ಬೆಂಗಳೂರು: ಬೆಂಗಳೂರಿನ ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಾದ ಕೆ.ಸಿ ಜನರಲ್ , ಜಯನಗರ, ವಿಕ್ಟೋರಿಯಾ ಸೇರಿದಂತೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸಾವಿರಾರು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಜಯನಗರ ಆಸ್ಪತ್ರೆಯಲ್ಲಿ ದಿನವೊಂದಕ್ಕೆ 1500 ಹೊರರೋಗಿಗಳು ಬರುತ್ತಾರೆ. ಆರಂಭದಲ್ಲಿ ನೋಂದಣಿ ಮಾಡಿಕೊಳ್ಳಲು ಹೊರರೋಗಿ ನೋಂದಣಿಯಲ್ಲಿ ಗಂಟೆಗಟ್ಟಲೆ ಕ್ಯೂ ನಿಂತು ರೋಗಿಗಳು ಬೇಸತ್ತು ಹೋಗುತ್ತಾರೆ. ನಂತರ ಶುಲ್ಕ ಕಟ್ಟುವುದಕ್ಕೂ ಉದ್ದನೆಯ ಕ್ಯೂ ಇರುತ್ತದೆ. ಸೋಮವಾರದಂದು (ಆಗಸ್ಟ್ 22) ಆಸ್ಪತ್ರೆ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಡಾ.ಸುಧಾಕರ್, ಉದ್ದನೆಯ ಕ್ಯೂ ನಿಲ್ಲುವುದನ್ನು ತಪ್ಪಿಸಲು ಆನ್ ಲೈನ್ ನೋಂದಣಿಯನ್ನು ಒಂದು ತಿಂಗಳಲ್ಲಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.
ಇಷ್ಟೇ ಅಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು 10 ರೂಪಾಯಿ, ಬಿಪಿಎಲ್ ಕಾರ್ಡ್ ದಾರರಿಗೆ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಬಹುದು. ಆದರೆ, ಡಿಜಿಟಲ್ ರೂಪದಲ್ಲಿ ಶುಲ್ಕ ಪಾವತಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ. ಇನ್ಮುಂದೆ ಜಾರಿ ಮಾಡಲಾಗುವುದು ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಇದನ್ನೂ ಓದಿ- ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರ, ಇನ್ನೊಂದು ವಾರ ಭಾರೀ ಮಳೆ ಮುನ್ಸೂಚನೆ
ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಲಂಚ ತೆಗೆದುಕೊಳ್ಳುವ ದೂರು ಸ್ವೀಕರಿಸಿರುವ ಹಿನ್ನಲೆಯಲ್ಲಿ ಸೋಮವಾರ (ಆಗಸ್ಟ್ 22) ಆರೋಗ್ಯ ಸಚಿವ ಡಾ ಸುಧಾಕರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,
ಆಸ್ಪತ್ರೆಗೆ ಬಂದು ನೋಂದಣಿಗೆ ಕಾಯುವ ಬದಲು, ಆನ್ ಲೈನ್ ಮೂಲಕ ಅಥವಾ ಫೋನ್ ಮೂಲಕ ಹೆಸರು ನೋಂದಾಯಿಸಿ, ಅಪಾಯಿಂಟ್ ಮೆಂಟ್ ಪಡೆದು ಅದೇ ಸಮಯಕ್ಕೆ ಬಂದು ವೈದ್ಯರನ್ನು ಭೇಟಿ ಮಾಡುವ ವ್ಯವಸ್ಥೆ ತರಲಾಗುತ್ತದೆ. ಅಪಾಯಿಂಟ್ಮೆಂಟ್ ಮಾಹಿತಿ ಮೊಬೈಲ್ ಗೆ ಬರುವ ಹಾಗೆ ಮಾಡಲಾಗುವುದು. ಒಂದು ತಿಂಗಳ ಗಡುವಲ್ಲಿ online payment, online registration ಪ್ರಾರಂಭ ಮಾಡಲಾಗುವುದು ಎಂದರು.
online payment, online registration ಸೌಲಭ್ಯ ಇನ್ನು ಮುಂದೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ಮೊದಲು ಜಿಲ್ಲಾ ಆಸ್ಪತ್ರೆಗಳಲ್ಲಿ ಜಾರಿಗೊಳಿಸಿ ನಂತರ ತಾಲೂಕು ಆಸ್ಪತ್ರೆಗಳಲ್ಲೂ ಆರಂಭಿಸಲಾಗುವುದು ಎಂದವರು ಇದೇ ವೇಳೆ ಭರವಸೆ ನೀಡಿದರು.
ಇದನ್ನೂ ಓದಿ- ಬೆಂಗಳೂರಲ್ಲಿ ಮತ್ತೊಂದು ದಾರುಣ ಘಟನೆ: ಮಗು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ
ನಂತರ ಜಯನಗರದ ಆಸ್ಪತ್ರೆಯ ಎಲ್ಲ ವಾರ್ಡ್ ಹಾಗೂ ರೋಗಿಗಳನ್ನು ಭೇಟಿ ಮಾಡಿ ಚಿಕಿತ್ಸೆಯ ಗುಣಮಟ್ಟ, ವೈದ್ಯರ ಲಭ್ಯತೆ ಹಾಗೂ ಆಸ್ಪತ್ರೆ ಸ್ವಚ್ಛತೆ, ಮೆಡಿಸಿನ್ ಗಳನ್ನು ಪರಿಸೀಲಿಸಿದರು. ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಸಿಗುತ್ತಿದೆ. ಮೇಲ್ನೋಟಕ್ಕೆ ಭ್ರಷ್ಟಾಚಾರದ ದೂರುಗಳೂ ಯಾವುದೂ ಇಲ್ಲ. ಪ್ರತೀ ವಾರ 3 ಬಾರಿ ಬಂದು ಡಯಾಲಿಸಿಸ್ ಮಾಡಿಕೊಳ್ಳುವವರೂ ಯಾವುದೇ ದೂರು ಹೇಳಿಲ್ಲ. ಆರ್ಥೋಪೆಡಿಕ್ಸ್, ಶಸ್ತ್ರಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಮೆಡಿಸಿನ್, ಸಿಟಿ ಸ್ಕ್ಯಾನ್ ಎಲ್ಲವನ್ನೂ ಪರಿಶೀಲಿಸಲಾಗಿದೆ.ಜ ಯನಗರದ ಆಸ್ಪತ್ರೆ ಕಟ್ಟಡ ಹಳೆಯದಾಗಿದೆ.5 ಕೋಟಿ ರೂ ಅನುದಾನ ಕೊಟ್ಟು ಅಭಿವೃದ್ಧಿಪಡಿಸಲಾಗುವುದು. NQS ಗೆ ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸಲಾಗುವುದು ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.