಟ್ಟಿನಲ್ಲಿ ಹೆಸರಿಗೆ ತಕ್ಕಂತೆ ಇದು ಟ್ರೆಂಡ್ ಸೃಷ್ಟಿ ಮಾಡಲು ತಯಾರಾದ ಸಿನಿಮಾ ಎನ್ನಬಹುದು. 

Last Updated : Sep 16, 2018, 07:08 PM IST
ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಕುತೂಹಲ ಹೆಚ್ಚಿಸುವ #ಇಲೆವನ್ ಟಿಸರ್..! title=

ಬೆಂಗಳೂರು: ಇದು ಬರಿ ಇಲೆವನ್ ಅಲ್ಲ, ಸ್ಲ್ಯಾಶ್ #ಇಲೆವನ್. ಒಟ್ಟಿನಲ್ಲಿ ಹೆಸರಿಗೆ ತಕ್ಕಂತೆ ಇದು ಟ್ರೆಂಡ್ ಸೃಷ್ಟಿ ಮಾಡಲು ತಯಾರಾದ ಸಿನಿಮಾ ಎನ್ನಬಹುದು. ಹೊಸ ಹುಡುಗರ ಕೈಚಳಕದಲ್ಲಿ ಬರುತ್ತಿರುವ ಈ ಸಿನಿಮಾ ಈಗ ನಿಜಕ್ಕೂ ಸ್ಯಾಂಡಲವುಡ್ ನಲ್ಲಿ ಹೊಸ ಇಮೇಜ್ ಕ್ರಿಯೇಟ್ ಎಲ್ಲ ಸಾಧ್ಯತೆಯನ್ನು ಈಗ ಈ ಚಿತ್ರದ ಟ್ರೈಲರ್ ಮೇಕಿಂಗ್ ಕಟ್ಟಿಕೊಟ್ಟಿದೆ.

ಭಾನುವಾರಂದು ಬಿಡುಗಡೆಯಾಗಿರುವ ಈ ಇಲೆವನ್ ಚಿತ್ರ ಕಥೆಯನ್ನು ಸಂದೇಶ್ ಆರ್  ಹೆಣೆದಿದ್ದಾರೆ.ಈ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಿರುವ ಶ್ರೀ ಹರ್ಷ ಟ್ರೈಲರ್ ನಲ್ಲಿ ಎಲ್ಲೋ ಒಂದು ಕಡೆ ಕಿಚ್ಚ ಸುದೀಪ್ ರ ಹಾವಭಾವವನ್ನು ನೆನಪಿಸಿಕೊಡುತ್ತಾರೆ. ಅಭಿನಂದನ್ ಅರಸ್ ಅವರ ಬ್ಯಾನರ್ ನಿರ್ಮಾಣದಲ್ಲಿ ಸಿದ್ದವಾಗುತಿರುವ ಈ ಚಿತ್ರದ ತಾರಾಗಣದಲ್ಲಿ  ಶ್ರೀ ಹರ್ಷ, ರಾಜು ವೈಶ್ಯಾ, ರಾಹುಲ್ ಪ್ರಸಾದ್, ರಾಹುಲ್ ಸಿಂಗ್, ಅಶ್ವತ್ ಕದಂಬ, ರೂಪಾಶ್ರೀ ಮುಂತಾದ ಕಲಾವಿದರಿದ್ದಾರೆ.

ಚಿತ್ರಕಥೆ ಮತ್ತು ನಿರ್ದೇಶನ - ಸಂದೇಶ ಆರ್
ನಿರ್ಮಾಪಕ  - ಅಭಿನಂದನ್ ಅರಸ್
DOP - ಮನೋಜ್ ಮತ್ತು ಪ್ರಶಾಂತ್ ದಾಸ್
ಸಂಕಲನ - ರಂಜಿತ್ ಸೇತು
ಸಹಾಯಕ ನಿರ್ದೇಶಕ - ಅಮೋಘ ಎನ್ ಭಾರದ್ವಾಜ್ ಮತ್ತು ಚೇತನ್
ಸಂಗೀತ - ಆದಿಲ್ ನಡಾಫ್
DI - ಪ್ರಜ್ವಾಲ್  ಅರಸ್ 
ಮೇಕಪ್ - ಅಶ್ವತ್ ಕದಂಬ
ನಿರ್ದೇಶನ ವಿಭಾಗ - ಪವನ್ ಶೆಟ್ಟಿ, ಪುನಿತ್, ಮಧುಸೂಧನ್
ಮೇಕಿಂಗ್ - ಹರಿ ರಾಜು
ಕಲಾ ನಿರ್ದೇಶಕ - ರಾಜೇಶ್ ಮಾಧವನ್
ಕಾಸ್ಟ್ಯೂಮ್ ಡಿಸೈನರ್ - ಅರುಣ್ ಬ್ರ್ಯಾಂಡ್

ಹೀಗೆ ಇಡೀ ಯುವ ಪ್ರತಿಭೆಗಳ ತಂಡ ಕನ್ನಡದಲ್ಲಿ ಹೊಸ ಪ್ರಯತ್ನದೊಂದಿಗೆ ಚಿತ್ರ ನಿರ್ಮಾಣಕ್ಕೆ ಕೈಹಾಕಿದೆ. ಆದ್ದರಿಂದ ಚಂದನವನದ ಪ್ರೇಕ್ಷಕ ಪ್ರಭುಗಳು ಈ ಚಿತ್ರವನ್ನು ನೋಡಿ ಹರಸಬೇಕಾಗಿದೆ.
 

Trending News