ಪ್ರತಿಪಕ್ಷಗಳು ಒಂದಾದರೆ ಬಿಜೆಪಿಗೆ ಕಷ್ಟ ಕಾಲ ಬರಲಿದೆ- ಉತ್ತರಪ್ರದೇಶ ಸಚಿವ

ಬಿಜೆಪಿ ದೆಹಲಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಅಜಯ ಬಿಜೆಪಿ ಎನ್ನುವ  ಘೋಷಣೆಯೊಂದಿಗೆ ಸಿದ್ದವಾಗುತ್ತಿದ್ದರೆ, ಇತ್ತ ಕಡೆ ಯೋಗಿ ಸರ್ಕಾರದಲ್ಲಿ ಸಚಿವರಾಗಿರುವ ಓಂಪ್ರಕಾಶ ರಾಜ್ಬರ್ ಪ್ರತಿಪಕ್ಷಗಳು ಒಂದಾದರೆ  ಬಿಜೆಪಿಗೆ ಕಷ್ಟ ಕಾಲ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Last Updated : Sep 8, 2018, 05:44 PM IST
ಪ್ರತಿಪಕ್ಷಗಳು ಒಂದಾದರೆ ಬಿಜೆಪಿಗೆ ಕಷ್ಟ ಕಾಲ ಬರಲಿದೆ- ಉತ್ತರಪ್ರದೇಶ ಸಚಿವ  title=

ನವದೆಹಲಿ: ಬಿಜೆಪಿ ದೆಹಲಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಅಜಯ ಬಿಜೆಪಿ ಎನ್ನುವ  ಘೋಷಣೆಯೊಂದಿಗೆ ಸಿದ್ದವಾಗುತ್ತಿದ್ದರೆ, ಇತ್ತ ಕಡೆ ಯೋಗಿ ಸರ್ಕಾರದಲ್ಲಿ ಸಚಿವರಾಗಿರುವ ಓಂಪ್ರಕಾಶ ರಾಜ್ಬರ್ ಪ್ರತಿಪಕ್ಷಗಳು ಒಂದಾದರೆ  ಬಿಜೆಪಿಗೆ ಕಷ್ಟ ಕಾಲ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಓಂಪ್ರಕಾಶ ರಾಜ್ಬರ್ ಅವರು ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷದ ನಾಯಕರಾಗಿದ್ದು ಅಲ್ಲದೆ ಪ್ರಸ್ತುತ ಯೋಗಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಶನಿವಾರದಂದು ಮಾತನಾಡುತ್ತಾ ಓಂ ಪ್ರಕಾಶ್ " ಒಂದು ವೇಳೆ ಸಮಾಜವಾದಿ, ಬಿಎಸ್ಪಿ,ಕಾಂಗ್ರೆಸ್ ಒಂದಾಗಿದ್ದೆ ಆದಲ್ಲಿ ಬಿಜೆಪಿ ನಿಜಕ್ಕೂ ಕಷ್ಟ ಕಾಲ ಎದುರಾಗಲಿದೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಅವರು ಮಾತನಾಡಿ ತಮ್ಮ ಪಕ್ಷಕ್ಕೆ ಬಿಜೆಪಿಯೊಂದಿಗಿನ ಮೈತ್ರಿಯಿಂದ ಯಾವುದೇ ಲಾಭವಾಗಿಲ್ಲ ಎಂದು ತಿಳಿಸಿದರು.ಪಕ್ಷದ ಕಾರ್ಯಚಟುವಟಿಕೆಗಳನ್ನು ನಡೆಸಲು  ಪಕ್ಷದ ಆಫಿಸ್ ಸ್ಥಾಪನೆಗಾಗಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ದೊರತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. 

Trending News