ಮುಂಜಾನೆ ತಲೆನೋವಿಗೆ ಕಾರಣಗಳು ಮತ್ತು ಪರಿಹಾರಗಳು: ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ತೀವ್ರವಾದ ತಲೆನೋವು ಕಾಡುತ್ತದೆ. ಇದರಿಂದಾಗಿ ಇಡೀ ದಿನ ಬಳಲಿದ ಭಾವನೆ ಇರುತ್ತದೆ. ನೀವೂ ಸಹ ಅಂತಹವರಲ್ಲಿ ಒಬ್ಬರಾಗಿದ್ದರೆ, ಹುಷಾರಾಗಿರಿ. ಏಕೆಂದರೆ ಇದು ಬೇರೆ ರೋಗದ ಲಕ್ಷಣವೂ ಆಗಿರಬಹುದು. ತಜ್ಞರ ಪ್ರಕಾರ, ನಿಮ್ಮ ದೇಹವು ನಿರ್ಜಲೀಕರಣಗೊಂಡಿದ್ದರೂ ಸಹ ಮುಂಜಾನೆ ತಲೆನೋವು ಬಾಧಿಸುತ್ತದೆ. ಇದಲ್ಲದೆ, ನೀವು ಒತ್ತಡವನ್ನು ಹೊಂದಿದ್ದರೆ, ಹೆಚ್ಚು ಮದ್ಯ ಸೇವಿಸಿದ್ದರೆ ಅಥವಾ ಬಿಸಿಲಿನಲ್ಲಿ ದೀರ್ಘಕಾಲ ಇದ್ದರೂ ಮರುದಿನ ಬೆಳಿಗ್ಗೆ ಎದ್ದ ಕೂಡಲೇ ತಲೆನೋವು ನಿಮ್ಮನ್ನು ಕಾಡಬಹುದು. ಮುಂಜಾನೆ ತಲೆನೋವಿಗೆ ಕಾರಣ ಹಲವು. ಆದರೆ, ನಿಮಗೆ ಬೆಳಿಗ್ಗೆ ಎದ್ದಾಕ್ಷಣ ಏಕೆ ತಲೆನೋವು ಬರುತ್ತಿದೆ ಎಂಬುದನ್ನು ಕಂಡು ಹಿಡಿಯುವುದರ ಜೊತೆಗೆ ಸೂಕ್ತ ಪರಿಹಾರವನ್ನೂ ಕಂಡುಕೊಳ್ಳುವುದು ಬಹಳ ಮುಖ್ಯವಾಗಿದೆ.
ಮೊದಲನೆಯದಾಗಿ ನಿಮಗೆ ಯಾವ ಸಂದರ್ಭದಲ್ಲಿ ತಲೆನೋವು ಕಾಡುತ್ತದೆ, ರಾತ್ರಿ ಸರಿಯಾಗಿ ನಿದ್ರೆ ಇಲ್ಲದಾಗಲೋ, ಹಿಂದಿನ ದಿನದ ಕೆಲಸದ ಒತ್ತಡವೋ ಅಥವಾ ಬೇರೆ ಇನ್ನಾವುದೇ ಕಾರಣವಿದೆಯೇ ಎಂಬುದರ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿ. ಬಳಿಕ ಅದನ್ನು ನಿವಾರಿಸುವತ್ತ ಕ್ರಮಗಳನ್ನು ಕೈಗೊಳ್ಳಿ.
ಮುಂಜಾನೆ ತಲೆನೋವಿಗೆ ಪರಿಹಾರ ಪಡೆಯುವುದು ಹೇಗೆ?
ಮುಂಜಾನೆ ತಲೆನೋವನ್ನು ಹೋಗಲಾಡಿಸಲು ನೀವು ಬಯಸಿದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ಕುರಿತಂತೆ ಅಮೇರಿಕನ್ ಮೈಗ್ರೇನ್ ಫೌಂಡೇಶನ್ ಕೆಲವು ಸಲಹೆಗಳನ್ನು ನೀಡಿದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಬೆಳಿಗ್ಗೆ ಎದ್ದ ಬಳಿಕ ಉಂಟಾಗುವ ತಲೆನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ.
* ನಿತ್ಯ ಸಾಕಷ್ಟು ನಿದ್ರೆ ಮಾಡಿ:
ಆರೋಗ್ಯವಾಗಿರಲು ನಿತ್ಯ ಆಹಾರ, ಪಾನೀಯದ ಜೊತೆಗೆ ನಿತ್ಯ 7-8ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ. ಇದಲ್ಲದೆ, ಪ್ರತಿದಿನ ನಿಗದಿತ ಸಮಯದಲ್ಲಿ ಮಲಗುವುದು ಅಗತ್ಯ. ನಿತ್ಯ ನೀವು ಸಾಕಷ್ಟು ನಿದ್ರೆ ಮಾಡುವುದರಿಂದ ಮುಂಜಾನೆ ತಲೆನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
* ವ್ಯಾಯಾಮ:
ಪ್ರತಿದಿನ ಸಾಕಷ್ಟು ನಿದ್ರೆಯ ಜೊತೆಗೆ ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ವ್ಯಾಯಾಮವು ಬೆಳಿಗ್ಗೆ ತಲೆನೋವಿನ ತೀವ್ರತೆ ಮತ್ತು ಆವರ್ತನವನ್ನು ಕಡಿಮೆ ಮಾಡುತ್ತದೆ.
* ಆರೋಗ್ಯಕರ ಡಯಟ್:
ನೀವು ಮುಂಜಾನೆ ತಲೆನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಬಯಸಿದರೆ, ನೀವು ಆರೋಗ್ಯಕರ ಆಹಾರವನ್ನು ಸೇವಿಸುವುದು ಸಹ ಬಹಳ ಮುಖ್ಯ. ಇದಲ್ಲದೆ, ನಿಮ್ಮ ದೇಹವನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳಿ. ಹೆಚ್ಚು ಹೆಚ್ಚು ನೀರು ಕುಡಿಯಿರಿ.
ಇದನ್ನೂ ಓದಿ- ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
* ಒತ್ತಡವನ್ನು ನಿಯಂತ್ರಿಸಿ:
ಧ್ಯಾನ ಮತ್ತು ಯೋಗ ಮಾಡಿದರೆ ಬೆಳಗಿನ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಪ್ರತಿದಿನ ಧ್ಯಾನ ಮತ್ತು ಯೋಗ ಮಾಡುವುದರಿಂದ ನಿಮ್ಮ ಮನಸ್ಸು ಏಕಾಗ್ರತೆಯಿಂದ ಕೂಡಿರುತ್ತದೆ. ಮನಸ್ಸು ಶಾಂತವಾಗಿ ಉಳಿಯುತ್ತದೆ. ಜೊತೆಗೆ ಒತ್ತಡವನ್ನೂ ನಿಯಂತ್ರಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.