ನಿರ್ಜನ ಮತ್ತು ಜನವಸತಿ ಇಲ್ಲದ ಸ್ಥಳದಿಂದ ಆಸ್ಟ್ರೇಲಿಯಾದ ಈ ಪ್ರದೇಶವು ಪ್ರಪಂಚದಾದ್ಯಂತ ಸಖತ್ ಸುದ್ದಿಯಾಗಿದೆ.
ನವದೆಹಲಿ: ಜಗತ್ತು ದೊಡ್ಡದಾಗಿದೆ. ವಿವಿಧ ಕಾರಣಕ್ಕೆ ಪ್ರಸಿದ್ಧವಾಗಿರುವ ಅಸಂಖ್ಯಾತ ಸ್ಥಳಗಳು ಈ ಭೂಮಿಯಲ್ಲಿವೆ. ಕೆಲವು ಪ್ರದೇಶ ಅಲ್ಲಿನ ಜನರ ಜೀವನಶೈಲಿಯಿಂದ ಪ್ರಖ್ಯಾತಿ ಗಳಿಸಿದ್ದರೆ, ಇನ್ನು ಕೆಲವು ಅಲ್ಲಿನ ವಿಚಿತ್ರ ಹಾಗೂ ನಿಗೂಢ ವಾತಾವರಣದಿಂದ ಕುಖ್ಯಾತಿ ಗಳಿಸಿವೆ. ಅದೇ ರೀತಿ ಈಗ ನಾವು ಜನರೇ ವಾಸಿಸದ ನಿರ್ಜನ ಪ್ರದೇಶದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಅಲ್ಲಿನ ಸರ್ಕಾರವು ಈ ಪ್ರದೇಶಕ್ಕೆ ಜನರಿಗೆ ಸಂಪೂರ್ಣ ನಿರ್ಬಂಧ ವಿಧಿಸಿದೆ. ಈ ಮೊದಲು ಇಲ್ಲಿ ವಾಸಿಸುತ್ತಿದ್ದ ಜನರಿಗೆ ಸರ್ಕಾರವೇ ಬೇರೆಡೆ ತೆರಳುವಂತೆ ಮನವಿ ಮಾಡಿಕೊಂಡಿತ್ತು. ಇಲ್ಲಿ ಉಸಿರಾಡುವ ಗಾಳಿಯಲ್ಲಿ ವಿಷವಿದೆ. ಹೀಗಾಗಿ ನೀವು ಈ ಪ್ರದೇಶದಲ್ಲಿ ಉಸಿರಾಡಿದ್ರೆ ಸಾಕು ಸಾವು ಗ್ಯಾರಂಟಿ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವರದಿಗಳ ಪ್ರಕಾರ ಆಸ್ಟ್ರೇಲಿಯಾದ ವಿಟ್ನೂಮ್ ಪಿಲ್ಬರಾ(Witnoom Pilbara) ಪ್ರದೇಶಕ್ಕೆ ಆಗಸ್ಟ್ 31ರಂದು ಜನರಿಗೆ ನಿರ್ಬಂಧ ಹೇರಲಾಯಿತು. ಈಗ ಇಲ್ಲಿ ಯಾರೂ ವಾಸಿಸುತ್ತಿಲ್ಲ. ವಾಸ್ತವವಾಗಿ ಈ ಸ್ಥಳವು ತುಂಬಾ ವಿಷಕಾರಿಯಾಗಿದೆಯಂತೆ. ಇಲ್ಲಿ ಯಾರಾದರೂ ಉಸಿರಾಡಿದದ್ರೆ ಕೂಡಲೇ ಸಾವನ್ನಪ್ಪುತ್ತಾರೆ.
ಈಗ ಈ ಪಟ್ಟಣವನ್ನು ನಕ್ಷೆಯಿಂದ ತೆಗೆದುಹಾಕುವ ಸಿದ್ಧತೆ ಬಹುತೇಕ ಪೂರ್ಣಗೊಂಡಿವೆ. ಗಣಿಗಾರಿಕೆ ಪ್ರದೇಶವಾದ ಕಾರಣ ಇಲ್ಲಿ ಹಲವು ಬಗೆಯ ವಿಷಕಾರಿ ಅನಿಲಗಳು ಸೋರಿಕೆಯಾಗುತ್ತಿವೆ. ಇದರಿಂದ ಕ್ರಮೇಣ ಜನರು ಸಾವನ್ನಪ್ಪುತ್ತಿದ್ದರು. ಈ Witnoom ಗಣಿಯನ್ನು ಆರೋಗ್ಯ ಸಮಸ್ಯೆ ಮತ್ತು ಹಲವಾರು ಸಾವುಗಳ ನಂತರ 1966ರಲ್ಲಿ ಮುಚ್ಚಲಾಯಿತು. ಇಲ್ಲಿ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಿದ್ದರೂ ಜನ ಮಾತ್ರ ಈ ಜಾಗ ಬಿಡಲು ಸಿದ್ಧರಿರಲಿಲ್ಲ.
Witnoom ಕ್ಲೋಸರ್ ಆಕ್ಟ್ನಡಿ ಆಗಸ್ಟ್ 31ರೊಳಗೆ ಈ ಸ್ಥಳವನ್ನು ಖಾಲಿ ಮಾಡುವಂತೆ ಜನರಿಗೆ ಆದೇಶಿಸಲಾಗಿತ್ತು. ಸ್ವಯಂಪ್ರೇರಿತವಾಗಿ ಊರು ತೊರೆಯಿರಿ ಇಲ್ಲವಾದಲ್ಲಿ ಕೆಲಸದಿಂದ ತೆಗೆದು ಹಾಕಲಾಗುವುದು ಎಂಬ ಎಚ್ಚರಿಕೆ ನೀಡಲಾಗಿತ್ತು. ಇದಾದ ಬಳಿಕವೂ ಜನರು ಜಾಗ ಖಾಲಿ ಮಾಡಿರಲಿಲ್ಲ. ಪರಿಣಾಮ ಇಲ್ಲಿ ವಾಸಿಸುತ್ತಿದ್ದ ಸುಮಾರು 2 ಸಾವಿರ ಜನರು ಸಾವನ್ನಪ್ಪಿದ್ದರು. ಇಲ್ಲಿ ವಾಸಿಸುವ ಪ್ರತಿ 10 ಜನರ ಪೈಕಿ ಒಬ್ಬರು ಸಾವನ್ನಪ್ಪುತ್ತಿದ್ದರು. ಹೀಗಾಗಿ ಕೂಡಲೇ ಈ ಸ್ಥಳ ಖಾಲಿ ಮಾಡುವಂತೆ ಆದೇಶಿಸಲಾಗಿತ್ತು.
2006ರಲ್ಲಿ ಆಸ್ಟ್ರೇಲಿಯಾ ಸರ್ಕಾರವು Witnoom ಪಟ್ಟಣದ ಹೆಸರು ತೆಗೆದುಹಾಕಲು ನಿರ್ಧರಿಸಿತು. 2007ರಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ಅಂತಿಮವಾಗಿ ಆಗಸ್ಟ್ 31ರಂದು ಈ ಸ್ಥಳದಲ್ಲಿ ವಾಸಿಸುತ್ತಿದ್ದ ಕೊನೆಯ ವ್ಯಕ್ತಿ ಜಾಗ ಖಾಲಿ ಮಾಡಿದರು. ಇದರೊಂದಿಗೆ ಈ ಸ್ಥಳವು ಇದೀಗ ಜನವಸತಿಯಿಲ್ಲದೆ ಸಂಪೂರ್ಣವಾಗಿ ನಿರ್ಜನವಾಗಿದೆ.
ಮಾನವ ನಿರ್ಮಿತ ವಿಪತ್ತು ಅಥವಾ ಇನ್ನಾವುದೇ ಕಾರಣಗಳಿಂದ ನಿರ್ಜನವಾಗಿರುವಂತಹ ಅನೇಕ ಸ್ಥಳಗಳು ಜಗತ್ತಿನಲ್ಲಿವೆ. ಇಂತಹ ನಿರ್ಜನ ಮತ್ತು ಜನವಸತಿ ಇಲ್ಲದ ಸ್ಥಳದಿಂದ ಆಸ್ಟ್ರೇಲಿಯಾದ ಈ ಪ್ರದೇಶವು ಪ್ರಪಂಚದಾದ್ಯಂತ ಸಖತ್ ಸುದ್ದಿಯಾಗಿದೆ.